News Kannada
Thursday, August 18 2022

ಕರಾವಳಿ

ತಂದೆ-ತಾಯಿ ಸಾವು: ಮನನೊಂದು ಯುವಕ ಆತ್ಮಹತ್ಯೆ - 1 min read

ತಂದೆ-ತಾಯಿ ಸಾವು: ಮನನೊಂದು ಯುವಕ ಆತ್ಮಹತ್ಯೆ

ಮೂಡುಬಿದಿರೆ: ಯುವಕನೋರ್ವ ಮದ್ಯಪಾನಕ್ಕೆ ಕೀಟನಾಶಕ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರಿಂಜೆ ಗ್ರಾಮದ ಮಿತ್ತಪಂಜೊಟ್ಟು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.

ಮಿತ್ತಪಂಜೊಟ್ಟು ನಿವಾಸಿ ಅಶೋಕ್(29)ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೆಂದು ಗುರುತಿಸಲಾಗಿದೆ. ಈತ ಕೂಲಿ ಕಾರ್ಮಿಕನಾಗಿದ್ದು ತನ್ನ ಮಾವನ ಜತೆ ವಾಸವಾಗಿದ್ದ.

ಎಂಟು ವರ್ಷದ ಹಿಂದೆ ಈತನ ಅಪ್ಪ ಅಮ್ಮ ಮೃತಪಟ್ಟಿದ್ದು ಇದೇ ವಿಚಾರದಲ್ಲಿ ಈತ ಆಗಾಗ್ಗೆ ಮಾನಸಿಕವಾಗಿ ನೋವು ತೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿ ಈ ಹಿಂದೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.

ಮನೆಯಿಂದ ಬುಧವಾರ ಸಂಜೆ ಹೊರಹೋದವನು ರಾತ್ರಿ ಮನೆಗೆ ಹಿಂದಿರುಗಲಿಲ್ಲ. ಈತನ ತಮ್ಮ ಹುಡುಕಾಡಿದಾಗ ಮನೆ ಹತ್ತಿರದ ಪಂಪ್‍ಶೆಡ್ಡ ಬಳಿ ಬೈಕ್ ನಿಂತಿದ್ದು ಹತ್ತಿರದಲ್ಲಿ ಚಪ್ಪಲಿಗಳು ಕೂಡ ಇದ್ದ ಎನ್ನಲಾಗಿದೆ. ಅನುಮಾನಗೊಂಡು ಪಂಪ್‍ಶೆಡ್ ಒಳಗೆ ಇಣುಕಿ ನೋಡಿದಾಗ ಅಶೋಕ್‍ನ ಶವ ಪತ್ತೆಯಾಗಿದೆ ಎನ್ನಲಾಗಿದೆ.

ಪೊಲೀಸರ ಉಪಸ್ಥಿತಿಯಲ್ಲಿ ಶೆಡ್‍ನ ಬಾಗಿಲು ತೆರೆದು ಶವ ಮಹಜರು ನಡೆಸಲಾಯಿತು. ಮದ್ಯಪಾನಕ್ಕೆ ಕೀಟನಾಶಕ ಬೆರೆಸಿ ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

 

See also  ಸುಬ್ರಹ್ಮಣ್ಯದಲ್ಲಿ ೧೫ ಮನೆಗಳು ಮುಳುಗಡೆ: ಜನರಿಗೆ ಶಾಲೆಯಲ್ಲಿ ರಕ್ಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು