News Kannada
Tuesday, September 27 2022

ಕರಾವಳಿ

ವಿದ್ಯುತ್ ಟ್ರಾನ್ಸ್ ಫಾರ್ಮರ್ ದುರಸ್ಥಿ ವೇಳೆ ಶಾಕ್ ಹೊಡೆದು ಸಿಲುಕಿಗೊಂಡ ಕಾರ್ಮಿಕ - 1 min read

Photo Credit :

ವಿದ್ಯುತ್ ಟ್ರಾನ್ಸ್ ಫಾರ್ಮರ್ ದುರಸ್ಥಿ ವೇಳೆ ಶಾಕ್ ಹೊಡೆದು ಸಿಲುಕಿಗೊಂಡ ಕಾರ್ಮಿಕ

ಪುತ್ತೂರು: ವಿದ್ಯುತ್ ಟ್ರಾನ್ಸ್ ಫಾರ್ಮರ್ ದುರಸ್ಥಿ ವೇಳೆ ವಿದ್ಯುತ್ ಶಾಕ್ ಹೊಡೆದು ಕಾರ್ಮಿಕನೋರ್ವ ಟ್ರಾನ್ಸ್ ಫಾರ್ಮರ್ ನಲ್ಲೇ ಸಿಕ್ಕಾಕಿಗೊಂಡು ಮತ್ತೋರ್ವ ಕಾರ್ಮಿಕ ಕಂಬದಿಂದ ಎಸೆಯಲ್ಪಟ್ಟು ಗಾಯಗೊಂಡಿರುವ ಘಟನೆ ಡಿ.15ರಂದು ಸಂಜೆ ಬಸ್ ನಿಲ್ದಾಣದ ಬಳಿಯ ಮಾಯಿದೆ ದೇವುಸ್ ಚರ್ಚ್ ಆವರಣದಲ್ಲಿ ನಡೆದಿದೆ.

ನಂಜನಗೂಡು ಸೂರಳ್ಳ ಗ್ರಾಮದ ಕಸಿವಿನ ಹಳ್ಳಿ ಹುಚ್ಚ ನಾಯ್ಕರವರ ಪುತ್ರರಾದ ಬಸವ ನಾಯ್ಕ(30.ವ) ಹಾಗೂ ರವಿ(19ವ) ಗಾಯಗೊಂಡು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಪುತ್ತೂರು ನಗರದಲ್ಲಿ ಎಲ್.ಟಿ ಲೈನ್ ದುರಸ್ಥಿಯ ಕಾಮಗಾರಿಯನ್ನು ಬೆಂಗಳೂರು ಅರವಿಂದ ಇಲೆಕ್ಟ್ರಿಕ್ ಕಂಪನಿಗೆ ಗುತ್ತಿಗೆ ನೀಡಿದ್ದು ಸುಮಾರು 10 ಮಂದಿಯ ತಂಡ ಕಳೆದು ಒಂದು ವರ್ಷದಿಂದ ಪುತ್ತೂರಿನಲ್ಲಿ ಲೈನ್ ದುರಸ್ಥಿ ಕಾಮಗಾರಿಗಳನ್ನು ನಡೆಸುತ್ತಿದ್ದರು. ಡಿ.15ರಂದು ನಗರದ ಬಸ್ ನಿಲ್ದಾಣದ ಬಳಿಯ ಚರ್ಚ್ ಆವರಣದೊಳಗಿನ ಟ್ರಾನ್ಸ್ಫಾದರ್ಮರ್ನವಲ್ಲಿ ಬೈಂಡಿಂಗ್ ಕೆಲಸ ನಡೆಯುತಿತ್ತು. ಬಸವ ನಾಯ್ಕ ಹಾಗೂ ರವಿ ಎಂಬವರು ಟ್ರಾನ್ಸ್ಫಾ್ರ್ಮರ್ ಮೇಲೆ ಏರಿ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ಕಂಬದ ಮೇಲಿದ್ದ ರವಿ ಎಂಬಾತ ಕೆಲಕ್ಕೆ ಎಸೆಯಲ್ಪಟ್ಟರೆ ಬಸವ ನಾಯ್ಕ ಎಂಬಾತ ಕಂಬದಲ್ಲಿಯೇ ಸಿಕ್ಕಾಕಿಕೊಂಡಿದ್ದರು. ಘಟನೆಯ ಸುದ್ದಿ ತಿಳಿದು ನೂರಾರು ಮಂದಿ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದರು. ಘಟನೆ ನಡೆದು ಸುಮಾರು ಅರ್ಧ ತಾಸುಗಳ ಬಳಿಕ ಸಾರ್ವಜನಿಕರು ಬನ್ನೂರು ಮೆಸ್ಕಾಂಗೆ ಕರೆಮಾಡಿ ಲೈನ್ ಆಫ್ ಮಾಡುವಂತೆ ಮಾಹಿತಿ ನೀಡಿದ ಬಳಿಕ ಅತನನ್ನು ಕಂಬದಿಂದ ಕೆಳಗಿಳಿಸಲಾಯಿತು.

ಲೈನ್ ಮನೆಗಳ ವಿರುದ್ದ ಆಕ್ರೋಶ
ಘಟನೆ ನಡೆದು ಕಾರ್ಮಿಕನೋರ್ವ ಟ್ರಾನ್ಸ್ಫಾದರ್ಮರ್ ಮೇಲೆ ನೇತಾಡುತ್ತಾ ಜೀವನ್ಮರಣ ಸ್ಥಿತಿಯಲ್ಲಿದ್ದರೂ ಸ್ಥಳದಲ್ಲಿಯೇ ಇದ್ದ ಲೈನ್ ಮೆನ್ಗ ಳು ಆತನನ್ನು ರಕ್ಷಿಸಲು ಮುಂದಾಗಲಿಲ್ಲ. ಅವರ ಜೊತೆಯಲ್ಲಿದ್ದ ಕಾರ್ಮಿಕರನ್ನೇ ಕಂಬಕ್ಕೆ ಹತ್ತಿಸಿ ಕೆಳಗಿಳಿಸಲು ಮುಂದಾಗಿದ್ದರು. ಇದು ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರಲ್ಲಿ ಆಕ್ರೋಷಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಲೈನ್ಮೆನನ್ಗಲಳ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಬಳಿಕ ಲೈನ್ಮೆಕನ್ಗಲಳು ಕಂಬದ ಮೇಲೆ ಏರಿ ಸಿಕ್ಕಾಕಿಕೊಂಡಿದ್ದ ಕಾರ್ಮಿಕನ್ನು ಕೆಳಗಿಳಿಸಲಾಯಿತು. ಅಲ್ಲದೆ ಘಟನೆ ನಡೆದು ಅರ್ಧ ತಾಸು ಕಳೆದರೂ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೊಲೀಸರಾಗಲಿ, ಅಗ್ನಿಶಾಮಕ ದಳದವರು ಆಗಮಿಸದಿರುವ ಬಗ್ಗೆಯೂ ಸಾರ್ವಜನರಿಕರು ಆಕ್ರೋಶ ವ್ಯಕ್ತಪಡಿಸಿದರು.

See also  ಮೂಡುಬಿದಿರೆ ಪುರಸಭಾ: ಆಸ್ತಿ ತೆರಿಗೆಯಲ್ಲಿ ಶೇ. 15 ಹೆಚ್ಚಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

188
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು