News Kannada
Monday, September 26 2022

ಕರಾವಳಿ

ಜಲ್ಲಿ ಕ್ರಷರ್‍ ನಲ್ಲಿ ಕಲ್ಲು ಸ್ಪೋಟ: ಮನೆಗೆ ಹಾನಿ, ಮಹಿಳೆ ಆಸ್ಪತ್ರೆಗೆ ದಾಖಲು - 1 min read

Photo Credit :

ಜಲ್ಲಿ ಕ್ರಷರ್‍ ನಲ್ಲಿ ಕಲ್ಲು ಸ್ಪೋಟ: ಮನೆಗೆ ಹಾನಿ, ಮಹಿಳೆ ಆಸ್ಪತ್ರೆಗೆ ದಾಖಲು

ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶ್ವತ್ಥಪುರ ಕೊಂಡೆಬೆಟ್ಟು ಎಂಬಲ್ಲಿ ನಡೆಯುತ್ತಿರುವ ಕಪ್ಪು ಕಲ್ಲಿನ ಕ್ರಷರ್‍ ನಲ್ಲಿ ಸ್ಪೋಟಕವನ್ನು ಬಳಸಿ ಕಲ್ಲನ್ನು ಸಿಡಿಸಿದ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲಿದ್ದ ಮನೆಯ ಮೇಲೆ ಕಲ್ಲಿನ ತುಂಡೊಂದು ಬಿದ್ದು, ಮಹಿಳೆಯೋರ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಸಂಜೆ ನಡೆದಿದೆ.

ಮಹಾಬಲ ಗೌಡ ಎಂಬವರ ಪತ್ನಿ ಚಂದ್ರಕಲಾ ಗಾಯಗೊಂಡ ಮಹಿಳೆ. ಇವರ ಮನೆ ಸಮೀಪ ಕೊಂಡೆಬೆಟ್ಟು ಎಂಬಲ್ಲಿ ಶಕ್ತಿ ಪ್ರಸಾದ್ ಎಂಬವರಿಗೆ ಸೇರಿದ ಕಪ್ಪು ಕಲ್ಲಿನ ಕ್ರಷರ್ ಕಾರ್ಯಾಚರಿಸುತ್ತಿದ್ದು ಯಾವುದೇ ಸಮಯದ ನಿಗದಿಯಿಲ್ಲದೆ ಸ್ಪೋಟಕಗಳನ್ನು ಬಳಸಿ ಇಲ್ಲಿ ಕಲ್ಲುಗಳನ್ನು ಸಿಡಿಸಲಾಗುತ್ತದೆ. ಅದರಂತೆ ಗುರುವಾರದಂದು ಕೂಡಾ ಕಲ್ಲುಗಳನ್ನು ಸ್ಪೋಟಗೊಳಿಸಿದ್ದು, ಈ ಸಂದರ್ಭ ಸ್ಪೋಟದ ರಭಸಕ್ಕೆ ಕಲ್ಲಿನ ತುಂಡೊಂದು ಚಂದ್ರಕಲಾ ಮನೆಯ ಮಾಡಿಗೆ ಬಿದ್ದಿದೆ.

ಚಂದ್ರಕಲಾ ಮನೆಯೊಳಗೆ ಬೀಡಿ ಕಟ್ಟುತ್ತಿದ್ದರು. ಮೇಲ್ಚಾವಣಿಯನ್ನು ಸೀಳಿ ಬಂದ ಕಲ್ಲು ಚಂದ್ರಕಲಾ ಮೇಲೆ ಬಿದ್ದಿದೆ. ಘಟನೆಯಲ್ಲಿ ಮನೆಯ ಇತರ ಪರಿಕರಗಳಿಗೂ ಹಾನಿಯಾಗಿದ್ದು, ಚಂದ್ರಕಲಾ ಅವರ ಸೊಂಟ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದೆ.

ಅವರನ್ನು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡುಬಿದಿರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಕೊರೊನಾ ಸೋಂಕಿತರ ಐಸೋಲೇಷನ್ ಕೇಂದ್ರ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಡಾ.ಭರತ್ ಶೆಟ್ಟಿ ವೈ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು