News Kannada
Sunday, November 27 2022

ಕರಾವಳಿ

ಗಾಯಕ ಪಿ.ಎಂ. ಹಸನಬ್ಬಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ - 1 min read

Photo Credit :

ಗಾಯಕ ಪಿ.ಎಂ. ಹಸನಬ್ಬಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮೂಡಬಿದಿರೆ: ಗಾಯಕ, `ಆಶಾಕಿರಣ್ ಮೆಲೋಡೀಸ್’ ಸ್ಥಾಪಕ, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಮೂಡಬಿದಿರೆಯ ಪಿ. ಎಂ. ಹಸನಬ್ಬ ಅವರು ಈ ಬಾರಿಯ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅವರು ನಾಟಕಕಾರ, ಸಂಗೀತ ಸ್ವರ ಸಂಯೋಜಕ/ನಿರ್ದೇಶಕರು. ಬ್ಯಾರಿ ಭಾಷೆಯಲ್ಲಿ ಪೊಣ್‍ಚಿರಿಕೆ, ಅಪ್ಪ ಚುಡು ಪಾತುಮ್ಮ ಎಂಬ ಧ್ವನಿ ಸುರುಳಿಗಳನ್ನು ರೂಪಿಸಿದ್ದಾರೆ. ಬ್ಯಾರಿ ಚಲನಚಿತ್ರದಲ್ಲಿ ನಟಿಸಿರುವ ಅವರು `ಸಹನ ನಮ್ಮೂರುದ ಪೊಣ್ಣು’ ಟೆಲಿಚಿತ್ರಕ್ಕೆ ಸಾಹಿತ್ಯ ರಚಿಸಿದ್ದಾರೆ. `ಈ ಟಿವಿ ಕನ್ನಡ’ 2016ರಲ್ಲಿ ಏರ್ಪಡಿಸಿದ `ಹಾಡಿಗೊಂಡು ಹಾಡು’ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಮಹಮ್ಮದ್ ರಫಿ , ಮುಖೇಶ್ ಅವರ ಶೈಲಿಯಲ್ಲಿ ಹಾಡುವುದರಲ್ಲಿ ಹಸನಬ್ಬ ಅವರಿಗೆ ವಿಶೇಷ ಹೆಸರಿದೆ.

ಮೂಡಬಿದಿರೆಯಲ್ಲಿ `ಕರೋಕೆ’ ಗಾಯನ ಸ್ಪರ್ಧೆಯನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಕಾಟಿಪಳ್ಳ ಮದ್ರಸಾದಲ್ಲಿ ಈದ್ ಮಿಲಾದ್ ಗಾಯನ ಸ್ಪರ್ಧೆಯಲ್ಲಿ ನಿರಂತರ 9 ವರ್ಷ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ರಚಿಸಿದ `ಮದ್ಮೆ ಮಸಣೊಡು’ ಮತ್ತು `ಸುಮಂಗಲ’ ನಾಟಕಗಳಿಗೆ ದ.ಕ. ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಬಂದಿವೆ.

See also  ಚುನಾವಣೆ ವೇಳೆ ದುಷ್ಕೃತ್ಯಗೈಯುವವರ ಮೇಲೆ ನಿಗಾ: ಮಂಗಳೂರು ಕಮಿಷನರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು