News Kannada
Friday, October 07 2022

ಕರಾವಳಿ

ಗುರುವಿಲ್ಲದೆ ಏಕಲವ್ಯನಂತೆ ಕೊಳಲು ಕಲಿತ ಬಾಲಕನಿಂದ ಮೋಡಿ - 1 min read

Photo Credit :

ಗುರುವಿಲ್ಲದೆ ಏಕಲವ್ಯನಂತೆ ಕೊಳಲು ಕಲಿತ ಬಾಲಕನಿಂದ ಮೋಡಿ

ಸುಳ್ಯ: ಮಧುರವಾಗಿ ಕೊಳಲನೂದುವ ಮೂಲಕ ಮನ ಸೆಳೆಯುತ್ತಾನೆ ಬಿ.ಎಸ್.ಹರ್ಷಿತ್ ಎಂಬ ಬಾಲಕ. ಯಾವುದೇ ಅಭ್ಯಾಸ ತರಬೇತಿ ಇಲ್ಲದಿದ್ದರೂ ಈತನ ಕೊಳಲವಾದನ ಕೇಳಿದರೆ ಯಾರೂ ತಲೆದೂಗದೇ ಇರಲಾರದು. ಯಾವ ಪದ್ಯ ಕೇಳಿದರೂ ಅದನ್ನು ಅದೇ ರೀತಿ ಸುಮಧುರವಾಗಿ ತನ್ನ ಕೊಳಲ ಮೂಲಕ ನುಡಿಸುತ್ತಾನೆ. ಸುಳ್ಯ ಬೊಳಿಯಮಜಲು ಸತೀಶ್ ಮತ್ತು ಹೊನ್ನಮ್ಮ ದಂಪತಿಗಳ ಪುತ್ರನಾದ ಹರ್ಷಿತ್ ಸುಳ್ಯ ಕೊಡಿಯಾಲಬೈಲು ಎಂ.ಜಿ.ಎಂ. ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ. ಸುಳ್ಯದ ರಂಗಮಯೂರಿ ಕಲಾಶಾಲೆಯ ಕೊಳಲು ವಿದ್ಯಾರ್ಥಿ. ಕೊಳಲ ವಾದನವನ್ನು ಉಸಿರಾಗಿಸಿದ ಹರ್ಷಿತ್ ಸ್ವಯಂ ಅಭ್ಯಸಿಸಿದ ವಿದ್ಯೆಯಿಂದ ವಿಸ್ಮಯ ಸೃಷ್ಠಿಸುತ್ತಾನೆ.

ಸ್ವಯಂ ಕಲಿತ ವಿದ್ಯೆ
ಕಳೆದ ಒಂಭತ್ತು ವರ್ಷದಿಂದ ಕೊಳಲು ವಾದನ ಮಾಡುವ ಹರ್ಷಿತ್ ಗುರುವಿಲ್ಲದೆ ಕೊಳಲು ಕಲಿತ ಏಕಲವ್ಯ. ನುರಿತ ಕಲಾವಿದನಂತೆ ಕೊಳಲನೂದುವ ಈತ ಯಾವುದೇ ಶಾಸ್ತ್ರೀಯವಾದ ಅಭ್ಯಾಸ, ತರಬೇತಿ ಪಡೆಯದೆ ಕೊಳಲುವಾದನ ಮಾಡುತ್ತಾನೆ. ಈತನ ಕೊಳಲು ವಾದನ ಕೇಳುತ್ತಿದ್ದರೆ ಯಾವುದೇ ನುರಿತ ಕಲಾವಿದರು ನುಡಿಸುತ್ತಿದ್ದಂತೆ ಭಾಸವಾಗುತ್ತದೆ. ಇತರರು ಕೊಳಲು ಊದುವುದನ್ನು ನೋಡಿ, ಕೊಳಲ ನಾದ ಕೇಳಿಯೇ ಕೊಳಲನೂದವುದನ್ನು ಕಲಿತಿದ್ದಾನೆ. ದೊಡ್ಡ ದೊಡ್ಡ ಕಲಾವಿದರಂತೆ ಕೊಳಲನ್ನು ಊದುವ ಕಲಾವಿದನಾಗಬೇಕೆಂಬ ಬಯಕೆ ಚಿಕ್ಕಂದಿನಿಂದಲೂ ಇದ್ದರೂ ಅಭ್ಯಾಸ ಮಾಡಲು ಅವಕಾಶ ದೊರೆಯಲಿಲ್ಲ. ಆದುದುರಿಂದ ತನ್ನ ಹಿರಿಯರು ಕೊಳಲನ್ನು ಊದುವುದು ನೋಡಿ, ಕೇಳಿ ತನ್ನದೇ ಧಾಟಿಯಲ್ಲಿ, ಶೈಲಿಯಲ್ಲಿ ಕಲಿತಿದ್ದಾನೆ. ಕಳೆದ ಕೆಲವು ತಿಂಗಳಿನಿಂದ ರಂಗಮಯೂರಿಯಲ್ಲಿ ಕೊಳಲು ಅಭ್ಯಾಸ ಮಾಡಲು ಆರಂಭಿಸಿದ್ದಾನೆ. ಇದೀಗ ರಂಗಮಯೂರಿ ತಂಡ ಪ್ರದರ್ಶನ ಮಾಡುವ `ಮಾಯಕ’ ನಾಟಕದಲ್ಲಿ ಹಿನ್ನಲೆ ಸಂಗೀತದಲ್ಲಿ ಕೊಳಲು ನುಡಿಸಿ ಗಮನ ಸೆಳೆದಿದ್ದಾನೆ. ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಮಿಂಚಬೇಕೆನ್ನುವ ಬಯಕೆ ಈತನದ್ದು. ರಂಗಮನೆಯ ನಿರ್ದೇಶಕ ಲೋಕೇಶ್ ಊರುಬೈಲು ಡ್ರಮ್, ಚೆಂಡೆ ಮೂಲಕ ಆಥವಾ ಸಿಳ್ಳೆ ಹೊಡೆದು ಹೊರಡಿಸುವ ಯಾವುದೇ ಶಬ್ದ ಅಥವಾ ಹಾಡುಗಳನ್ನು ಹರ್ಷಿತ್ ಅದೇ ರೀತಿಯಲ್ಲಿ ತನ್ನ ಕೊಳಲ ಮೂಲಕ ಪ್ರಸ್ತುತಪಡಿಸಿ ಚಪ್ಪಾಳೆ ಗಿಟ್ಟಿಸುತ್ತಾನೆ.

ಕೊಳಲು ನುಡಿಸುವುದನ್ನು ನೋಡಿಯೇ ಕೊಳಲು ವಾದನವನ್ನು ಕಲಿತದ್ದು. ಕೊಳಲನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಬೇಕೆಂಬ ಹಂಬಲ ಇದೆ. ಕೊಳಲು ವಾದನ ತಂದೆ-ತಾಯಿ ಮತ್ತು ಸಂಬಂಧಿಕರು ಪ್ರೋತ್ಸಾಹ ನೀಡುತ್ತಾರೆ ಎನುತ್ತಾನೆ ಹರ್ಷಿತ್.

ಕೊಳಲು ನಿರ್ಮಾಣವೂ ಕರಗತ
ಕೊಳನ್ನು ಊದುವುದು ಮಾತ್ರವಲ್ಲದೆ ಸ್ವಂತ ಕೊಳಲನ್ನು ನಿರ್ಮಿಸುವುದರಲ್ಲಿಯೂ ಈತ ಎತ್ತಿದ ಕೈ. ತಾನು ಊದುವ ಕೊಳಲನ್ನು ತಾನೇ ನಿರ್ಮಿಸುತ್ತಾನೆ. ವಿವಿಧ ಮಾದರಿಯ ಸುಮಾರು ಐವತ್ತಕ್ಕೂ ಹೆಚ್ಚು ಕೊಳಲನ್ನು ಈತ ನಿರ್ಮಿಸಿದ್ದಾನೆ. ಓಟೆ ಬಿದಿರನ್ನು ತಂದು ಹದ ಮಾಡಿ ವಿವಿಧ ಶ್ರುತಿ, ತಾಳಗಳಿಗೆ ತಕ್ಕಂತೆ ಕೊಳಲನ್ನು ನಿರ್ಮಿಸುತ್ತಾನೆ. ತನ್ನ ಹಿರಿಯರು ಕೊಳಲು ಮಾಡುವುದನ್ನು ನೋಡಿಯೇ ಕೊಳಲು ನಿರ್ಮಾಣವನ್ನೂ ಹರ್ಷಿತ್ ಕರಗತ ಮಾಡಿಕೊಂಡಿದ್ದಾನೆ. `ರಂಗಮಯೂರಿ ಕಲಾಶಾಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಅತ್ಯಂತ ಪ್ರತಿಭಾವಂತ ಹರ್ಷಿತ್. ಈತನ ಕೊಳಲು ವಾದನ ಕೇಳುವುದೇ ಅತ್ಯಂತ ಖುಷಿ ಕೊಡುತ್ತದೆ. ಯಾವುದೇ ಹಾಡು, ಡ್ರಮ್ ಶಬ್ಗಗಳನ್ನು ಅದೇ ರೀತಿಯಲ್ಲಿ ಕೊಳಲ ಮೂಲಕ ಕೂಡಲೇ ಪ್ರಸ್ತುತಪಡಿಸುತ್ತಾನೆ. ಅಲ್ಲದೆ ಸ್ವಂತ ಕೊಳಲನ್ನು ನಿರ್ಮಿಸುತ್ತಾನೆ ಎನ್ನುತ್ತಾರೆ ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು.

See also  ‘ಮೋದಿ ಸರ್ಕಾರದಿಂದ ಜನರಿಗೆ ಕೇವಲ ಭಾಷಣ ಭಾಗ್ಯ’
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು