News Kannada
Monday, September 26 2022

ಕರಾವಳಿ

ಬೆಳ್ತಂಗಡಿ: ಔಷಧ ವ್ಯಾಪಾರಸ್ಥರ ಸಂಘದ ದಶಮಾನೋತ್ಸವ - 1 min read

Photo Credit :

ಬೆಳ್ತಂಗಡಿ: ಔಷಧ ವ್ಯಾಪಾರಸ್ಥರ ಸಂಘದ ದಶಮಾನೋತ್ಸವ

ಬೆಳ್ತಂಗಡಿ: ಕ್ರೀಯಾಶೀಲತೆಯಿಂದ ತಾಲೂಕು ಔಷಧ ವ್ಯಾಪಾರಸ್ಥ ಸಂಘವು ಜನರಿಗೆ ನೆರವು ನೀಡುತ್ತಿರುವುದು ಅನುಕರಣೀಯವಾಗಿದೆ ಎಂದು ಶಾಸಕ ಹರೀಶ ಪೂಂಜ ಹೇಳಿದರು.

ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ದಶಮಾನೋತ್ಸವ ಆಚರಣೆಯ ಸಂದರ್ಭ ಭಾನುವಾರ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆದ ದಿವ್ಯಾಂಗರಿಗೆ ಹಾಗೂ ಅಶಕ್ತರಿಗೆ ಧನಸಹಾಯ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜನರು ವೈದ್ಯರನ್ನು ದೇವರಂತೆ ಗೌರವ ಭಾವನೆಯಿಂದ ನೋಡುತ್ತಿದ್ದು, ಅದೇ ಗೌರವವನ್ನು ಔಷಧ ವ್ಯಾಪಾರಸ್ಥರಿಗೂ ನೀಡುತ್ತಾರೆ. ತಾಲೂಕು ಔಷಧ ವ್ಯಾಪಾರಸ್ಥರ ಸಂಘವು ಕ್ರೀಯಾಶೀಲತೆಯಿಂದ ಸಮಾಜಕ್ಕೆ ನೆರವು ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಯಾವುದೇ ಕಷ್ಟಗಳ ಕುರಿತು ತಾನು ಶಾಸಕನಾಗಿ ಸಂಘದ ಸದಸ್ಯನಂತೆ ನೆರವು ನೀಡುವ ಕಾರ್ಯವನ್ನು ಮಾಡುತ್ತೇನೆ. ಜತೆಗೆ ಸಂಘದ ಕಟ್ಟಡಕ್ಕೆ ನಿವೇಶನ ಒದಗಿಸುವುದಕ್ಕೂ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಹರೀಶ್‍ಕುಮಾರ್ ಮಾತನಾಡಿ, ಔಷಧ ವ್ಯಾಪಾರಸ್ಥರು ತಮ್ಮ ವ್ಯಾಪಾರದ ಜತೆಗೆ ಜನಸೇವೆಯನ್ನೂ ಮಾಡುತ್ತಿರುವುದು ಪ್ರಶಂಸನೀಯ. ಜನತೆಗೆ ಆರೋಗ್ಯವೇ ದೊಡ್ಡ ಸಂಪತ್ತಾಗಿದ್ದು, ಅದನ್ನು ಕಾಪಾಡುವ ನಿಟ್ಟಿನಲ್ಲಿ ಔಷಧ ವ್ಯಾಪಾರಸ್ಥರ ಕೊಡುಗೆ ಪ್ರಮುಖವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಸಮ್ಮಾನಿಸಲಾಯಿತು. ನಿವೃತ್ತ ಸೈನಿಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ರಾಜ್ಯದ ಸಂಘದ ವತಿಯಿಂದ ತಾಲೂಕು ಸಂಘದ ಅಧ್ಯಕ್ಷ ಡಿ.ಜಗದೀಶ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಚ್, ಗೌರವಾಧ್ಯಕ್ಷ ಕೇಶವ ಭಟ್ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಸುವರ್ಣ ಕರ್ನಾಟಕ ರಾಜ್ಯ ಔಷಧ ಮತ್ತು ಸಗಟು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹರಿಕೃಷ್ಣ, ಕಾರ್ಯದರ್ಶಿ ಎಸ್.ಮಂಜುನಾಥ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಬಳಂಜ, ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಿ.ಎನ್.ಗೌಡ, ಉಪ ಔಷಧ ನಿಯಂತ್ರಕರು ಶಿವಕುಮಾರ್, ಸಹಾಯಕ ಔಷಧ ನಿಯಂತ್ರಕರು ರಮಾಕಾಂತ ಕುಂಟೆ, ಔಷಧ ಪರಿವೀಕ್ಷಕ ಧನಂಜಯ, ಸಂಘದ ಕೋಶಾಧಿಕಾರಿ ಗಣಪತಿ ಭಟ್ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಡಿ.ಜಗದೀಶ್ ಸ್ವಾಗತಿಸಿದರು. ಶಿಕ್ಷಕ ಅಜಿತ್‍ಕುಮಾರ್ ನಿರ್ವಹಿಸಿದರು.

See also  ಶಿಕಾರಿಗೆ ಹೋಗಿದ್ದ ಇಬ್ಬರ ಬಂಧನ: ಮೂವರು ಪರಾರಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು