ಬೆಳ್ತಂಗಡಿ: ಎರಡು ದಿನಗಳ ಹಿಂದೆ ಇಂದಬೆಟ್ಟು ಸನಿಹದ ಒಂಟಿ ಸಲಗವೊಂದು ಕಂಡು ಬಂದಿತ್ತು. ಈದೀಗ ಮತ್ತೆ ಚಾರ್ಮಾಡಿ ಸುತ್ತಮುತ್ತ ಆನೆಯೊಂದು ಸುಳಿದಾಡುತ್ತಿದ್ದು ಕೃಷಿಕರನ್ನು ಕಂಗೆಡಿಸಿದೆ.
ಚಾರ್ಮಾಡಿ ಆಣೆಕಟ್ಟಿನ ಬಳಿ ಶನಿವಾರ ರಾತ್ರಿ ಕೃಷಿ ಪರಿಸರಕ್ಕೆ ಬಂದು ಬಾಳೆಗಿಡ ಇತ್ಯಾದಿಗಳನ್ನು ತಿನ್ನತೊಡಗಿರುವುದನ್ನು ಸ್ಥಳೀಯರು ವೀಕ್ಷಿಸಿದರಲ್ಲದೆ ಅದರ ಚಿತ್ರೀಕರಣವನ್ನೂ ಕೂಡ ಮಾಡಿದ್ದಾರೆ.
ಬೃಹತ್ ಒಂಟಿ ಸಲಗದ ದರ್ಶನದಿಂದ ಆಸುಪಾಸಿನವರು ಭಯಭೀತರಾಗಿದ್ದಾರೆ.