ಉಡುಪಿ: ದುಬೈಯಿಂದ ಮೀನುಗಾರಿಕೆಗೆ ತೆರಳಿದ್ದ ಉಡುಪಿಯ ಬೈಂದೂರಿನ ಮೀನುಗಾರ ಇರಾನಿ ಪೊಲೀಸರಿಂದ ಬಂಧಿತರಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಬೈಂದೂರಿನ ಅಬ್ದುಲ್ ಹುಸೇನ್ ಎಂಬುವರೇ ಬಂಧಿತರು. ಜುಲೈ 27 ರಂದು ದುಬೈಯಿಂದ ಮೀನುಗಾರಿಕೆಗೆ ತೆರಳಿದ್ದ 18 ಮಂದಿಯಿದ್ದ ತಂಡವನ್ನು ಅಕ್ರಮ ಗಡಿ ಪ್ರವೇಶದ ಆರೋಪದಲ್ಲಿ ಇರಾನಿ ಪೊಲೀಸರು ಬಂಧಿಸಿದ್ದರು. ಈ ಪೈಕಿ ಆರು ಮಂದಿಯನ್ನು ಬಿಡುಗಡೆಗೊಳಿಸಿರುವ ಇರಾನ್ ಸರಕಾರ ಉಳಿದವರನ್ನು ಇನ್ನೂ ಬಂಧಮುಕ್ತಗೊಳಿಸಿಲ್ಲ. ಈ ಸಂಬಂಧ ಬೈಂದೂರಿನ ಮೀನುಗಾರ ಅಬ್ದುಲ್ ಹುಸೇನ್ ಕುಟುಂಬದವರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ದುಬೈನಲ್ಲಿರುವ ಕನ್ನಡಿಗರು ಮೀನುಗಾರನನ್ನು ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದು ,ಅಬ್ದುಲ್ ಹುಸೇನ್ ಕುಟುಂಬ ಅವರು ಬಂಧಮುಕ್ತರಾಗುವುದನ್ನು ಎದುರು ನೋಡುತ್ತಿದ್ದಾರೆ.