News Kannada
Monday, October 03 2022

ಕರಾವಳಿ

ಗಾಂಧಿನಗರ-ನಾಗಪಟ್ಟಣ ರಸ್ತೆ ದುರವಸ್ಥೆ ವಿರುದ್ಧ ಪ್ರತಿಭಟನೆ - 1 min read

Photo Credit :

ಗಾಂಧಿನಗರ-ನಾಗಪಟ್ಟಣ ರಸ್ತೆ ದುರವಸ್ಥೆ ವಿರುದ್ಧ ಪ್ರತಿಭಟನೆ

ಸುಳ್ಯ: ಅಂತಾರಾಜ್ಯ ರಸ್ತೆಗಳನ್ನು ಸಂಪರ್ಕಿಸುವ ಸುಳ್ಯ ಗಾಂಧೀನಗರ-ನಾಗಪಟ್ಟಣ ರಸ್ತೆಯ ದುರವಸ್ಥೆಯ ವಿರುದ್ಧ ಗುರುವಾರ ಪ್ರತಿಭಟನೆ ನಡೆಯಿತು. ನಗರ ಪಂಚಾಯಿತಿ ವ್ಯಾಪ್ತಿಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ದುಸ್ತರವಾಗಿದೆ. ಇದನ್ನು ವಿರೋಧಿಸಿ ಎಸ್‍ಡಿಪಿಐ ನೇತೃತ್ವದಲ್ಲಿ ಗಾಂಧಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ನಗರ ಪಂಚಾಯಿತಿ ಸದಸ್ಯ ಕೆ.ಎಸ್.ಉಮ್ಮರ್ ಸುಳ್ಯ ನಗರ ಪಂಚಾಯಿತಿಯಲ್ಲಿ ಆಡಳಿತ ಮತ್ತು ವಿಪಕ್ಷಗಳೆರಡೂ ನಿಷ್ಕ್ರೀಯವಾಗಿದೆ ಎಂದು ಆರೋಪಿಸಿದರು. ರಸ್ತೆ ಬದಿಯ ಚರಂಡಿ ನಿರ್ಮಾಣ ಸಂದರ್ಭದಲ್ಲಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ನಗರಕ್ಕೆ ನೀರು ಸರಬರಾಜು ಆಗುವ ಪೈಪುಗಳು ಒಡೆದು ನೀರು ಸರಬರಾಜು ಸ್ಥಗಿತವಾಗಿ ನೀರೆಲ್ಲ ಚರಂಡಿಯಲ್ಲಿ ಹರಿಯುತಿದೆ ಎಂದು ಹೇಳಿದರು.

ಎಸ್‍ಡಿಪಿಐ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಎಂ.ಎ.ರಫೀಕ್, ಕಾರ್ಯದರ್ಶಿ ಮುಸ್ತಫಾ ಎಂ.ಕೆ., ಮುಸ್ತಫಾ ಚೆಂಗಳ, ಅಬ್ದುಲ್, ಲತೀಫ್, ಕಬೀರ್, ಅಝೀಜ್ ಮತ್ತಿತರರು ನೇತೃತ್ವ ವಹಿಸಿದ್ದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರ ಪಂಚಾಯಿತಿ ಇಂಜಿನಿಯರ್ ಮನವಿ ಸ್ವೀಕರಿಸಿದರು. ಗಾಂಧೀನಗರ-ನಾಗಪಟ್ಟಣ ರಸ್ತೆ ಅಭಿವೃದ್ಧಿಗೆ ಅನುದಾನ ಇಲ್ಲ ಎಂದು ಪ್ಯಾಚ್ ವರ್ಕ್ ಮಾಡಲು ಕೇವಲ ಎರಡು ಲಕ್ಷ ರೂ ಅನುದಾನ ಇದೆ ಪ್ಯಾಚ್‍ವರ್ಕ್‍ನ್ನು ಮಳೆ ಬಿಟ್ಟ ನಂತರ ಅ.15ರ ನಂತರ ಪ್ರಾರಂಭಿಸುತ್ತೇವೆ ಎಂದರು. ಇಂಜಿನಿಯರ್‍ ಉತ್ತರದಿಂದ ಕೆರಳಿದ ಪ್ರತಿಭಟನಾಕಾರರು ಇಂಜಿನಿಯರ್‍ ನ್ನು ತರಾಟೆಗೆತ್ತಿಕೊಂಡರು.

ಮುಂದಿನ ಹತ್ತು ದಿನದಲ್ಲಿ ಅಂದರೆ ಅ.7ರ ಒಳಗೆ ರಸ್ತೆ ದುರಸ್ಥಿ ಮತ್ತು ನೀರು ಸರಬರಾಜು ವ್ಯವಸ್ಥೆ ಸರಿಪಡಿಸದಿದ್ದರೆ ಅ.8ರಂದು ನಗರ ಪಂಚಾಯಿತಿ ಮುಂಭಾಗದಲ್ಲಿ ಮತ್ತು ಗಾಂಧಿ ನಗರದ ರಸ್ತೆಯಲ್ಲಿ ಏಕ ಕಾಲದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

See also  ಕೆರೆಗಳ ಮೂಲಕ ಜಲ ವೈಭವ- ಇದು ಕಾನಾವು ಯಶೋಗಾಥೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು