News Kannada
Tuesday, November 29 2022

ಕರಾವಳಿ

ಬೆಳ್ತಂಗಡಿ ಪಟ್ಟಣ ಪಂಚಾಯತ್ ಗೆಲುವು: ಬಿಜೆಪಿ ಸಂಭ್ರಮಾಚರಣೆ - 1 min read

Photo Credit :

ಬೆಳ್ತಂಗಡಿ ಪಟ್ಟಣ ಪಂಚಾಯತ್ ಗೆಲುವು: ಬಿಜೆಪಿ ಸಂಭ್ರಮಾಚರಣೆ

ಬೆಳ್ತಂಗಡಿ: ಪಟ್ಟಣ ಪಂ.ನಲ್ಲಿ ಪಕ್ಷದ ಅಭೂತಪೂರ್ವ ಗೆಲುವಿಗೆ ಕಾರ್ಯಕರ್ತರು ಬುಧವಾರ ಪಟ್ಟಣದಾದ್ಯಂತ ಮೆರವಣಿಗೆ ನಡೆಸಿ ಸಂಭ್ರಮಿಸಿದರು.

ಬೆಳಗ್ಗೆ 8 ಗಂಟೆಗೆ ಪ.ಪಂ.ಕಚೇರಿಯಲ್ಲಿ ನಡೆದ 11 ವಾರ್ಡ್‍ಗಳ ಮತ ಎಣಿಕೆ ಕಾರ್ಯವು ಹತ್ತೂವರೆ ಗಂಟೆಗೆ ಕೊನೆಗೊಂಡು ಬಿಜೆಪಿ ಸ್ಪಷ್ಟ ಬಹುಮತ ಹೊಂದಿರುವುದು ಗೊತ್ತಾದಾಗ ಕಚೇರಿ ಮುಂದೆ ಇದ್ದ ಬಿಜೆಪಿ ಕಾರ್ಯಕರ್ತರ ಸಂತೋಷಕ್ಕೆ ಪಾರವೇ ಇರಲಿಲ್ಲ. ತಕ್ಷಣ ಅಲ್ಲಿಗೆ ಬಂದ ಶಾಸಕ ಹರೀಶ ಪೂಂಜರನ್ನು ಎತ್ತಿ ಕುಣಿದಾಡಿ ನಲಿದಾಡಿದರು.

ಪಂ.ನಲ್ಲಿ ಇದುವರೆಗೆ ಬಿಜೆಪಿ ಬಹುಮತದೊಂದಿಗೆ ಆಡಳಿತ ನಡೆಸಿದ ದಾಖಲೆ ಇರಲಿಲ್ಲ. ಈ ಬಾರಿ ಆಡಳಿತ ನಮ್ಮದೇ ಎಂಬುದು ಕಾರ್ಯಕರ್ತರ ಸಂಭ್ರಮಕ್ಕೆ ಕಾರಣವಾಗಿತ್ತು. ಪಟಾಕಿ ಸಿಡಿಸಲಾಯಿತು. ಪಕ್ಷದಿಂದ ಸ್ಪರ್ಧಿಸಿದ್ದ ಹನ್ನೊಂದು ಅಭ್ಯರ್ಥಿಗಳಲ್ಲಿ ನಾಲ್ಕು ಮಂದಿ ಸೋತಿದ್ದರು. ವಿಷಣ್ಣ ಭಾವದಿಂದ ಇದ್ದ ನಾಲ್ಕು ಅಭ್ಯರ್ಥಿಗಳನ್ನು ಶಾಸಕ ಹರೀಶ ಪೂಂಜ ಸಂತೈಸಿ ಧೈರ್ಯ ತುಂಬಿದರು. ಬಳಿಕ ಅವರು ಗೆದ್ದ ಹಾಗೂ ಸೋತ ಅಭ್ಯರ್ಥಿಗಳಿಗೆ ಮಾಲೆ ತೊಡಿಸಿ ಅಭಿನಂದಿಸಿದರು.

ಬಳಿಕ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಯೂ ಸೇರಿದಂತೆ ಎಲ್ಲಾ ವಾರ್ಡ್‍ಗಳಿಗೆ ಮೆರವಣಿಗೆಯೊಂದಿಗೆ ತೆರಳಿ ವಿಜಯೋತ್ಸವ ಆಚರಿಸಿದರು. ಅಭ್ಯರ್ಥಿಗಳನ್ನು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರತಾಪಸಿಂಹ ನಾಯಕ್, ಅವರು ಗೆಲವು ಸಂತಸ ತಂದಿದೆ. ಹಲವಾರು ವರ್ಷಗಳ ಹೋರಾಟದ ಫಲವಾಗಿ ಬೆಳ್ತಂಗಡಿಯಲ್ಲಿ ನವಚೈತನ್ಯ ಬಂದಂತಾಗಿದೆ. ಈ ಗೆಲುವಿಗೆ ಎಲ್ಲರೂ ಕಾರಣೀಕರ್ತರು. ಇದೇ ರೀತಿ ಮುಂದಿನ ಚುನಾವಣೆಗಳಲ್ಲೂ ಹೋರಾಟ ಮಾಡೋಣ. ಪ.ಪಂ.ನಲ್ಲಿ ದಕ್ಷ ಆಡಳಿತಕ್ಕೆ ಶ್ರಮಿಸೋಣ ಎಂದು ಅಭಿನಂದಿಸಿದರು.

ವಿಧಾನಸಭೆಯ ಚುನಾವಣೆಯಲ್ಲಿ ವಸಂತ ಬಂಗೇರ ಅವರು ಪರಾಭವಗೊಂಡಿದ್ದರು. ಪ.ಪಂ.ಚುನಾವಣೆಯಲ್ಲಾದರೂ ಗೆದ್ದು ತೋರಿಸೋಣ ಎಂದು ಅವರು ಪ್ರಚಾರಕೈಗೊಂಡಿದ್ದರಾದರೂ ಬಂಗೇರರಿಗೆ, ಕಾಂಗ್ರೆಸ್‍ಗೆ ಮತದಾರ ಮಣೆ ಹಾಕದೆ ಹರೀಶ್ ಪೂಂಜ ಅವರ ಪ್ರಭಾವಕ್ಕೊಳಗಾಗಿ ಮತ್ತೆ ಬಿಜೆಪಿಯನ್ನು ಬೆಂಬಲಿಸಿದರು. ಕಾಂಗ್ರೆಸ್‍ನ ಒಳಜಗಳ, ಪಕ್ಷಾಂತರಗಳು ಅವರ ಸೋಲಿಗೆ ಮುಳುವಾಗಿರುವುದು ಫಲಿತಾಂಶದಿಂದ ಗೋಚರವಾಗಿದೆ. ಗೆದ್ದ ಹನ್ನೊಂದು ಅಭ್ಯರ್ಥಿಗಳ ಪೈಕಿ ಬಿಜೆಪಿಯ ಓರ್ವ ಹಾಗು ಕಾಂಗ್ರೆಸ್‍ನ ಇಬ್ಬರು ಹಿಂದೆಯೂ ಪಂ.ನ ಸದಸ್ಯರಾಗಿದ್ದರು. ಉಳಿದ ಎಂಟು ಮಂದಿ ಹೊಸಬರಾಗಿದ್ದಾರೆ. ಅಧ್ಯಕ್ಷ ಗಾದಿ ಹಿಂದುಳಿದ ವರ್ಗ `ಎ’ಗೆ ನಿಗದಿಯಾಗಿದೆ.

See also  ಸುಳ್ಯದಲ್ಲಿ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು