ಮಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಸಾವಿನಲ್ಲೂ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ತನ್ನ ವಿಕೃತಿ ತೋರಿಸಿ, ಸಂಭ್ರಮಪಟ್ಟಿದೆ.
ಅನಂತ್ ಕುಮಾರ್ ಸಾವನ್ನು ಸಂಭ್ರಮಿಸಿರುವ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ಅನಂತ್ ಕುಮಾರ್ ನಿಧನದ ಬಗ್ಗೆ ತುಂಬಾ ಅವಹೇಳನಕಾರಿಯಾಗಿ ಬರೆದಿದೆ.
ಜಾತಿ ರಾಜಕಾರಣ, ಕುತಂತ್ರಿ, ಬ್ರಾಹ್ಮಣ ಅನಂತ್ ಕುಮಾರ್ ಮೇಲೆ ಹೋಗಿಯೂ ಜಾತಿ ವಿಷ ಬಿತ್ತ ಬೇಡ ಎಂದು ಬರೆದಿದೆ.
ಜಾತಿ, ರಾಮ ರಾಂ ಅನ್ನುತ್ತಲೇ ಹೊಗೆ ಹಾಕಿಕೊಂಡ ಕೋಮುವಾದಿ ಅನಂತ್ ಕುಮಾರ್. ದೇಶ ಹಾಳು ಮಾಡಲು ಇನ್ನೊಮ್ಮೆ ಹುಟ್ಟಿ ಬರಬೇಡ ಎಂದು ಅವಹೇಳನ ಮಾಡಿದೆ.
ಆದರೆ ಈ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ ಮತ್ತು ಇದರ ಬಗ್ಗೆ ದೂರು ದಾಖಲಿಸಲು ಕೆಲವರು ಮುಂದಾಗಿದ್ದಾರೆ.