ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಐಎನ್ಎಸ್ ಕಬಂದ ನೌಕಾನೆಲೆಗೆ ಪ್ರವೇಶಿಸುವ ಬೃಹತ್ ಹಡಗುಗಳ ಮಾರ್ಗದಲ್ಲಿ ತುಂಬಿಕೊಂಡಿರುವ ಹೂಳುಗಳನ್ನು ತೆರವು ಮಾಡಲು ಇಂಡೋನೇಷ್ಯಾ ಮೂಲದ ಡ್ರಜ್ಜಿಂಗ್ ಕಂಪೆನಿಯ ಹಡಗು ಕಾರವಾರಕ್ಕೆ ಆಗಮಿಸಿದೆ.
ಈ ಬೃಹತ್ ಹಡಗು ನೌಕಾನೆಲೆಯೊಳಗೆ ಪ್ರವೇಶಿಸಲು ಉನ್ನತ ಅಧಿಕಾರಿಗಳ ಪರವಾನಗಿಗಾಗಿ ಕಾಯುತ್ತಿದ್ದು ಕಾರವಾರದ ಬೈತಖೋಲ್ ಬಂದರಿನಲ್ಲಿ ತಂಗಿದೆ.
ಡ್ರಜ್ಜಿಂಗ್ ಮಾಡುವ ಹಡಗು ಇಂಡೋನೇಷ್ಯಾ ಮೂಲದ್ದಾಗಿದ್ದು ಇನ್ನು ಕೆಲವು ತಿಂಗಳುಗಳ ಕಾಲ ಸೀಬರ್ಡ್ ವ್ಯಾಪ್ತಿಯಲ್ಲಿ ಹೂಳು ತೆಗೆಯಲಿದೆ. ಮಳೆಗಾಲ ಹಾಗೂ ಅರಣ್ಯ ಪ್ರದೇಶದಿಂದ ಹರಿದು ಬರುವ ಕಸ-ಕಡ್ಡಿಗಳಿಂದ ಸೀಬರ್ಡ್ ನೌಕೆ ವ್ಯಾಪ್ತಿಯ ಸಮುದ್ರದಲ್ಲಿ ಸಂಗ್ರಹವಾಗಿ ಇತರ ಹಡಗು ನೌಕಾನೆಲೆಗೆ ಪ್ರವೇಶಿಸಲು ತೊಂದರೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸೀಬರ್ಡಿನಲ್ಲಿ ಐಎನ್ಎಸ್ ವಿಕ್ರಮಾದಿತ್ಯ ಸೇರಿದಂತೆ ಹಲವಾರು ಬೃಹತ್ ಹಡಗುಗಳು ನೌಕಾನೆಲೆಗೆ ಆಗಾಗ ಆಗಮಿಸುತ್ತವೆ. ಮಳೆಗಾಲದ ಬಳಿಕ ನೌಕಾನೆಲೆ ವ್ಯಾಪ್ತಿ ಸಮದ್ರದಲ್ಲಿ ಹೆಚ್ಚಿನ ಹೂಳು ಸಂಗ್ರಹಣೆಯಾಗಿದ್ದರಿಂದ ಅವುಗಳನ್ನು ತೆರವು ಮಾಡುವ ಜವಾಬ್ದಾರಿ ಇಂಡೋನೇಷ್ಯಾದ ಡ್ರಜ್ಜಿಂಗ್ ಕಂಪೆನಿ ವಹಿಸಿಕೊಂಡಿದೆ.
ಸ್ಥಳೀಯವಾಗಿ ಜೆ. ಎಂ. ಬಕ್ಷಿ ಕಂಪೆನಿಯು ಐಎನ್ಎಸ್ ಕದಂಬ ಹಾಗೂ ಇಂಡೋನೇಷ್ಯಾದ ಡ್ರಜ್ಜಿಂಗ್ ಕಂಪೆನಿಯ ನಡುವೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಲಿದೆ.