News Kannada
Tuesday, November 29 2022

ಕರಾವಳಿ

ಕಡಬದಲ್ಲಿ ನೆರೆ ಇಳಿದರೂ ರೈತನ ಆತಂಕ ಇಳಿಕೆಯಾಗಿಲ್ಲ - 1 min read

Photo Credit :

ಕಡಬದಲ್ಲಿ ನೆರೆ ಇಳಿದರೂ ರೈತನ ಆತಂಕ ಇಳಿಕೆಯಾಗಿಲ್ಲ

ಕಡಬ: ತಾಲ್ಲೂಕಿನಲ್ಲಿ ಕಳೆದ ರಾತ್ರಿಯಿಂದ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಬುಧವಾರ ಮಧ್ಯಾಹ್ನದ ಬಳಿಕ ಸಾಧಾರಣ ಮಳೆಯಾಗಿದೆ. ತಾಲ್ಲೂಕಿನಲ್ಲಿ ಹರಿಯುವ ಗುಂಡ್ಯ, ಕುಮಾರದಾರ ನದಿ ಪಾತ್ರದಲ್ಲಿ ಕಿಲೋ ಮೀಟರ್ ಗಟ್ಟಲೆ ಕೃಷಿ ಭೂಮಿ ಮುಳುಗಡೆಯಾಗಿತ್ತು. ಬುಧವಾರ ಬೆಳಗ್ಗೆ ನೆರೆ ನೀರು ಇಳಿಕೆಯಾದ ಬಳಿಕ ನದಿ ಸಮೀಪದ ಕೃಷಿ ತೋಟಗಳಲ್ಲಿ ಮಾತ್ರ ನೆರೆ ನೀರು ಆವರಿಸಿಕೊಂಡಿದೆ. 

ಕೃಷಿ ನಾಶದ ಆತಂಕದಲ್ಲಿ ರೈತ: ನದಿ ಪಾತ್ರದ ಹಲವೆಡೆ ಕೃಷಿ ಪ್ರದೇಶಕ್ಕೆ ನೆರೆ ನೀರು ಆವರಿಸಿ ಅವಾಂತರ ಸೃಷ್ಟಿಸಿದ ಬೆನ್ನಲ್ಲೇ ನೀರು ಇಳಿಕೆಯಾದ ಬಳಿಕವೂ ರೈತರಿಗೆ ಅಪಾಯ ಎದುರಾಗಿದೆ. ನೀರು ಇಳಿದ ಬಳಿ ತೋಟಗಳಲ್ಲಿ ಕೊಚ್ಚೆ ತುಂಬಿಕೊಂಡಿದೆ. ಅಡಿಕೆ, ತೆಂಗು, ಕೊಕ್ಕೋ ಗಿಡಗಳಿಗೆ ಹಾಕಲಾದ ಗೊಬ್ಬರ ನೀರಿನಲ್ಲಿ ಕೊಚ್ಚಿ ಹೋಗಿದೆ. ನೀರಿನ ಜತೆಗೆ ಬಂದ ಕಸ ಕಡ್ಡಿ, ಪ್ಲಾಸ್ಟಿಕ್ ಮೊದಲಾದ ನಿರುಪಯುಕ್ತ ವಸ್ತುಗಳು ತೋಟದಲ್ಲಿ ಉಳಿದುಕೊಂಡಿದೆ. ಇದನೆಲ್ಲ ವಿಲೇವಾರಿ ಮಾಡುವುದು ದೊಡ್ಡ ಸವಾಲಾಗಿದೆ. ಅಡಿಕೆ ಗಿಡಗಳಿಗೆ ಕೊಳೆ ರೋಗದ ಆತಂಕವೂ ಎದುರಾಗಿದೆ. ಆದರೆ ನಿರಂತರ ಮಳೆ ಔಷಧ ಸಿಂಪಡನೆಗೆ ಅವಕಾಶ ಮಾಡಿಕೊಡದ್ದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಈ ಬಾರಿಯ ನಿರಂತರ ಮಳೆ ರೈತರ ಆರ್ಥಿಕತೆಯನ್ನು ಕುಂಠಿತಗೊಳಿಸಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

 

ಹೊಸ್ಮಠ ಸೇತುವೆ ನಾಲ್ಕನೇ ದಿನವೂ ಬಂದ್: ಕಳೆದ ಭಾನುವಾರದಿಂದ ನೆರೆ ನೀರಿನಿಂದ ಮುಳುಗಡೆಯಾಗಿರುವ ಕಡಬ ಸಮೀಪದ ಹೊಸ್ಮಠ ಮುಳುಗು ಸೇತುವೆ ಬುಧವಾರವೂ ತೆರೆದುಕೊಳ್ಳದೆ ಸಂಚಾರಕ್ಕೆ ತೊಡಕಾಯಿತು. ಈ ಸೇತುವೆಯ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಸಂಪರ್ಕ ರಸ್ತೆ ಮಂಗಳವಾರ ನೆರೆ ನೀರಿನಿಂದ ಆವೃತವಾಗಿತ್ತು. ಬುಧವಾರ ನೀರು ಇಳಿಕೆಯಾದ ಪರಿಣಾಮ ಜನ ಸಂಚಾರಕ್ಕೆ ತೊಡಕಾಗಲಿಲ್ಲ. 

 

ಕುಸಿದ ಗುಡ್ಡ, ಅಡಿಕೆ ಗಿಡ ನೀರು ಪಾಲು: ಕುಮಾರದಾರ ನದಿ ಸಮೀಪದಲ್ಲಿದ್ದ ಕಡದ ತಾಲೂಕಿನ ಕೊಯಿಲ ಗ್ರಾಮದ ಓಕೆ ನಿವಾಸಿ ಬಾಲಕೃಷ್ಣ ಗೌಡ‌ ಎಂಬವರಿಗೆ ಸೇರಿದ ಗುಡ್ಡ ಕುಸಿದು ಗುಡ್ಡದಲ್ಲಿದ್ದ ಅಡಿಕೆ ತೋಟ ಭಾಗಶಃ ನೀರು ಪಾಲಾಗಿದೆ. ನದಿ ಸಮೀಪದಲ್ಲಿ ಇದ್ದ ಈ ಗುಡ್ಡ ನಿನ್ನೆ ತಡರಾತ್ರಿ ಕುಸಿದಿದೆ. ಘಟನೆಯಿಂದ ಗುಡ್ಡದ ಮೆಲ್ಭಾಗವನ್ನು ಸಮತಟ್ಟು ಗೊಳಿಸಿ ಅಡಿಕೆ ಗಿಡ ನಾಟಿ ಮಾಡಲಾಗಿತ್ತು. ಸುಮಾರು 20ಕ್ಕೂ ಹೆಚ್ಚು ಅಡಿಕೆ ಗಿಡ , ಗೇರು ಮರ ನೀರು ಪಾಲಾಗಿದೆ. ಕುಸಿದ ಜಾಗ ಅಪಾಯದಲ್ಲಿದ್ದು,  ಇನ್ನಷ್ಟು ಕುಸಿಯುವ ಹಂತದಲ್ಲಿದೆ. 

ಗಾಳಿ ಮಳೆಗೆ ಕುಂಡಾಜೆ ಶಾಲೆಗೆ ಹಾನಿ: ಬಾರಿ ಗಾಳಿ ಮಳೆಗೆ ರಾಮಕುಂಜ ಗ್ರಾಮದ ಕುಂಡಾಜೆ ಸರ್ಕಾರಿ ಹಿ.ಪ್ರಾ. ಶಾಲೆಯ ಸಲಕರಣೆಗಳು ಹಾರಿಹೋಗಿವೆ. ಶಾಲೆಯ ಸುಮಾರು 25 ಹಂಚುಗಳು ಹಾರಿಹೋಗಿದ್ದು, ಇನ್ನುಳಿದ ಸಲಕರಣೆಗಳು ಹಾನಿಯಾಗಿವೆ.

See also  ವಿವೇಕ್ ಟ್ರೇಡರ್ಸ್ ನಿಂದ ಆರೋಗ್ಯ,ಸ್ವಾದ ಮಿಶ್ರಿತ ಆಯುಷ್ ಚಿಕ್ಕಿ ಮಾರುಕಟ್ಟೆಗೆ ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

192
Shreyas Vittal

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು