News Kannada
Friday, December 02 2022

ಕರಾವಳಿ

‘ಪರಿಸರ ಸಂರಕ್ಷಣೆ ನನ್ನ ಹೊಣೆ’- ಮಂಗಳೂರು ಧರ್ಮಪ್ರಾಂತ್ಯದ ಅಭಿಯಾನ

Photo Credit :

'ಪರಿಸರ ಸಂರಕ್ಷಣೆ ನನ್ನ ಹೊಣೆ'- ಮಂಗಳೂರು ಧರ್ಮಪ್ರಾಂತ್ಯದ ಅಭಿಯಾನ

ನಮ್ಮೆಲ್ಲರ ಮನೆಯಂತಿರುವ ಭೂಮಿಯನ್ನು ಸಂರಕ್ಷಿಸಲು ನಾವೆಲ್ಲರೂ ಸಂಘಟಿತ ಪ್ರಯತ್ನ ಮಾಡಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ‘ಲಾವ್‍ದಾತೊ ಸಿ’ ಸುತ್ತೋಲೆಯಲ್ಲಿ ವಿಶ್ವಕ್ಕೆ ಕರೆ ನೀಡಿದ್ದಾರೆ.

ಪರಿಸರ ಎನ್ನುವುದು ಎಲ್ಲರಿಗಾಗಿ ಇರುವ ಮತ್ತು ಎಲ್ಲರಿಗೂ ಸೇರಿದ ಹಾಗೂ ಸಮಸ್ತರಿಗೆ ಒಳ್ಳೆಯದನ್ನು ಉಂಟುಮಾಡುವಂಥದ್ದು. ವೈಜ್ಞಾನಿಕವಾಗಿ ಸಾಬೀತಾದಂತೆ, ನಾವು ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳದ ಆಘಾತಕಾರಿ ಸನ್ನಿವೇಶದಲ್ಲಿದ್ದೇವೆ. ಇದರಿಂದಾಗಿ ಉಷ್ಣಾಂಶ ಹೆಚ್ಚಳದ ವಿರುದ್ಧ ಹೋರಾಡಲು ಮನುಕುಲ ತನ್ನ ಜೀವನಶೈಲಿ, ಉತ್ಪಾದನೆ ಮತ್ತು ಬಳಕೆಯನ್ನು ಬದಲಿಸಿಕೊಳ್ಳುವ ಅಗತ್ಯತೆಯನ್ನು ಮನಗಾಣಬೇಕಾಗಿದೆ.

ದೇವರು ನಮಗೆ ನೀಡಿದ ನೈಸರ್ಗಿಕ ಸಂಪನ್ಮೂಲಗಳನ್ನು ದುರಾದೃಷ್ಟವಶಾತ್ ಮನುಕುಲವು ಬೇಜವಾಬ್ದಾರಿಯುತವಾಗಿ ಬಳಕೆ ಮಾಡಿಕೊಂಡಿರುವ ಪರಿಣಾಮವಾಗಿ ನೈಸರ್ಗಿಕ ವಿಕೋಪಗಳು ಮತ್ತು ಪರಿಸರಾತ್ಮಕ ಸಂಘರ್ಷಕ್ಕೆ ಸಾಕ್ಷಿಯಾಗುತ್ತಿದೆ. ವಿಶ್ವದ ಹಲವು ದೇಶಗಳು, ರಾಜ್ಯಗಳು ಮತ್ತು ನಗರಗಳು ಇದರ ತೀವ್ರತರ ಪರಿಣಾಮಗಳನ್ನು ಎದುರಿಸುತ್ತಿವೆ.
ಹೊಸ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾಲ್ ಸಲ್ಡಾನಾ ಅವರ ನೇತೃತ್ವದಲ್ಲಿ ಅವರ ಪವಿತ್ರ ಅಧಿಕಾರ ಸ್ವೀಕಾರದ ಸ್ಮರಣೆಗಾಗಿ ಮಂಗಳೂರು ಧರ್ಮಪ್ರಾಂತ್ಯವು ಈ ನಿಟ್ಟಿನಲ್ಲಿ ಹೊಸ ಅಭಿಯಾನವನ್ನು ಹಮ್ಮಿಕೊಂಡಿದೆ. “ಲಾವ್‍ದಾತೊ ಸಿ – ಪರಿಸರ ಸಂರಕ್ಷಣೆ ನನ್ನ ಹೊಣೆ” ಎಂಬ ಘೋಷವಾಕ್ಯದೊಂದಿಗೆ ಎಲ್ಲ ಧರ್ಮಕೇಂದ್ರಗಳಲ್ಲಿ, ಪ್ರಾರ್ಥನಾ ಮಂದಿರಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಧರ್ಮಪ್ರಾಂತ್ಯದ ಇತರ ಸಂಘ ಸಂಸ್ಥೆಗಳಲ್ಲಿ 2018ರ ನವೆಂಬರ್ 25ರಂದು ಅಭಿಯಾನ ನಡೆಸಲಾಗುವುದು. ಈ ಅಭಿಯಾನವನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.

ಪ್ರಾರ್ಥನೆ ಹಾಗೂ ಗಿಡನೆಡುವುದು: ಎಲ್ಲಾ ಧರ್ಮಕೇಂದ್ರಗಳಲ್ಲಿ, ಮತ್ತು ಧರ್ಮಪ್ರಾಂತ್ಯದ ಇತರ ಸಂಘ ಸಂಸ್ಥೆಗಳಲ್ಲಿ 2018ರ ನವೆಂಬರ್ 25ರಂದು ಭಾನುವಾರದ ಪ್ರಾರ್ಥನೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಸಮಿತಿಯ ಸೂಚನೆಯಂತೆ ನಡೆಸಲಾಗುವುದು. ಸ್ಥಳೀಯ ಸಮಿತಿಗಳು, ಈಗಾಗಲೇ ಬಿಷಪ್ ಅವರು ನೀಡಿರುವ ಸಾಗುವಾನಿ ಗಿಡಗಳನ್ನು ನೆಡಲಿದ್ದಾರೆ.
ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜರ್ ಮ್ಯಾಕ್ಸಿಮ್ ನೊರ್ಹೋನಾ, ಕಾಸರಗೋಡು ಜಿಲ್ಲೆಯ ವರ್ಕಾಡಿ ಧರ್ಮಕೇಂದ್ರದಲ್ಲಿ ಗಿಡ ನೆಡುವರು. ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ಪ್ರೊಕ್ಯುರೇಟರ್ ವಂದನೀಯ ಗುರು ವಿಕ್ಟರ್ ವಿಜಯ್ ಲೋಬೊ ಅವರು ಕೊಕ್ಕಡ ಧರ್ಮಕೇಂದ್ರದಲ್ಲಿ ಗಿಡ ನೆಡುವರು.
2018ರ ಸೆಪ್ಟೆಂಬರ್ 15ರಂದು ನಡೆದ ಬಿಷಪ್ ಅಧಿಕಾರ ಸ್ವೀಕಾರ ಸಮಾರಂಭದ ವೇಳೆ ಬಿಷಪ್ ಅವರು ಈ ಅಭಿಯಾನವನ್ನು ಉದ್ಘಾಟಿಸಿದ್ದು, ಇದರ ಅಂಗವಾಗಿ ಮಂಗಳೂರು ರೊಸಾರಿಯೊ ಕೆಥೆಡ್ರಲ್‍ನಲ್ಲಿ ತೆಂಗಿನ ಸಸಿಗಳನ್ನು ನೆಟ್ಟಿದ್ದರು.

‘ಪ್ರಕೃತಿ ಸಂರಕ್ಷಣೆ- ನನ್ನ ಹೊಣೆ ಎಂಬ ವಿಷಯದ ಬಗ್ಗೆ ಘೊಷಣೆ ಬರೆಯುವ ಸ್ಪರ್ಧೆ: ಘೋಷಣೆಗಳನ್ನು ಕನ್ನಡ, ಇಂಗ್ಲಿಷ್, ಕೊಂಕಣಿ ಹಾಗೂ ತುಳುವಿನಲ್ಲಿ ಮೇಲಿನ ವಿಷಯವನ್ನು ಆಧರಿಸಿ ಬರೆಯಬಹುದಾಗಿದೆ. ಪ್ರತಿ ವರ್ಗದಲ್ಲಿ ಅತ್ಯುತ್ತಮ ಘೋಷಣೆಗಳಿಗೆ ಬಹುಮಾನ ನೀಡಲಾಗುತ್ತದೆ. ಈ ಘೋಷಣೆಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತದೆ.
ಪ್ರತಿಜ್ಞಾ ಅಭಿಯಾನ: ಪ್ರಕೃತಿ ಸಂರಕ್ಷಣೆ- ನನ್ನ ಹೊಣೆ. ಎಲ್ಲ ಧರ್ಮಕೇಂದ್ರಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಮತ್ತು ಧರ್ಮಪ್ರಾಂತ್ಯದ ಇತರ ಸಂಘ ಸಂಸ್ಥೆಗಳಲ್ಲಿ ಪ್ರತಿಯೊಬ್ಬರೂ, ಪರಿಸರ ಸಂರಕ್ಷಣೆಯ ಇಚ್ಛಾಶಕ್ತಿಯನ್ನು ದೃಢಪಡಿಸುವ ಹೇಳಿಕೆಗೆ ಸಹಿ ಮಾಡುವ ಮೂಲಕ ಪ್ರತಿಜ್ಞೆ ಕೈಗೊಳ್ಳುವರು. ಈ ಅಭಿಯಾನದ ಉದ್ದೇಶ, ನಮ್ಮ ಭೂಮಿತಾಯಿಯನ್ನು ಸಂರಕ್ಷಿಸಲು ಬದ್ಧವಾಗಿರುವ ಕನಿಷ್ಠ 2 ಲಕ್ಷ ಮಂದಿಯನ್ನು ತಲುಪುವುದು ಆಗಿದೆ.

See also  ಗುರುಪುರದಲ್ಲಿ ಗುಡ್ಡ ಕುಸಿತ: ಮಣ್ಣಿನಡಿಯಲ್ಲಿ ಸಿಲುಕಿ ಮಕ್ಕಳಿಬ್ಬರು ದುರ್ಮರಣ

2019ರ ಜನವರಿ 26ರಂದು ಅದೃಷ್ಟ ಕೂಪನ್ ಡ್ರಾ ಇದ್ದು, ವಿಜೇತರಿಗೆ ಒಂದು ಪವನ್ ಚಿನ್ನದ ನಾಣ್ಯ ನೀಡಲಾಗುತ್ತದೆ.

ಇಡೀ ಅಭಿಯಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಿಷಪ್ ಅವರು ಈಗಾಗಲೇ ‘ಲಾವ್‍ದಾತೊ ಸಿ’ ಸಮಿತಿಯನ್ನು ರಚಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು