News Kannada
Thursday, October 06 2022

ಕರಾವಳಿ

ದ್ವಿಚಕ್ರ ಸವಾರ ರಸ್ತೆಯಲ್ಲೇ ಕುಸಿದು ಬಿದ್ದು ಸಾವು - 1 min read

Photo Credit :

ದ್ವಿಚಕ್ರ ಸವಾರ ರಸ್ತೆಯಲ್ಲೇ ಕುಸಿದು ಬಿದ್ದು ಸಾವು

ಮೂಡುಬಿದಿರೆ: ಯುವಕನೋರ್ವ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ದುರ್ಘಟನೆ ಮೂಡುಬಿದಿರೆ ಪೇಟೆಯ ಲಾವಂತ ಬೆಟ್ಟು ರಸ್ತೆಯಲ್ಲಿ ಮಂಗಳವಾರ ನಡೆದಿದೆ.

ಮಾರೂರಿನ ದಿ.ಗಣಪತಿ ಆಚಾರ್ಯರ ಏಕೈಕ ಪುತ್ರ ಪ್ರಸಾದ್ ಆಚಾರ್ಯ(32) ಮೃತಪಟ್ಟ ಯುವಕ. ಪ್ರಸಾದ್ ಯಾವುದೋ ಕೆಲಸಕ್ಕಾಗಿ ತನ್ನ ಆಕ್ಟಿವಾದಲ್ಲಿ ಮೂಡುಬಿದಿರೆಗೆ ಬಂದವರು ಮರಳಿ ಮಾರೂರಿನ ತನ್ನ ಮನೆಗೆ ಹೊರಟಿದ್ದು ಪೇಟೆಯಲ್ಲಿ ಪ್ರಕಾಶ್ ಆಯಿಲ್ ಮಿಲ್ ಬಳಿ ಬಂದಾಗ ನಡು ರಸ್ತೆಯಲ್ಲೇ ವಾಹನ ನಿಲ್ಲಿಸಿ ಒಂದೆರಡು ನಿಮಿಷ ನಿಂತಿದ್ದಾರೆ. ಬಳಿಕ ಅಲ್ಲೇ ಕುಸಿದು ಬಿದ್ದಾಗ ಸ್ಥಳೀಯರು ಧಾವಿಸಿ ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದರಾದರೂ ಪ್ರಸಾದ್ ಅದಾಗಲೇ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು ಎನ್ನಲಾಗಿದೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವಿವಾಹಿತರಾಗಿದ್ದ ಪ್ರಸಾದ್ ಹಲವು ವರ್ಷಗಳಿಂದ ವಿದೇಶದಲ್ಲಿದ್ದು ಇತ್ತೀಚೆಗೆ ಬೆಂಗಳೂರಿನಲ್ಲಿ ಇಂಟೀರಿಯರ್ ಡೆಕೋರೇಶನ್ ಸಿಬ್ಬಂದಿಯಾಗಿದ್ದರು. ಊರಿಗೆ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು ಮನೆಯ ಆಧಾರ ಸ್ಥಂಭವಾಗಿದ್ದ ಪ್ರಸಾದ್ ತಾಯಿ, ಹಾಗೂ ಏಳು ಮಂದಿ ಸಹೋದರಿಯರನ್ನು ಅಗಲಿದ್ದಾರೆ.

See also  ಗ್ರೇಇಂಡರ್ ಗೆ ಶಾಲು ಸಿಲುಕಿ ಗ್ರಹಿಣಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು