News Kannada
Friday, October 07 2022

ಕರಾವಳಿ

ಸಾಹಿತ್ಯ ನಿರ್ದಿಷ್ಟ ಜಾತಿ, ಧರ್ಮಕ್ಕೆ ಸೀಮಿತವಲ್ಲ: ಪ್ರೋ.ತುಕಾರಾಮ ಪೂಜಾರಿ - 1 min read

Photo Credit :

ಸಾಹಿತ್ಯ ನಿರ್ದಿಷ್ಟ ಜಾತಿ, ಧರ್ಮಕ್ಕೆ ಸೀಮಿತವಲ್ಲ: ಪ್ರೋ.ತುಕಾರಾಮ ಪೂಜಾರಿ

ಬಂಟ್ವಾಳ: ಸಾಹಿತ್ಯವೆನ್ನುವುದು ಒಂದು ನಿರ್ದಿಷ್ಟ, ಜಾತಿ, ಧರ್ಮ, ಜನಾಂಗಕ್ಕೆ ಸೀಮಿತವಾದುದಲ್ಲ. ಇದು ಈ ಎಲ್ಲಾ ಗಡಿಯನ್ನು ಮೀರಿ ನಿಂತಿರುವ ಜ್ಞಾನ ಶಿಸ್ತು ಎಂದು ಬಂಟ್ವಾಳ ತಾಲೂಕು ಹತ್ತೊಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೋ. ತುಕಾರಾಮ ಪೂಜಾರಿ ಅವರು ಹೇಳಿದ್ದಾರೆ.

ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದ ಡಾ| ಎಫ್. ಎಚ್. ಒಡೆಯರ್ ವೇದಿಕೆಯಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ಬಂಟ್ವಾಳ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಸಂಸ್ಕøತಿ, ಸಂಸ್ಕಾರದ ಜೊತೆಗೆ ಮನುಷ್ಯ ಸಂಬಂಧವನ್ನು ಸದೃಢವಾಗಿಡಲು ಸಾಹಿತ್ಯ ಸೇತುಸಂಬಂಧವಿದ್ದಂತೆ ಎಂದ ಅವರು ಜೀವನ, ಪ್ರೀತಿಯನ್ನು ಬೆಳೆಸುವುದೇ ಸಾಹಿತ್ಯದ ಗುರಿಯಾಗಬೇಕು. ಜನರ ನಾಡಿಮಿಡಿತವನ್ನರಿತ ಸಾಹಿತಿ ನಿಜವಾದ ಸಾಹಿತಿ ಎಂದು ಅಭಿಪ್ರಾಯಪಟ್ಟರು.

ಭಾಷಾಭಿಮಾನದ ಕುರಿತಾಗಿ ನಮ್ಮ ಮನೋಭಾವ ಬದಲಾಗದ ಹೊರತು ಕನ್ನಡವಾಗಲಿ ಇತರ ದೇಶಿ ಭಾಷೆಯಾಗಲಿ ಉಳಿಯಲು ಸಾಧ್ಯವಿಲ್ಲ. ಜ್ಞಾನ ಮತ್ತು ಸಂವಹನ ಮಾಧ್ಯಮವಾಗಿ ಇಂಗ್ಲೀಷ್ ಭಾಷೆಬೇಕೇ ಹೊರತು ಅದಕ್ಕಾಗಿ ನಮ್ಮನ್ನು ನಾವು ಮಾರಿಕೊಳ್ಳುವುದು ಸರಿಯಲ್ಲ ಎಂದವರು ಹೇಳಿದರು.

ಕಾನ್ವೆಂಟ್ ಮನೋಭಾವ ಬದಲಾಗಲಿ..
ಯುರೋಪಿಯನ್ ರಾಷ್ಟ್ರಗಳಲ್ಲಿ ಅವರು ತಪ್ಪಿಯೂ ಅವರ ಭಾಷೆಯನ್ನು ಬಿಟ್ಟು ಬೇರೆ ಭಾಷೆಯನ್ನು ಮಾತನಾಡುವುದಿಲ್ಲ. ಯಾವಾಗ ನಮಗೆ ಇಂತಹ ಅಭಿಮಾನ ಹೃದಯದಲ್ಲಿ ಹುಟ್ಟುವುದಿಲ್ಲವೋ ಅಲ್ಲಿಯವರೆಗೆ ಕನ್ನಡದ ಏಳಿಗೆ ಕಷ್ಟಕರ. ನಮ್ಮ ಹಳ್ಳಿ ಮಕ್ಕಳು ಇಂಗ್ಲೀಷ್ ಭಾಷೆಯನ್ನಾಡುವಾಗ ವ್ಯಾಕರಣ ಶುದ್ಧವಿಲ್ಲವೆಂದು ತಾತ್ಸಾರದಿಂದ ಕಾಣುವ ಪೇಟೆ ಪಟ್ಟಣದ ಕಾನ್ವೆಂಟ್ ಮನೋಭಾವ ಬದಲಾಗಬೇಕು ಎಂದರು.

ಸಾಹಿತ್ಯವೆಂದರೆ ಒಮ್ಮಿಂದೊಮ್ಮೆಗೆ ಅರಳಿ ಬಾಡುವ ಸುಗಂಧರಹಿತ ಪುಷ್ಪವಲ್ಲ. ಇದು ದೀರ್ಘ ಕಾಲದ ತಪಸ್ಸಿನ ಫಲ. ಇದು ಮೊಳಕೆಯೊಡೆದು ಚಿಗುರಿ, ಬಲಿತು ಬೆಳೆಯಬೇಕಾದರೆ ಸೂಕ್ತ ವಾತಾವರಣದ ಅಗತ್ಯವಿದೆ. ಅಂತಹ ವಾತಾವರಣವನ್ನು ಹುಟ್ಟು ಹಾಕಿ, ಪೋಷಿಸಿ ಬೆಳೆಸುವ ಕಾರ್ಯವಾಗಬೇಕು. ಇಂಥಹ ಆರೋಗ್ಯಕರ ವಾತಾವರಣ ಎಳವೆಯಲ್ಲಿ ದೊರೆತರೆ ಮಾತ್ರ ಅದು ಫಲಪ್ರದವಾಗುತ್ತದೆ ಎಂದ ಅವರು ಒಂದು ಆರೋಗ್ಯಕರ ಮನಸ್ಸು ಚಿಗುರಿ ಅರಳಬೇಕಾದರೆ ಅದಕ್ಕೆ ಯೋಗ್ಯ ಮಾರ್ಗದರ್ಶನದ ಅಗತ್ಯವಿದೆ ಎಂದರು.

ಹಳ್ಳಿ ಶಿಕ್ಷಣವೇ ತಳಹದಿ:
ಕನ್ನಡ ಭಾಷೆಯ ವ್ಯಾಪನೆ, ಜನಜೀವನದ ಸಂಸ್ಕಾರ, ಸಾಹಿತ್ಯ ರಚನೆಗೂ ಹಳ್ಳಿಯ ಶಿಕ್ಷಣವೇ ತಳಹದಿ.ಅಂದಿನ ಪ್ರಾಥಮಿಕ ಶಾಲೆಯ ಅಧ್ಯಾಪಕರು ಹೊಂದಿದ್ದ ಜ್ಞಾನ, ಜ್ಞಾನಾರ್ಜನೆಯ ಕಾಳಜಿ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿಲ್ಲ. ಅಂದಿನ ಒಬ್ಬೊಬ್ಬ ಅಧ್ಯಾಪಕನು ಜ್ಞಾನದ ತಪಸ್ವಿಯಂತಿದ್ದರು. ಅಂದು ಅವರಿಗೆ ಈಗಿನಂತೆ ಕಚೇರಿ ಕಾರ್ಯಭಾರದ ಒತ್ತಡವಿರದೆ ಮಕ್ಕಳಿಗೆ ಪಾಠ ಹೇಳುವುದೇ ಮುಖ್ಯ ಗುರಿಯಾಗಿತ್ತು. ಶಾಲಾ ಶಿಕ್ಷಕರಿಗೆ ಭದ್ರತೆ, ಬದ್ಧತೆಯಿತ್ತು. ಆದರೆ ಇಂದಿನ ಅಧ್ಯಾಪಕರ ಸ್ಥಿತಿ ಹಾಗಿಲ್ಲ. ಇಲ್ಲಿ ಅಧ್ಯಾಪಕರ ತಪ್ಪಿಗಿಂತಲೂ ವ್ಯವಸ್ಥೆಯ ತಪ್ಪು ಎದ್ದು ಕಾಣುತ್ತಿದೆ ಎಂದು ವಿಷಾದಿಸಿದರು.

See also  ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ: ಎಬಿವಿಪಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು