ಕಾಸರಗೋಡು: ಚೆರ್ವತ್ತೂರಿನಿಂದ ನಾಪತ್ತೆಯಾಗಿದ್ದ ಯುವತಿ ಯನ್ನು ಪ್ರಿಯಕರನ ಜೊತೆ ಕೋಜಿಕ್ಕೋಡ್ ನಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಿಯಕರನ ಜೊತೆ ಪರಾರಿಯಾಗಲು ಅಪಹರಣ ನಾಟಕ ವಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಗಂಟೆಗಳ ಕಾಲ ಪೊಲೀಸರು ಮತ್ತು ನಾಗರಿಕರನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣ ಅಪಹರಣ ಸಾಕಷ್ಟು ಸುದ್ದಿ ಮಾಡಿತ್ತು. ಇಂದು ಬೆಳಿಗ್ಗೆ ಚಿತ್ತಾರಿಕ್ಕಾಲ್ ವೆಳ್ಳಡ್ಕದ ಮನೋಜ್ ರವರ ಪತ್ನಿ ಮಿನು (೨೩) ಪುತ್ರ ಸಾಯಿಕೃಷ್ಣ (೩) ನಾಪತ್ತೆಯಾಗಿದ್ದರು. ತನ್ನನ್ನು ತಂಡವೊಂದು ಅಪಹರಿಸುತ್ತಿರುವುದಾಗಿ ಈಕೆ ಪತಿ ಮನೋಜ್ ಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದರು. ಮಾತನಾಡುತ್ತಿದಂತೆ ಈಕೆ ಮೊಬೈಲ್ ಕರೆಯನ್ನು ಕಟ್ ಮಾಡಿದ್ದಳು. ಮನೆಯಿಂದ ಬೊಬ್ಬೆ ಕೇಳಿ ಬಂದಿತ್ತು.
ಸ್ಥಳೀಯರು ಧಾವಿಸಿ ಬರುವಷ್ಟರಲ್ಲಿ ಕಾರು ಸಹಿತ ಅಲ್ಲಿಂದ ಪರಾರಿಯಾಗಿದ್ದರು. ಮನೆಯೊಳಗೆ ವಸುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ತನಿಖೆಯನ್ನು ಚುರುಕುಗೊಳಿಸಲಾಗಿತ್ತು ಘಟನೆ ಸುದ್ದಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ . ಶ್ರೀನಿವಾಸ್ , ಕಾಞ೦ಗಾಡ್ ಡಿ ವೈ ಎಸ್ ಪಿ ಪಿ. ಕೆ ಸುಧಾಕರನ್ , ಚಿತ್ತಾರಿಕ್ಕಾಲ್ ಠಾಣಾ ಸಬ್ ಇನ್ಸ್ ಪೆಕ್ಟರ್ ರಂಜಿತ್ ರವೀಂದ್ರನ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲಪಿ ತನಿಖೆ ನಡೆಸಿದ್ದರು.
ತನಿಖೆಯನ್ನು ಹೊರ ಜಿಲ್ಲೆಗೂ ವಿಸ್ತರಿಸಲಾಗಿತ್ತು . ಈ ನಡುವೆ ಕೋಜಿಕ್ಕೋಡ್ ರೈಲ್ವೆ ನಿಲ್ದಾಣ ಪರಿಸರದಿಂದ ಪ್ರಿಯಕರನ ಜೊತೆ ಈಕೆಯನ್ನು ಪತ್ತೆ ಹಚ್ಚಿದ್ದು , ಕೋಜಿಕ್ಕೋಡ್ ಠಾಣಾ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಾರನ್ನು ಪಯ್ಯನ್ನೂರು ರೈಲ್ವೆ ನಿಲ್ದಾಣ ಪರಿಸರದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪೊಲೀಸರು ತನಿಖೆ ನಡೆಸಿದಾಗ ಈಕೆಗೆ ಪ್ರಿಯಕರ ಇರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕೋಟಯಂ ನಿವಾಸಿಯಾಗಿರುವ ಮಿನು ಮತ್ತು ಮನೋಜ್ ಪ್ರೇಮಿಸಿ ವಿವಾಹವಾಗಿದ್ದರು. ವಿವಾಹದ ಬಳಿಕ ಈಕೆ ಚೆರುಪ್ಪುಯ ಎಂಬಲ್ಲಿ ನ ಮಳಿಗೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಇಲ್ಲಿ ಬಿನು ಎಂಬ ಯುವಕನ ಜೊತೆ ಸಂಪರ್ಕ ಬೆಳೆಸಿಕೊಂಡ ಈಕೆ ಯನ್ನು ಕೆಲಸಕ್ಕೆ ತೆರಳದಂತೆ ಪತಿ ತಡೆದಿದ್ದರು. ಈ ಬೆಳವಣಿಗೆ ಬಳಿಕ ಅಪಹರಣ ನಾಟಕ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ