ಉಡುಪಿ: ದ್ವಾರಕೆಯ ಕೃಷ್ಣನಿಗೆ ಉಡುಪಿಯ ಈ ಕ್ಷೇತ್ರದಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಸಿದ್ದತೆ ಶುರುವಾಗಿದೆ. ಇನ್ನೇನು ಮುದ್ದಕೃಷ್ಣರ ಲೀಲೆ ಉಡುಪಿಯಾದ್ಯಂತ ರಾರಾಜಿಸಲಿವೆ. ಹುಲಿವೇಷಗಳು ಕುಣಿದು ಕುಪ್ಪಳಿಸಲಿವೆ. ಚೆಂಡೆ, ತಾಸೆಯ ಸದ್ದು ಕೇಳಿಬರಲಿದೆ. ಈ ಸಂಭ್ರಮಕ್ಕೆ ದೇಶ- ವಿದೇಶಗಳಿಂದ ಭಕ್ತರ ದಂಡೇ ಈ ಕ್ಷೇತ್ರಕ್ಕೆ ಹರಿದು ಬರಲಿದ್ದಾರೆ.
ಉಡುಪಿ ಅಂದಾಕ್ಷಣ ತಕ್ಷಣ ನೆನಪಿಗೆ ಬರುವುದೇ ಕೃಷ್ಣ ಮಠ. ಈ ಕೃಷ್ಣ ಮಠ ಇನ್ನು ಕೆಲವೇ ಗಂಟೆಗಳಲ್ಲಿ ತುಂಬಿ ತುಳುಕಲಿದೆ. ಸೆ. 2 ರಂದು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಅನೇಕ ಕಾರ್ಯಕ್ರಮಗಳು ನಡೆಯಲಿದೆ ಇದಕ್ಕಾಗಿ ಸರ್ವ ಸಿದ್ದತೆ ನಡೆಯುತ್ತಿದೆ..
800 ವರ್ಷಗಳ ಹಿಂದಿನ ಘಟನೆ ಇದು. ಮುತ್ತು ಹವಳ ಜೊತೆಗೆ ಮೂರ್ತಿಗಳನ್ನು ಹೇರಿಕೊಂಡು ದ್ವಾರಕೆಯಿಂದ ಬಂದ ಹಡಗೊಂದು ಉಡುಪಿಯ ಮಲ್ಪೆಯಲ್ಲಿ ಬಿರುಗಾಳಿಗೆ ಸಿಕ್ಕಿ ನೀರುಪಾಲಾಗುತ್ತದೆ. ಆ ಸಂದರ್ಭದಲ್ಲಿ ಈ ಹಡಗಿನಲ್ಲಿ ನಲ್ಲಿ ಕಡಗೋಲು ಶ್ರೀ ಕೃಷ್ಣನ ಮೂರ್ತಿಯಿತ್ತು. ಇದನ್ನ ಸ್ವತ: ದ್ವಾರಕೆಯಲ್ಲಿ ದೇವಕಿ, ರುಕ್ಮಿಣಿಯಿಂದ ಪೂಜೆ ಮಾಡ್ತಾ ಇದ್ರು. ದ್ವಾಪರಯುಗ ಸಮಾಪ್ತಿಯ ಸಮಯದಲ್ಲಿ ದ್ವಾರಕ ಮುಳುಗುವಾಗ ಈ ಮೂರ್ತಿಯನ್ನ ರುಕ್ಮಿಣಿ ಭೂಗತ ಮಾಡಿರುತ್ತಾಳೆ. ಈ ಮೂರ್ತಿ ಹಡಗಿನಲ್ಲಿ ಬರುತ್ತಿದೆ ಎಂಬ ತಮ್ಮ ದಿವ್ಯ ದೃಷ್ಟಿಯಿಂದ ನೋಡಿದಂತಹ ಮದ್ವಚಾರ್ಯರು ಹಡಗು ಮುಳುಗಿದ ಬಳಿಕ ಅದನ್ನು ಪತ್ತೆ ಹಚ್ಚಿ ಉಡುಪಿಗೆ ತಂದು ಪ್ರತಿಷ್ಟಾಪನೆ ಮಾಡುತ್ತಾರೆ. ಅಲ್ಲದೇ ಕೃಷ್ಣನ ಪೂಜೆಗಾಗಿ ಅಷ್ಟಮಠಾದೀಸರನ್ನು ನೇಮಿಸುತ್ತಾರೆ.
ಇದೀಗ ಈ ಕೃಷ್ಣ ಸನ್ನಿದಿಯಲ್ಲಿ ಕೃಷ್ಣನ ಜನ್ಮಾಷ್ಟಮಿದ ಸಂಭ್ರಮ. ಶ್ರೀ ಕೃಷ್ಣ ಹುಟ್ಟಿದ್ದು ಮಧ್ಯ ರಾತ್ರಿ.. ರೋಹಿಣಿ ನಕ್ಷತ್ರ, ಅಷ್ಟಮಿ ತಿಥಿಯಂದು. ಪಂಚಾಗದ ಪ್ರಕಾರ ಇವುಗಲಲ್ಲಿ ಯಾವುದಾದರೂ ಒಂದು ಘಟಸಿದರೆ ಅಷ್ಟಮಿ ನಡೆಸಲಾಗುತ್ತದೆ. ಹಾಗಾಗಿ ನಾಳೆ ಮದ್ಯರಾತ್ರಿ ಪರ್ಯಾಯ ಪಲಿಮಾರು ಶ್ರೀಗಳು ಶ್ರೀಕೃಷ್ಣನಿಗೆ ಆರ್ಘ್ಯ ಪ್ರದಾನ ಮಾಡಲಿದ್ದಾರೆ.
ಒಟ್ಟಿನಲ್ಲಿ ಉಡುಪಿಯಲ್ಲಿ ಈ ಬಾರಿ ಕೃಷ್ಣ ಜನ್ಮಾಷ್ಟಮಿ ಅದ್ಧೂರಿಯಿಂದ ನಡೆಯಲಿದೆ. ಈಗಾಗಲೇ ರಥಬಿದಿಯಲ್ಲಿ ಮೊಸರು ಕುಡಿಕೆಗೆ ಸಿದ್ದತೆ ಆರಂಭವಾಗಿದೆ. ಕೃಷ್ಣ ಮಠದ ಒಳಗೂ -ಹೊರಗೂ ಈ ಸಂಭ್ರಮ ಕಾಣಿಸಿಕೊಳ್ಳುವದರಿಂದ ಸಕಲ ಸಿದ್ದತೆ ಭರದಿಂದ ಸಾಗುತ್ತಿದೆ. ಹುಲಿವೇಷಧಾರಿಗಳು, ಮುದ್ದು ಕೃಷ್ಣ ವೇಷಾಧಾರಿಗಳು ಈ ಸಂಭ್ರಮವನ್ನು ಇಮ್ಮಡಿಗೊಳಿಸಲಿದ್ದಾರೆ.