News Kannada
Tuesday, October 04 2022

ಕರಾವಳಿ

ಇಂದಿರಾ ಆವಾಜ್ ಯೋಜನೆಯ ಹಣ ವಂಚನೆ ಪ್ರಕರಣ: ಶಿಕ್ಷೆ - 1 min read

Photo Credit :

ಇಂದಿರಾ ಆವಾಜ್ ಯೋಜನೆಯ ಹಣ ವಂಚನೆ ಪ್ರಕರಣ: ಶಿಕ್ಷೆ

ಬೆಳ್ತಂಗಡಿ: ಇಂದಿರಾ ಆವಾಸ್ ಯೋಜನೆಯ ಹಣವನ್ನು ಗುಳುಂ ಮಾಡಿದ ಪ್ರಕರಣವೊಂದರಲ್ಲಿ ಗ್ರಾ.ಪಂ ಕಾರ್ಯದರ್ಶಿ ಹಾಗೂ ಅಧ್ಯಕ್ಷನಿಗೆ ಬೆಳ್ತಂಗಡಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾ.ಪಂ.ಗೆ ಬಂದ ಇಂದಿರಾ ಅವಾಜ್ ವಸತಿ ಯೋಜನೆಯ ಫಲಾನುಭವಿಗಳಿಗೆ ನೀಡುವ ಮೊತ್ತವನ್ನು ವಂಚಿಸಿದ ಪ್ರಕರಣ ಇದಾಗಿದೆ. 

ಈ ಪ್ರಕರಣದಲ್ಲಿ 1ನೇ ಆರೋಪಿ ಗ್ರಾ.ಪಂ.ನ ಕಾರ್ಯದರ್ಶಿ ಶೀನ ಹಾಗೂ 2ನೇ ಆರೋಪಿ ಅಧ್ಯಕ್ಷ ಮಹೇಶ್‍ಗೆ ನ್ಯಾಯಾಲಯವು ಕಲಂ 409 ಜತೆಗೆ 34 ಐಪಿಸಿಯಂತೆ ಒಂದು ವರ್ಷ ಶಿಕ್ಷೆ ಹಾಗೂ ಕಲಂ 420 ಜತೆಗೆ 34 ಐಪಿಸಿಯಂತೆ 6 ತಿಂಗಳು ಶಿಕ್ಷೆ ವಿಧಿಸಿದೆ. ಜತೆಗೆ ಎರಡೂ ಕಲಂಗಳಲ್ಲೂ ತಲಾ 5 ಸಾವಿರ ರೂ.ದಂಡ ವಿಧಿಸಿದೆ.

2009ರಲ್ಲಿ ಬ್ಯಾಂಕೊಂದರ ಬೆಳ್ತಂಗಡಿ ಶಾಖೆಯಲ್ಲಿದ್ದ ಇಂದಿರಾ ಅವಾಜ್ ವಸತಿ ಯೋಜನೆಯ ಗ್ರಾ.ಪಂ. ಖಾತೆಗೆ ಬಂದಿದ್ದ 3,05,000 ರೂ.ಗಳನ್ನು ದುರುಪಯೋಗ ಪಡಿಸಿಕೊಂಡು ಫಲಾನುಭವಿಗಳಿಗೆ ವಂಚಿಸಿದ್ದರು. ಇಬ್ಬರೂ ಚೆಕ್‍ಗೆ ಸಹಿ ಹಾಕಿ ಅದೇ ಬ್ಯಾಂಕಿನಲ್ಲಿದ್ದ ಕಾರ್ಯದರ್ಶಿಯ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದರು.

ಈ ಕುರಿತು ನ್ಯಾಯಾಲಯಕ್ಕೆ ಪುತ್ತೂರು ಗ್ರಾಮಾಂತರ ವೃತ್ತದ ಅಂದಿನ ನೀರಿಕ್ಷಕರುಗಳಾದ ಕೆ.ನಾಗೇಶ್ ಹಾಗೂ ಬಿ.ಕೆ.ಮಂಜಯ್ಯ ಅವರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಬೆಳ್ತಂಗಡಿ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಬಿ.ಕೆ.ಕೋಮಲ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕ ಜಿ.ಕೆ.ಕಿರಣ್‍ಕುಮಾರ್ ಅವರು ಸರಕಾರದ ಪರ ವಾದಿಸಿದ್ದರು.

 

 

See also  ನೇತ್ರಾವತಿ ನದಿಗೆ ಸ್ನಾನಕ್ಕಿಳಿದ ವ್ಯಕ್ತಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು