News Kannada
Tuesday, October 04 2022

ಕರಾವಳಿ

ಅಕ್ಟೋಬರ್ ನಲ್ಲಿ ಜಪಮಾಲೆ ಮಾತೆಯ ವಾರ್ಷಿಕೋತ್ಸವ - 1 min read

Photo Credit :

ಅಕ್ಟೋಬರ್ ನಲ್ಲಿ ಜಪಮಾಲೆ ಮಾತೆಯ ವಾರ್ಷಿಕೋತ್ಸವ

ಮಂಗಳೂರು: ಕಥೋಲಿಕ ಧರ್ಮಸಭೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಜಪಮಾಲೆ ಮಾತೆಯ ಭಕ್ತಿಯಾಚರಣೆಯನ್ನು ಆಚರಿಸಲಾಗುವುದು ಎಂದು ತೀರ್ಮಾನಿಸಲಾಯಿತು. ಅಕ್ಟೋಬರ್ 4ರಂದು ಮಂಗಳೂರು ಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಅ.ವಂ.ಡಾ. ಎಲೋಶಿಯಸ್ ಪಾವ್ಲ್ ಡಿ ಸೋಜ ಅವರು ವೆಲೆನ್ಸಿಯಾ ದೇವಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.

ಮಂಗಳೂರಿನ ರೊಸಾರಿಯೊ ಚರ್ಚ್ ಸ್ಥಾಪನೆಗೊಂದು 450 ಸಂವತ್ಸರಗಳು ತುಂಬುವ ಸಂದರ್ಭದಲ್ಲಿ 2017-2018 ವರುಷವನ್ನು ಮಂಗಳೂರು ಧರ್ಮಪ್ರಾಂತ್ಯಕ್ಕೆ ಜಪಮಾಲೆ ಮಾತೆಯ ವರುಷ ಎಂದು ಸಾರಲಾಗಿದೆ. ಈ ಹಿನ್ನೆಲೆಯಲ್ಲಿ ಸಂತ ಆಂತೋನಿ ಆಶ್ರಮ ಜೆಪ್ಪು; ಸಂತ ವಿನ್ಸೆಂಟ್ ಫೆರೆರ್ ದೇವಾಲಯ ವೆಲೆನ್ಸಿಯಾ, ಸಂತ ಯೊಸೆಫ್ ದೇವಾಲಯ ಜೆಪ್ಪು ಮತ್ತು ಸಂತ ರೀತ ದೇವಾಲಯ ಕಾಸ್ಸಿಯಾ ಇವರ ನೇತ್ರತ್ವದಲ್ಲಿ ಜಪಮಾಲೆ ಮಾತೆಯ ಹಬ್ಬವನ್ನು ಆಯೋಜಿಸಲಾಗಿದೆ.’

ನಂತರ ಮಂಗಳೂರಿನ ಮೇಯರ್ ಭಾಸ್ಕರ ಮೊಯಿಲಿ ಇವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ವೆಲೆನ್ಸಿಯಾ ದೇವಾಲಯದಿಂದ ಮೆರವಣಿಗೆ ಜೆಪ್ಪು ಸಂತ ಆಂತೋನಿ ಆಶ್ರಮ ತನಕ ಸಾಗುತ್ತದೆ. ಮೆರವಣಿಗೆಯಲ್ಲಿ ಮಾತೆ ಮರಿಯಮ್ಮನವರು ಕಾಣಿಸಿಕೊಂಡ ದೃಶ್ಯವಾಳಿಗಳು ಹಾಗೂ ಅಲಂಕರಿಸಿದ ಮಾತೆ ಮರಿಯಮ್ಮನವರ ಪ್ರತಿಮೆಯನ್ನು ಭಕ್ತಿಪೂರ್ವಕವಾಗಿ ತರಲಾಗುವುದು. ದಾರಿಯುದ್ದಕ್ಕೂ ಭಕ್ತಾಧಿಗಳು ಜಪಮಾಲೆಯ ಭಕ್ತಿಯನ್ನು ಅನುಸರಿಸುವರು. ಆಶ್ರಮದಲ್ಲಿ ಕುಟುಂಬ ಪ್ರಾರ್ಥನೆಯ ಮಹತ್ವದ ಬಗ್ಗೆ ಪ್ರವಚನೆ ಇರುತ್ತದೆ. ಹಾಗೂ ಮಾತೆ ಮರಿಯಮ್ಮನವರ ಗೌರಾವಾರ್ಥ ಭಕ್ತಿ-ಗೀತೆಗಳನ್ನು ಹಾಡಲಾಗುವುದು.

ಈ ವಾರ್ಷಿಕೋತ್ಸವದಲ್ಲಿ ಪ್ರಶಾಂತ್ ನಿವಾಸ್ ಜೆಪ್ಪು, ಹೋಲಿ ರೋಸರಿ ಕಾನ್ವೆಂಟ್ ಜೆಪ್ಪು, ಜೆರೋಸ ಕಾನ್ವೆಂಟ್ ಜೆಪ್ಪು, ರೋಶನಿ ನಿಲಯ ವಾಲೆನ್ಸಿಯಾ, ಚೆಶಯರ್ ಹೋಮ್ ಕಂಕನಾಡಿ ಸಹಿತ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ.

See also  ಸೂರಿಕುಮೇರು ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು