ಉಡುಪಿ: ಕಳೆದ ವರ್ಷ ಕಟೀಲು ಸಮೀಪದ ಕಾವ್ಯ ಪೂಜಾರಿ ಎಂಬ ವಿದ್ಯಾರ್ಥಿನಿ ಆಳ್ವಾಸ್ ಕಾಲೇಜಿನಲ್ಲಿ ಆತ್ಮಹತ್ಯೆಯನ್ನು ಮಾಡಿಕೊಂಡು ದೊಡ್ಡ ಸುದ್ದಿಯಾಗಿತ್ತು. ಇದೀಗ ಆ ಆತ್ಮಹತ್ಯೆಯ ನಿಜಾಂಶ ಜನರಿಗೆ ತಿಳಿಯುವ ಮೊದಲೇ ಬೆಂಗಳೂರು ಮೂಲದ ವಿನುತಾ ಎಂಬ ವಿದ್ಯಾರ್ಥಿನಿ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಲ್ಲಿ ನಡೆಯುತ್ತಿರುವುದು ಆತ್ಮಹತ್ಯೆಯೋ ಆಥವಾ ಕೊಲೆಯೋ ಎಂಬ ಸ್ಪಷ್ಟ ಮಾಹಿತಿ ನಮಗೆ ಗೊತ್ತಾಗಬೇಕಾಗಿದೆ. ಸಾಂಸ್ಕೃತಿಕ ಹರಿಕಾರ ಎಂದೇ ಪ್ರಸಿದ್ಧಿಯನ್ನು ಪಡೆದಿರುವಂತಹ ಮೋಹನ್ ಆಳ್ವರವರ ವಿದ್ಯಾಸಂಸ್ಥೆಯಲ್ಲಿ ಹೆಣ್ಣು ಮಕ್ಕಳು ಸುರಕ್ಷಿತವಲ್ಲದಿರುವುದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿರುತ್ತದೆಂದು ಎಂದು ಉಡುಪಿ ಜಿಲ್ಲಾ ಕರವೇ ಅಧ್ಯಕ್ಷ ಅನ್ಸಾರ್ ಅಹ್ಮದ್ ಹೇಳಿದ್ದಾರೆ.
ಪದೇ ಪದೇ ನಡೆಯುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಅಸಹಜ ಸಾವಿನ ಬಗ್ಗೆ ರಾಜ್ಯ ಸರಕಾರ ಉನ್ನತ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ದಿನಾಂಕ 17-09-2018 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಉಡುಪಿಯಿಂದ ಮೂಡಬಿದ್ರೆಯ ತನಕ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಇದರ ವಿರುದ್ದ ಸಿಡಿದೇಳುವುದು ಪ್ರತಿಯೊಬ್ಬ ಕನ್ನಡಿಗನಿಗೆ ಅನಿವಾರ್ಯವಾಗಿರುತ್ತದೆ ಎಂದು ಕರವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್ ತಿಳಿಸಿದ್ದಾರೆ.