ಆ ವ್ಯಕ್ತಿ ಕಳೆದ 20 ವರ್ಷಗಳ ಹಿಂದೆ ಕೌಟುಂಬಿಕ ಸಮಸ್ಯೆಯಿಂದ ಮನೆ ತೊರೆದಿದ್ದರು. ಎಲ್ಲರೂ ಇದ್ದರು ಸಹ ಅಪರಿಚಿತರಂತೆ ಅಸಹಾಯಕ ಸ್ಥಿತಿಯಲ್ಲಿದ್ರು. ಮನೆಯವರು ಹುಡುಕಿದ್ರು ಸಹ ಗುರುತು ಸಿಗದಷ್ಟರ ಮಟ್ಟಿಗೆ ಬದಲಾಗಿದ್ದರು. ಇದೀಗ ಕೊನೆಗೂ ಸಿನಿಮೀಯ ರೀತಿಯಲ್ಲಿ ಆ ವ್ಯಕ್ತಿ ಇಪ್ಪತ್ತು ವರ್ಷಗಳ ಬಳಿಕ ಮತ್ತೆ ತಮ್ಮ ಕುಟುಂಬ ಸೇರಿದ್ದಾರೆ.
ಈ ಹಿರಿ ಜೀವದ ಹೆಸರು ಅಶೋಕ. ಗೋಪಾಲ ಕೃಷ್ಣಮಠದಲ್ಲಿ ಗಂಟೆ ಬಾರಿಸುವ ಕೆಲಸ ಮಾಡುತ್ತಿದ್ದರು. ಅವರು ಗಂಟೆ ಗೋಪಾಲ ಎಂದೇ ಹೆಸರು ಪಡೆದಿದ್ದರು. 60 ವರ್ಷ ಪ್ರಾಯದ ಅಶೋಕ 20 ವರ್ಷದ ಹಿಂದೆ ಮನೆ ತೊರೆದಿದ್ದರು. ಬಳಿಕ ಮಾನಸಿಕ ಸ್ಥಿಮಿತ ಕಳೆದುಕೊಂಡು ಊರುರು ಸುತ್ತುತ್ತಿದ್ದರು. ಕೊನೆಗೆ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ರು. ಪಾರ್ಶ್ವವಾಯು ಪಿಡಿತರಾಗಿ ಸೊಂಟದ ಸಾಧ್ವಿನ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದರು. ಅವರ ಅಸಹಾಯಕ ಸ್ಥಿತಿಯನ್ನು ಗಮನಿಸಿದ ಉಡುಪಿಯ ಸಾಮಾಜಿಕ ಕಾರ್ಯಕರ್ತರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದರು. ಚೇತರಿಸಿಕೊಂಡ ಬಳಿಕ ತಮ್ಮ ಹೆಸರು, ಉಡುಪಿಯ ಪಣಿಯಾಡಿಯಲ್ಲಿ ನನ್ನ ಮನೆ ಎಂದು ಹೇಳಿದ್ದರು. ಈ ವಿಚಾರವನ್ನು ಫೇಸ್ಬುಕ್ನಲ್ಲಿ ನೋಡಿ ಬಾಂಬೆಯಲ್ಲಿದ್ದ ಮಕ್ಕಳು ಊರಿಗೆ ಒಡೋಡಿ ಬಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವರದಿ ನೋಡಿದ ಮುಂಬೈಯಲ್ಲಿ ಕೆಲಸದಲ್ಲಿ ಇರುವ ಈ ಹಿರಿ ಜೀವದ ಇರ್ವರು ಗಂಡು ಮಕ್ಕಳು, ತಮ್ಮ ತಂದೆ ಎಂದು ಖಾತ್ರಿ ಪಡಿಸಿಕೊಂಡು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಆ ಬಳಿಕ ಮುಂಬೈಯಿಂದ ಮಗ, ಬೆಂಗಳೂರಿನಿಂದ ಮಗಳು ಬಂದು ತಂದೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಕಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಯ ವ್ಯವಸ್ಥೆಗೊಳಿಸಿದ್ದಾರೆ. ತಮ್ಮ ತಂದೆಯನ್ನು ಮೂಲ ಮನೆ ಪಣಿಯಾಡಿಗೆ ಕರೆದುಕೊಂಡು ಬಂದಿದ್ದಾರೆ. ಅವರ ತಂದೆ-ತಾಯಿಯ ಭಾವಚಿತ್ರಕ್ಕೆ ತಂದೆ ಕೈಯಿಂದಲೇ ಹಾರರ್ಪಣೆ ಮಾಡಿಸಿದ್ದಾರೆ. ಉಡುಪಿ ಪಣಿಯಾಡಿಯಲ್ಲಿ ಇರುವ ಮೂಲ ಮನೆಯಲ್ಲಿ, ಸೂಕ್ತ ನೆಲೆಕಲ್ಪಿಸುವುದಾಗಿ ಹೇಳಿದ್ದಾರೆ.
ಅಶೋಕ ಅವರು ಮಾತ್ರ ಕುಟುಂಬದಿಂದ ದೂರವಾಗಿ ಸಂಬಂಧದ ಕೊಂಡಿಯೇ ಕಳೆದುಕೊಂಡಿದ್ದರು. ಸದ್ಯಕ್ಕೆ ಆಶೋಕ್ ಮನೆ ಮಂದಿಯ ಜೊತೆ ಮತ್ತೆ ಜೀವನ ಸಾಗಿಸುವಂತಾಗಿದೆ. ಈ ಕಾರ್ಯ ಮಾಡಿದ ಸಾಮಾಜಿಕ ಕಾರ್ಯಕರ್ತರಿಗೆ ಹ್ಯಾಟ್ಯಪ್ ಹೇಳಲೆಬೇಕು.