News Kannada
Tuesday, November 29 2022

ಕರಾವಳಿ

ನಿರಾಶ್ರಿತ ಕೇಂದ್ರಗಳಲ್ಲಿ ಸರಳ ಓಣಂ ಆಚರಿಸಿದ ಕೇರಳಿಗರು - 1 min read

Photo Credit :

ನಿರಾಶ್ರಿತ ಕೇಂದ್ರಗಳಲ್ಲಿ ಸರಳ ಓಣಂ ಆಚರಿಸಿದ ಕೇರಳಿಗರು

ಕಾಸರಗೋಡು: ಪ್ರತಿವರ್ಷ ಸಡಗರ, ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದ ಕೇರಳದ ಸಾಂಪ್ರದಾಯಿಕ ಓಣಂ ಹಬ್ಬ ಈ ಬಾರಿ ಪ್ರವಾಹದಿಂದಾಗಿ ಬಣಗುಟ್ಟುತ್ತಿದೆ. ಈ ಬಾರಿ ಕೇರಳ ಎದುರಿಸಿದ ಭೀಕರ ಪ್ರವಾಹದಿಂದ ಜನರ ಬದುಕೇ ಮೂರಾಬಟ್ಟೆಯಾಗಿದೆ. ರಾಜ್ಯವೇ ಪ್ರಕೃತಿ ವಿಕೋಪಕ್ಕೆ ನಲುಗಿರುವುದರಿಂದ. ಓಣಂ ಆಚರಣೆಗೆ ಮಂಕು ಕವಿದಿದೆ.

ಕೇರಳದ ಅತೀದೊಡ್ಡ ಹಬ್ಬವಾದ ಓಣಂ ದಿನ ಪ್ರತಿವರ್ಷ ಕೇರಳದ ಮನೆಗಳ ಅಂಗಳಗಳಲ್ಲಿ ಹೂವಿನ ರಂಗೋಲಿಯಿಂದ ಕಂಗೊಳಿಸುತ್ತದೆ. ಆದರೀಗ ಎಲ್ಲೆಡೆ ಬರೀ ನೀರು, ಕೆಸರು ತುಂಬಿದೆ. ಸಾಂಪ್ರದಾಯಿಕವಾಗಿ ಆಚರಿಸುತ್ತ ಬಂದಿರುವ ಹಬ್ಬವನ್ನು ಈ ಬಾರಿ ಸಂಪೂರ್ಣ ನಿಲ್ಲಿಸದಿದ್ದರೂ ಸರಳವಾಗಿ ಓಣಂ ಆಚರಿಸಲು ಮುಂದಾಗಿದ್ದಾರೆ. ಕೆಲವರು ಹಬ್ಬ ಆಚರಿಸುವ ಹಣವನ್ನು ಸಂತ್ರಸ್ತರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.

ಹಬ್ಬಕ್ಕಾಗಿ ಮನೆ ಅಲಂಕರಿಸಬೇಕಾಗಿದ್ದ ಮನೆ ಮಂದಿ ಮನೆಯೊಳಗಿದ್ದ ಕೆಸರು ತೆಗೆಯಲು ಹರ ಸಾಹಸ ಪಡುತ್ತಿದ್ದಾರೆ. ಕೇರಳದ ಬಹುತೇಕ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದ್ದವು. ಇಂದು ಈ ಮನೆಗಳ ಎದುರು ರಸ್ತೆಯುದ್ದಕ್ಕೂ ಟಿವಿ, ಲ್ಯಾಪ್‌ ಟಾಪ್‌, ಪೀಠೋಪಕರಣಗಳನ್ನು ಒಣಹಾಕಲಾಗಿದೆ. ಎರಡು ದಿನಗಳಿಂದ ತುಸು ಬಿಸಿಲು ಕಂಡಿರುವುದೇ ಇವರೆಲ್ಲರ ಬದುಕಿಗೆ ಹೊಸ ಹುರುಪು ತುಂಬಿದೆ. ಹೊಸ ವರ್ಷದ ಸಂಕೇತವಾದ ಓಣಂ ಈ ಬಾರಿ ಕೇರಳಿಗರಲ್ಲಿ ನಿರಾಸೆ ಮೂಡಿಸಿದೆ.

ಲಕ್ಷಾಂತರ ಮಂದಿ ಮನೆ ಆಸ್ತಿ ಪಾಸ್ತಿ ಕಳೆದು ಸಂತ್ರಸ್ತ ಕೇಂದ್ರಗಳಲ್ಲಿ ಉಳಿದುಕೊಳ್ಳುವಂತಾಗಿದೆ. ಆದರೆ ಇವರಿಗಾಗಿ ಸರಳ ಓಣಂ ನ್ನು ಜಿಲ್ಲಾಡಳಿತ ವತಿಯಿಂದ ಆಯಾ ಜಿಲ್ಲೆಗಳಲ್ಲಿ ನ ಸಂತ್ರಸ್ತ ಕೇಂದ್ರಗಳಲ್ಲಿ ಆಚರಿಸಲಾಯಿತು . ಬಳಿಕ ಓಣಂ ಸದ್ಯ ಬಡಿಸಲಾಯಿತು.
ಓಣಂ ಪೂಕಳಂ ಕೂಡಾ ವಿರಳವಾಗಿತ್ತು . ಕರ್ನಾಟಕದಿಂದ ಕೋಟ್ಯಾ೦ತರ ಮೌಲ್ಯದ ಹೂ ಕೇರಳಕ್ಕೆ ಬರುತ್ತಿದೆ. ಆದರೆ ಈ ಬಾರಿ ಕೆಲವೇ ಕೆಲ ಲೋಡ್ ಮಾತ್ರ ಬಂದಿದ್ದು , ಪ್ರಕೃತಿ ವಿಕೋಪ ಜನರ ಬದುಕನ್ನೇ ನಲುಗಿಸಿದೆ

See also  ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: ಎಬಿವಿಪಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು