ಮಂಗಳೂರು: ಗುಡ್ಡ ಕುಸಿದು ಹಳಿ ಮೇಲೆ ಮಣ್ಣು ಬಿದ್ದ ಪರಿಣಾಮ ಸೆ.20ರ ತನಕ ಬೆಂಗಳೂರು-ಮಂಗಳೂರು ರೈಲು ಸೇವೆಯನ್ನು ನಿರ್ಬಂಧಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಸುಬ್ರಮಣ್ಯ ಮತ್ತು ಸಕಲೇಶಪುರ ಮಧ್ಯೆ ರೈಲು ಹಳಿ ಮೇಲೆ ಬಿದ್ದಿರುವಂತಹ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು, ಇದರಿಂದ ಸಂಚಾರ ನಿರ್ಬಂಧಿಸಲಾಗಿದೆ ಎಂದು ಮೈಸೂರು ರೈಲ್ವೆ ವಲಯ ಪ್ರಕಟಣೆ ಹೇಳಿದೆ.
ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು-ಮಂಗಳೂರು ರೈಲು ಮಾರ್ಗಕ್ಕೆ ತೀವ್ರ ಹಾನಿಯಾಗಿತ್ತು.