News Kannada
Friday, October 07 2022

ಕರಾವಳಿ

ಕೊಲ್ಲೂರು ದೇವಾಲಯಕ್ಕೆ ಮಹಿಳೆ ಅಕ್ರಮ ಪ್ರವೇಶ - 1 min read

Photo Credit :

ಕೊಲ್ಲೂರು ದೇವಾಲಯಕ್ಕೆ ಮಹಿಳೆ ಅಕ್ರಮ ಪ್ರವೇಶ

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಕ್ಷ್ಮೀ ಮಂಟಪವನ್ನು ನಿನ್ನೆ ಮಹಿಳಾ ಅಧಿಕಾರಿಯೊಬ್ಬರು ಪ್ರವೇಶಿಸುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ಈ ವೀಡಿಯೋ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. ಉಡುಪಿ ಜಿಲ್ಲೆ ಬೈಂದೂರಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಒಳಗಿನ ವೀಡಿಯೋ ಇದು.

ಮೂಕಾಂಬಿಕಾ ಸನ್ನಿದಿಯ ಗರ್ಭಗುಡಿಯ ಹೊರಗಿರುವ ಲಕ್ಷ್ಮೀ ಮಂಟಪಕ್ಕೆ ಮಹಿಳೆಯೊಬ್ಬರು ಪ್ರವೇಶಿಸುವ ದೃಶ್ಯ. ಈ ಹಿಂದೆ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಉಮಾ ಅವರು ಈ ನವರಾತ್ರಿಯ ಸಂದರ್ಭ ಲಕ್ಷ್ಮೀ ಮಂಟಪ ಪ್ರವೇಶ ಮಾಡಿದ್ದಾರೆ. ಉಮಾ ಈ ಹಿಂದೆ ಅಧಿಕಾರಿಯಾಗಿದ್ದರು ಎಂಬ ಕಾರಣಕ್ಕೆ ಸುತ್ತಮುತ್ತ ಇದ್ದ ಕೆಲ ಅರ್ಚಕರು ಒಳ ಪ್ರವೇಶಿಸಲು ಅವಕಾಶ ಮಾಡಿದ್ದಾರೆ. ಆದ್ರೆ ಮತ್ತೊಂದು ಗುಂಪು ಇದಕ್ಕೆ ತಗಾದೆ ಎತ್ತಿದೆ.

ಅರ್ಚಕರು ಉಮಾ ಅವರನ್ನು ಒಳಗೆ ಬಿಟ್ಟದ್ದು ಸರಿಯಲ್ಲ ಅಂತ ಭಕ್ತರು ದೂರುತ್ತಿದ್ದಾರೆ. ನವರಾತ್ರಿಯ ಸಂದರ್ಭ ಕೊಲ್ಲೂರಲ್ಲಿ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯ ಇದೆ. ನವರಾತ್ರಿ ಮೊದಲ ದಿನ ಒಬ್ಬರಿಗೆ, ಎರಡೇ ದಿನ ಇಬ್ಬರಿಗೆ 9 ದಿನ 9 ಮಂದಿ ಗ್ರಾಮದ ಬ್ರಾಹ್ಮಣ ಮಹಿಳೆಯರಿಗೆ ಬಾಗಿನ ಕೊಡುವ ಅವಕಾಶ ಇಲ್ಲಿ ನಡೆದುಕೊಂಡು ಬಂದಿದೆ.

ಆ ಸಂದರ್ಭದಲ್ಲಿ ಮಾತ್ರ ಮಹಿಳೆಯರು ಲಕ್ಷ್ಮೀ ಮಂಟಪ ಪ್ರವೇಶಿಸಬಹುದು. ಆದ್ರೆ ವಿವಾದಿತ ಅಧಿಕಾರಿ ಉಮಾ ಅವರು ನವರಾತ್ರಿ ದೇವಸ್ಥಾನ ಭೇಟಿ ಸಂದರ್ಭದಲ್ಲಿ ಒಳ ಹೊಕ್ಕಿದ್ದು ಅಪಚಾರ ಆಗಿದೆ ಎಂಬುದು ಸದ್ಯದ ಆರೋಪ.

ಉಮಾ ಆಡಳಿತಾಧಿಕಾರಿಯಾಗಿದ್ದಾಗ ಅವರ ಅವಧಿಯಲ್ಲಿ ದೇವಸ್ಥಾನದಲ್ಲಿ ಬಹಳ ಅಕ್ರಮ ನಡೆದಿತ್ತು. ಹರಕೆ ನೀಡಿದ ಚಿನ್ನವನ್ನು ಅಡ ಇಟ್ಟು ದೇವಳದ ಸಿಬ್ಬಂದಿ ಗೋಲ್ ಮಾಲ್ ಮಾಡಿದ್ದರು. ಇದೀಗ ಉಮಾ ಅವರಿಗೆ ಲಕ್ಷ್ಮೀ ಮಂಟಪ ಪ್ರವೇಶ ಅವಕಾಶ ಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ಆಡಳಿತಾಧಿಕಾರಿಯಾಗಿದ್ದಾಗ ಉಮಾ ಲಕ್ಷ್ಮೀ ಮಂಟಪ ಪ್ರವೇಶಿಸುತ್ತಿದ್ದರು. ಆಗ ಹುದ್ದೆಯ ಗೌರವಕ್ಕಾಗಿ ಈ ಅವಕಾಶ ಕೊಡಲಾಗಿತ್ತು. ಈಗ ಪ್ರವೇಶ ಮಾಡುವುದು ಸರಿಯಲ್ಲ ಎಂಬ ಮಾತು ಕೇಳಿ ಬರ್ತಾಯಿದೆ.

See also  ನ.7ರಂದು ಬೆಳ್ತಗಂಡಿ ನಗರ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

192
Shreyas Vittal

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು