News Kannada
Tuesday, November 29 2022

ಕರಾವಳಿ

ಜಿಲ್ಲೆಯಲ್ಲಿ ಅದ್ಧೂರಿಯ ಗಣೇಶೋತ್ಸವ ಸಂಭ್ರಮ: ಹರಿದು ಬಂದ ಭಕ್ತ ಸಾಗರ - 1 min read

Photo Credit :

ಜಿಲ್ಲೆಯಲ್ಲಿ ಅದ್ಧೂರಿಯ ಗಣೇಶೋತ್ಸವ ಸಂಭ್ರಮ: ಹರಿದು ಬಂದ ಭಕ್ತ ಸಾಗರ

ಉಡುಪಿ: ಹಿಂದೂ ಸಂಪ್ರದಾಯದಲ್ಲಿ ಗಣೇಶ ಚತುರ್ಥಿ ಬಹಳ ಸಂಪ್ರದಾಯಬದ್ದವಾಗಿ, ವೈಭವದಿಂದ ಆಚರಿಸಲ್ಪಡುವ ಹಬ್ಬ. ವಿಘ್ನವಿನಾಶಕ, ಪ್ರಥಮಪೂಜಿತ, ಏಕದಂತ ಹೀಗೆ ಹಲವಾರು ನಾಮಗಳಿಂದ ಕರೆಯಲ್ಪಡುವ ಗಣಪತಿಯನ್ನು ವಿಶೇಷವಾಗಿ ಪೂಜಿಸಿ ಜನತೆ ಸಂಭ್ರಮಿಸಿದರು.

ತಾಲೂಕಿನ ಗುಡ್ಡಟ್ಟು ಜಲಾದಿವಾಸಿ ಗಣಪತಿ ದೇವಸ್ಥಾನ, ಬೇಳೂರಿನ ಕಲ್ಲುಗಣಪತಿ ದೇವಸ್ಥಾನ, ಮರವಂತೆ ಅರೆಹೊಳೆ ಗಣಪತಿ ದೇವಸ್ಥಾನ ಮೊದಲಾದೆಡೆ ಗಣೇಶ ಚತುರ್ಥಿ ಪ್ರಯುಕ್ತ ಭಕ್ತರ ದಂಡು ತುಂಬಿತ್ತು. ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತಿದೆ, ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿದ್ದು, ಗಣಪತಿ ಪ್ರತಿಷ್ಠಾಪನೆ ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಿತು.

ಪ್ರಮುಖ ಕಡೆಗಳಲ್ಲಿ ಕುಂದಾಪುರ ಸಂಚಾರಿ ಠಾಣೆಯ ನೇತೃತ್ವದಲ್ಲಿ ಸಂಚಾರಿ ವ್ಯವಸ್ಥೆಯನ್ನು ಹಾಗೂ ಕುಂದಾಪುರ ಪೊಲೀಸರ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

See also  ದ್ವಿಪತ್ನಿ ವಲ್ಲಭನ ವಿರುದ್ಧ ಲವ್ ಜಿಹಾದ್ ಆರೋಪ: ಮುಸ್ಲಿಂ ಪತ್ನಿಯಿಂದಲೇ ದೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

192
Shreyas Vittal

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು