ಕಾಸರಗೋಡು: ಆರು ವರ್ಷಗಳ ಹಿಂದೆ ಪತ್ನಿ ಮತ್ತು ಪ್ರಿಯಕರನಿಂದ ಕೊಲೆಗೀಡಾದ ಮೊಗ್ರಾಲ್ ಪುತ್ತೂರು ಬೆಳ್ಳೂರಿನ ಮುಹಮ್ಮದ್ ಕು೦ಞ (೩೨) ಯ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲು ಕಾಸರಗೋಡು ಪೊಲೀಸರು ತೀರ್ಮಾನಿಸಿದ್ದಾರೆ.
೨೦೧೨ ರ ಎಪ್ರಿಲ್ ಏಳರಂದು ಪಯಸ್ವಿನಿ ಹೊಳೆಯ ತೆಕ್ಕಿಲ್ ನಲ್ಲಿ ಜೀರ್ಣಾವಸ್ಥೆಯಲ್ಲಿ ಪತ್ತೆಯಾದ ಮೃತದೇಹ ಮುಹಮ್ಮದ್ ಕು೦ಞ ಯವರದ್ದಾಗಿರಬಹುದು ಎಂದು ಶಂಕಿಸಲಾಗಿದೆ.
ಮೃತದೇಹಕ್ಕೆ ಯಾರೂ ವಾರೀಸುದಾರರು ಇಲ್ಲದ ಕಾರಣ ಕಣ್ಣೂರಿನ ಪಯಂಬಲ ದ ಸ್ಮಶಾನದಲ್ಲಿ ಮೃತದೇಹವನ್ನು ದಫನ ಮಾಡಲಾಗಿತ್ತು . ಆರೋಪಿಗಳಾದ ಮುಹಮ್ಮದ್ ಕು೦ಞ ಯವರ ಪತ್ನಿ ಸಕೀನಾ ಈಕೆಯ ಪ್ರಿಯಕರ ಉಮ್ಮರ್ ನನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಇವರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ.
೨೦೧೨ ಮಾರ್ಚ್ ಐದರಿಂದ ೩೦ ರ ನಡುವೆ ಕೊಲೆ ನಡೆದಿತ್ತು. ಕೊಲೆ ಬಳಿಕ ಮೃತದೇಹವನ್ನು ಹೊಲೆಗೆಸೆದ ಸ್ಥಳದಿಂದ ಕೃತ್ಯಕ್ಕೆ ಬಳಸಿದ್ದ ಶಾಲು ಮತ್ತು ಪ್ಲಾಸ್ಟಿಕ್ ಚೀಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.ವೈಜ್ಞಾನಿಕ ತನಿಖೆಯಿಂದ ಹೆಚ್ಚಿನ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ