News Kannada
Tuesday, October 04 2022

ಕರಾವಳಿ

ಪ್ರವಾಸಿಗರಿಗೆ ಪಾಲಿಗೆ ದೊರಕಿದೆ ಬಂಪರ್ ಕೊಡುಗೆ; ಹೊಸ ಪ್ರವಾಸೋದ್ಯಮಕ್ಕೆ ಕಾಲಿಟ್ಟ ಉಡುಪಿ - 1 min read

Photo Credit :

ಪ್ರವಾಸಿಗರಿಗೆ ಪಾಲಿಗೆ ದೊರಕಿದೆ ಬಂಪರ್ ಕೊಡುಗೆ; ಹೊಸ ಪ್ರವಾಸೋದ್ಯಮಕ್ಕೆ ಕಾಲಿಟ್ಟ ಉಡುಪಿ

ಉಡುಪಿ: ಪ್ರತಿ ಋತುಗಳಿಗೆ ಅನುಗುಣವಾಗಿ ಕರಾವಳಿಯಲ್ಲಿ ಪ್ರವಾಸಿಗರಿಗೆ ಬರುವಂತೆ ಹಲವು ಸ್ಥಳಗಳಿವೆ. ಮಳೆಗಾಲ, ಬೇಸಿಗೆಕಾಲ ಹಾಗೂ ಚಳಿಗಾಲ. ಈ ಮೂರು ಕಾಲಕ್ಕೂ ತಕ್ಕಂತೆ ಕರಾವಳಿ ಹೇಳಿ ಮಾಡಿಸಿದಂತಿದೆ. ಮಳೆಗಾಲದಲ್ಲಿ ಭೋರ್ಗರೆಯುವ ಜಲಪಾತಗಳನ್ನು ಕಣ್ತುಂಬಿಕೊಂಡರೆ, ಬೇಸಿಗೆಯಲ್ಲಿ ಬೀಚ್ ಗಳ ಅಬ್ಬರ. ಕರಾವಳಿಯ ಸೊಬಗು ಹೇಳಿದಷ್ಟು ಮುಗಿಯಲ್ಲ.

ಮಳೆಗಾಲ ಮುಗಿದು ಬೇಸಿಗೆಯತ್ತ ಲಗ್ಗೆಯಿಟ್ಟಿರುವ ಕರಾವಳಿ, ಪ್ರವಾಸಿಗರಿಗೆ ಇನ್ನೊಂದು ಸರ್ಪ್ರೈಸ್ ಮುಂದಿಟ್ಟಿದೆ. ಪ್ರತಿ ಬಾರಿ ಕರಾವಳಿಯಲ್ಲಿ ಏನಾದರೂ ವಿಶೇಷತೆಯನ್ನು ಹುಡುಕಿಕೊಂಡು ಬರುವ ಪ್ರವಾಸಿಗರಿಗೆ ಹೊಸ ಅನುಭವ ನೀಡಲು ಮುಂದಾಗಿದೆ ಪ್ರವಾಸೋದ್ಯಮ ಇಲಾಖೆ. ಈ ತನಕ ಪ್ರವಾಸಿಗರಿಗೆ ದೂರದ ಕೇರಳದಲ್ಲಿ ಸಿಗುವ ಮಜಾ ಇನ್ನು ಮುಂದೆ ಉಡುಪಿಯಲ್ಲೂ ಸಿಗಲಿದೆ.

ಹೌದು, ಉಡುಪಿ ಪ್ರವಾಸಿಗರ ತಾಣ. ಉಡುಪಿಗೆ ಬರುವ ಜನ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಮಿಸ್ ಮಾಡೊದೇ ಇಲ್ಲ. ಕೃಷ್ಣನಗರಿ ಉಡುಪಿಯಲ್ಲಿ, ಕೃಷ್ಣ ದರ್ಶನದ ಬಳಿಕ, ಮಲ್ಪೆ ಬೀಚ್, ಕಾಪು ಬೀಚ್, ಡೆಲ್ಟಾ ಬೀಚ್, ಸೈಂಟ್ ಮೇರೀಸ್ ದ್ವೀಪ ಹೀಗೆ ಒಂದಾ ಎರಡಾ, ಸಾಲು ಸಾಲು ಪ್ರವಾಸೋದ್ಯಮಕ್ಕೆ ಅವಕಾಶಗಳು.

ಆದರೆ ಈ ಬಾರಿ ಪ್ರವಾಸೋದ್ಯಮ ಹೊಸ ಕಲ್ಪನೆಯೊಂದಿಗೆ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಮುಂದಾಗಿದೆ‌. ಕೇರಳದಲ್ಲಿ ಅತ್ಯಂತ ಮನ್ನಣೆ ಪಡೆದ ಹೌಸ್ ಬೋಟುಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಮುಂದಾಗಿತ್ತು. ಬೇಸಿಗೆ ಹಾಗೂ ರಜಾ ದಿನಗಳನ್ನು ಕಳೆಯಲು ಜನ ಕೇರಳದತ್ತ ಮುಖ ಮಾಡುತ್ತಿದ್ದರು. ಕೇರಳಕ್ಕಿಂತ ಶುದ್ಧ ಹಾಗೂ ಮನೋಹರವಾದ ಹಿನ್ನೀರಿನ ರಸದೌತಣ ಉಡುಪಿಯಲ್ಲಿದೆ. ಈ ನಿಟ್ಟಿನಲ್ಲಿ ಕೇರಳ ಮಾದರಿಯ ಹೌಸ್ ಬೋಟ್ ಗಳನ್ನು ಉಡುಪಿಯಲ್ಲಿ ಪ್ರಾರಂಭಿಸಲು ಹೊರಟ ಪ್ರವಾಸೋದ್ಯಮ ಇಲಾಖೆ, ಇದಕ್ಕೆ ನಾಂದಿ ಹಾಡಿದೆ.

ತಿರುಮಲ ಕ್ರ್ಯೂಸ್, ಪ್ರವಾಸೋದ್ಯಮ ಇಲಾಖೆಯ ಪರವಾನಗೆಯೊಂದಿಗೆ ಹಿನ್ನೀರಿನ ಸೊಬಗನ್ನು ನೀಡಲು ಹೊರಟಿದೆ. ಜಿಲ್ಲೆಯ ಕೋಡಿಬೆಂಗ್ರೆಯಲ್ಲಿರುವ ಸ್ವರ್ಣಾ ನದಿ, ಸೀತಾ ನದಿ ಹಾಗೂ ಎಣ್ಣೆಹೊಳೆ ಒಂದಾಗಿ ಅರಬಿಸಮುದ್ರ ಸೇರುವ ತ್ರಿವೇಣಿ ಸಂಗಮ ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಪ್ರದೇಶ.

ಸ್ವರ್ಣಾ ನದಿಯ ಹಿನ್ನೀರಿನಲ್ಲಿ ತೇಲುತ್ತಾ ಸಂಚರಿಸುವ ತಿರುಮಲ ಕ್ರ್ಯೂಸ್ ಕರ್ನಾಟಕದ ಅತ್ಯಂತ ದೊಡ್ಡ ಹೌಸ್ ಬೋಟ್ ಆಗಿದೆ ಎಂದು ಅದರ ಮಾಲೀಕ ನಾಗರಾಜ್ ಬಿ. ಹೇಳುತ್ತಾರೆ. 120 ಅಡಿ ಉದ್ದ ಹಾಗೂ 20 ಅಡಿ ಅಗಲದ ಈ ಹೌಸ್ ಬೋಟ್ ವರ್ಷಪೂರ್ತಿ ಪ್ರವಾಸಿಗರಿಗೆ ಮುಕ್ತವಾಗಿದೆ. ಇದಕ್ಕೆ ಪ್ರವಾಸೋದ್ಯಮದಿಂದ ಪರವಾನಗೆ ಲಭಿಸಿದೆ ಎಂದಿದ್ದಾರೆ ಅವರು.

ಸುಸಜ್ಜಿತವಾದ ಐದು ರೂಮ್ ಗಳನ್ನು ಹೊಂದಿರುವ ತಿರುಮಲ ಸುಮಾರು ಏಳು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೆಂಗ್ರೆ ಅಳಿವೆ, ತ್ರಿವೇಣಿ ಸಂಗಮ, ಸಂಜೆಯ ಸೂರ್ಯಾಸ್ತದ ಸೌಂದರ್ಯವನ್ನು ಪ್ರವಾಸಿಗರಿಗೆ ತೋರಿಸುತ್ತದೆ ಎಂದು ಹೌಸ್ ಬೋಟ್ ಮಾಲಕ ಕೃಷ್ಣ ಕುಂದರ್ ಹೇಳಿದರು. ಒಂದು ವಿಶಾಲವಾದ ಸಭಾಂಗಣ, ಐದು ಬೆಡ್ ರೂಮ್ ಗಳನ್ನು ಹೊಂದಿರುವ ಈ ಹೌಸ್ ಬೋಡ್ ಅನ್ನು ಬ್ರಹ್ಮಾವರ ಸಮೀಪದ ಹಾರಾಡಿಯಲ್ಲಿ ತಯಾರಿಸಲಾಗಿದೆ. ಮದುವೆ, ಹುಟ್ಟುಹಬ್ಬದ ಪಾರ್ಟಿ, ಸಣ್ಣ ಸಭೆ ಮುಂತಾದವುಗಳಿಗೆ ಅವಕಾಶವಿದೆ ಎಂದು ಬೋಟ್ ಮಾಲಿಕರು ತಿಳಿಸಿದ್ದಾರೆ.

See also  500, 1000 ನೋಟ್ ಬಂದ್ ಎಫೆಕ್ಟ್- ಚಿಲ್ಲರೆ ಇಲ್ಲದೆ ವ್ಯವಹಾರವೇ ಸ್ಥಗಿತ

ರಜೆಯ ಮೋಜು, ಕಡಲ ತಡಿಲ ಸೌಂದರ್ಯದ ಜತೆಗೆ ಹಿನ್ನೀರ ಸೊಬಗು ಸವಿಯುವ ಆಸೆ ಉಂಟಾದರೆ ಕೆಮ್ಮಣ್ಣು ಕೋಡಿಬೆಂಗ್ರೆಯ ಸ್ವರ್ಣಾ ನದಿಯತ್ತ ಮುಖಮಾಡಿ ಪ್ರಕೃತಿಯ ಚೆಲುವನ್ನು ಕಣ್ತುಂಬಿಸಿಕೊಳ್ಳಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು