ಬೆಂಗಳೂರು: ಇಲ್ಲಿನ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ ಇದೇ 5 ರಿಂದ 8ರ ವರೆಗೆ ‘ಸರ್ಕಾರಿ ಶಾಲೆ ಉಳಿಸಿ ಬೆಳೆಸಿ’ ಎಂಬ ವಿಶೇಷ ಆಂದೋಲನದ ರಥಯಾತ್ರೆಯು ನಡೆಯಲಿದೆ.
ಕ್ಲಬ್ ನ ಅಧ್ಯಕ್ಷರಾದ ಶ್ರೀ ಪ್ರಕಾಶ್ ಅಂಚನ್ ಅವರ ನೇತೃತ್ವದಲ್ಲಿ ರಥಯಾತ್ರೆಯು 5ರಂದು ಬೆಳಿಗ್ಗೆ 7ಕ್ಕೆ ಕರೆಂಕಿ ದೇವಾಲಯದ ಮಣಿಹಳ್ಳ ಬಂಟ್ವಾಳ ಪೇಟೆಯಾಗಿ ಬೈಪಾಸ್ ಮೂಲಕ ಹೊರಟು ಲೊರೆಟ್ಟೊ, ರಾಯಿ, ಸಿದ್ದಕಟ್ಟೆ, ಮೂಡಬಿದಿರೆ, ಅಲಂಗಾರು, ಬೆಳುವಾಯಿ, ಕಾರ್ಕಳ, ಉಡುಪಿ, ಬ್ರಹ್ಮಾವರ, ಸಾಸ್ತನ, ಕೋಟ, ತೆಕ್ಕಟ್ಟೆ, ಕೋಟೇಶ್ವರ, ಸಿದ್ದಾಪುರ, ಹೊಸಂಗಡಿ, ಹುಲಿಕಲ್, ಮಾಸ್ತಿಕಟ್ಟೆ, ಯಡುರ್, ಇಕ್ಕೆಬೈಲು ಮೂಲಕ ತೀರ್ಥಹಳ್ಳಿ ತಲುಪಲಿದೆ.
ಸೆ. 6ರಂದು ರಥಯಾತ್ರೆಯು ತೀರ್ಥಹಳ್ಳಿಯಿಂದ ಸಕ್ರೆಬೈಲು, ಶಿವಮೊಗ್ಗ, ತರಿಕೆರೆ, ಕಡೂರುಗೆ ಹೋಗಿ 7ರಂದು ಅಲ್ಲಿಂದ್ದ ಬಾಣವಾರ, ಬೆಂಡೆಕೆರೆ, ಅರಸಿಕೆರೆ, ತಿಪಟೂರು, ಬಿಲಿಗೆರೆ,ಯಗಚಿಕಟ್ಟೆ, ನಿಟ್ಟೂರು, ಗುಬ್ಬಿ, ಸಿಂಗನಹಳ್ಳಿ, ಹೆಗೆರೆ, ಮಂಡಿಪೇಟೆ, ತುಮಕೂರು, ದಾಬಸ್ ಪೇಟೆ, ಟಿ.ಬೇಗೂರು, ನೆಲಮಂಗಲ, ಯಶವಂತಪುರ, ಮಲ್ಲೇಶ್ವರಂ ಆಗಿ ಬೆಂಗಳೂರಿಗೆ ತಲುಪಲಿದೆ.
ಸೆ. 8ರಂದು ಬೆಳಿಗ್ಗೆ ಫ್ರೀಡಂ ಪಾರ್ಕ್ ನಿಂದ ವಿಧಾನಸೌಧಕ್ಕೆ ಕಾಲ್ನಡಿಗೆ ಜಾಥಾ ನಡೆಯಲಿದ್ದು ಸರ್ಕಾರಿ ಶಾಲೆಯ ಉಳಿವಿಗಾಗಿ ಎಲ್ಲರು ಕೈ ಜೋಡಿಸಬಹುದು ಎಂದು ಕ್ಲಬ್ ವತಿಯಿಂದ ಮನವಿ ಮಾಡಿದ್ದಾರೆ.