News Kannada
Friday, October 07 2022

ಕರಾವಳಿ

ಜಿಲ್ಲಾಧಿಕಾರಿ ವಿರುದ್ಧ ಗರಂ ಆದ ಸಚಿವೆ ಜಯಮಾಲಾ - 1 min read

Photo Credit :

ಜಿಲ್ಲಾಧಿಕಾರಿ ವಿರುದ್ಧ ಗರಂ ಆದ ಸಚಿವೆ ಜಯಮಾಲಾ

ಉಡುಪಿ: ಜಿಲ್ಲೆಯಲ್ಲಿ ಮರಳುಗಾರಿಕೆ ಪ್ರಾರಂಭಿಸಲು ವಿಳಂಬವಾಗಿದ್ದು, ಮರಳುಗಾರಿಕೆ ಶೀಘ್ರ ಆರಂಭಕ್ಕೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಉಸ್ತುವಾರಿ ಸಚಿವೆಯಾಗಿ ನಾನು ಸೂಚಿಸಿದ್ದೇನೆ, ಇಲ್ಲಿನ ಶಾಸಕರು ಒತ್ತಾಯಿಸಿದ್ದಾರೆ. ಆದರೆ ಡಿಸಿ ಸಮೀಕ್ಷೆ ಹೆಸರಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಅಸಮಾಧಾನ ವ್ಯಕ್ತಪಡಿಸಿದರು.

ಮರಳುಗಾರಿಕೆಗೆ ಸಂಬಂಧಿಸಿ ಸರ್ಕೀಟ್ ಹೌಸ್‌ನಲ್ಲಿ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಮರಳುಗಾರಿಕೆ ವಿಚಾರದಲ್ಲಿ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರ ಕಾರ್ಯವೈಖರಿಗೆ ಗರಂ ಆದರು. ಡಿಸಿ ಮರಳುಗಾರಿಕೆ ಸಂಬಂಧಿಸಿ ಸಹಾಯಕ ಆಯುಕ್ತರಿಗೆ ಸರ್ವೇ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸರ್ವೇ ಮೇಲೆ ಸರ್ವೇ ಮಾಡುತ್ತ ವಿಳಂಬ ಮಾಡಿದರೇ ಜನರಿಗೆ ಮರಳು ಎಲ್ಲಿಂದ ಕೊಡುವುದು. ಜನರ ಸಮಸ್ಯೆ ನಮಗೆ ಅರ್ಥವಾಗುತ್ತಿದೆ, ಜನರಿಗೆ ಏನೆಂದು ಉತ್ತರಿಸುವುದು, ನಮಗೂ ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ತಕ್ಷಣ ಮರಳುಗಾರಿಕೆ ಪ್ರಕ್ರಿಯೆ ಆರಂಭಿಸಲು ಬೇಕಾದ ಸಿದ್ಧತೆ ಮಾಡಿಕೊಡುವಂತೆ ಡಿಸಿಗೆ ಸೂಚಿಸುತ್ತೇನೆ ಎಂದರು.

ಗುರುವಾರದೊಳಗೆ ಮರಳುಗಾರಿಕೆ ಸರ್ವೇ ಆರಂಭಿಸದೇ ಇದ್ದರೇ ಜಿಲ್ಲೆಯ ಶಾಸಕರು, ಎಲ್ಲ ರಾಜಕೀಯ ಪಕ್ಷದವರು, ನಾಗರಿಕರು ಸೇರಿ ಅಹೋರಾತ್ರಿ ಧರಣಿ ನಡೆಸುವುದಾಗಿ ಶಾಸಕ ರಘುಪತಿ ಭಟ್, ವಿಧಾನ ಪರಿಷತ್ತು ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ, ಸಂಬಂಧಿತ ಇಲಾಖೆ ಅಧಿಕಾರಿಗಳ ನಿರ್ಲಕ್ಯ್ಷದಿಂದ ಮರಳು ದಿಣ್ಣೆ ಗುರುತಿಸುವ ಕೆಲಸ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ 3 ಸಾವಿರ ಬಸವ ವಸತಿ ಮನೆಗಳು ಮಂಜೂರಾಗಿದ್ದು, ಮನೆ ನಿರ್ಮಾಣಕ್ಕೆ ಸಮಸ್ಯೆಯಾಗುತ್ತಿದೆ. ಬಡವರಿಗೆ ಮನೆಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬುಧವಾರ ಒಳಗೆ ಎನ್‌ಐಟಿಕೆ ಮುಖೇನ ಸರ್ವೇ ಆರಂಭವಾಗಬೇಕು. ಇಲ್ಲದಿದ್ದರೇ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದರು.

See also  ಕಕ್ಕಿಂಜೆಯ ಯುವಕನಿಂದ ಮೋಸ: ಬೆಂಗ್ಳೂರಿನ ಯುವತಿಯಿಂದ ಹುಡುಕಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

192
Shreyas Vittal

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು