News Kannada
Thursday, October 06 2022

ಕರಾವಳಿ

ದಡ್ಡಲಕಾಡು ಶಾಲೆಯ ಕಟ್ಟದ ಲೋಕಾರ್ಪಣೆ ಮಾಡಿದ ರಾಜ್ಯಪಾಲ ವಜೂಭಾಯಿ - 1 min read

Photo Credit :

ದಡ್ಡಲಕಾಡು ಶಾಲೆಯ ಕಟ್ಟದ ಲೋಕಾರ್ಪಣೆ ಮಾಡಿದ ರಾಜ್ಯಪಾಲ ವಜೂಭಾಯಿ

ಬಂಟ್ವಾಳ; ಪ್ರಾದೇಶಿಕ ಭಾಷೆಗೆ ಶಿಕ್ಷಣದಲ್ಲಿ ಒತ್ತು ನೀಡಬೇಕೆಂಬ ನಿಲುವನ್ನು ನಾನು ಒಪ್ಪುತ್ತೇನೆ, ಈ ನಡುವೆ ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಬೇಕೇ ಅಥವಾ, ಆಂಗ್ಲ ಮಾಧ್ಯಮ ಶಿಕ್ಷಣ ಬೇಕೆ ಎಂಬ ವಿಚಾರದ ಬಗ್ಗೆ ಚರ್ಚೆ-ವಿಮರ್ಶೆಗಳು ನಡೆಯುತ್ತಿದೆ. ಆದರೆ ಪ್ರಜೆಗಳು ತಮ್ಮ ದನಿಯನ್ನು ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುವುದರಿಂದ ಮಾತ್ರವೇ ಸರ್ಕಾರಗಳ ನೀತಿಗೂ ಸ್ಪಷ್ಟ ರೂಪಬರಲು ಸಾಧ್ಯ ಎಂದು ರಾಜ್ಯಪಾಲ ವಜೂಭಾಯಿ ರೂಢಾಬಾಯಿವಾಲಾ ಹೇಳಿದರು.

ಬಂಟ್ವಾಳ ತಾಲೂಕಿನ ದಡ್ಡಲಕಾಡು ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಮೇಲಂತಸ್ತಿನ ಕಟ್ಟಡವನ್ನು ಶನಿವಾರ ಲೋಕಾರ್ಪಣೆ ಮಾಡಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಆಗಬೇಕು ಎಂದು ಶಾಸನ ಮಾಡುವವರ ಮಕ್ಕಳು ಇಂಗ್ಲೀಷ್ ಮೀಡಿಯಂನಲ್ಲಿ ಕಲಿಯುತ್ತಿದ್ದಾರೆ. ಯಾರಲ್ಲಿ ಹೆಚ್ಚು ಹಣವಿದೆಯೋ ಅವರು ಆಂಗ್ಲ ಮಾಧ್ಯಮ, ಇಲ್ಲದವರು ಸರಕಾರಿ ಶಾಲೆಗಳಲ್ಲಿ ಕಲಿಯುವ ಪರಿಸ್ಥಿತಿ ಇಂದು ಇದೆ. ಆದರೆ ಇದು ಬದಲಾಗಬೇಕು ಎಂದಿದ್ದರೆ ನೀವು ಎಲ್ಲದಕ್ಕೂ ಹೂಂಗುಟ್ಟುವದನ್ನು ಬಿಡಿ, ಗಟ್ಟಿ ಧ್ವನಿಯಲ್ಲಿ ನಿಮಗೇನು ಬೇಕೋ ಅದನ್ನು ಆಗ್ರಹಿಸಿ. ಅಂತಿಮವಾಗಿ ಜನಾಗ್ರಹವನ್ನೇ ಸರಕಾರ ಶಾಸನ ಮಾಡುತ್ತದೆ ಎಂದು ರಾಜ್ಯಪಾಲರು ಕಿವಿಮಾತು ಹೇಳಿದರು.

ಪ್ರಾದೇಶಿಕ ಭಾಷೆಗೆ ಒಲವು ನೀಡಿ; ಕರ್ನಾಟಕದ ನಿವಾಸಿಗಳು ಕನ್ನಡ ಭಾಷೆಯಲ್ಲಿ ಬರೆಯುವ, ಓದುವ ಮತ್ತು ತಿಳಿಯುವ ಅವಶ್ಯಕತೆ ಹಾಗೂ ಅಗತ್ಯ ಪ್ರತಿಯೊಬ್ಬ ಕರ್ನಾಟಕವಾಸಿಗೂ ಇದೆ. ಪ್ರತಿಯೊಂದು ರಾಜ್ಯದಲ್ಲೂ ಒಂದೇ ನೀತಿ ಇರಬೇಕು ಎಂದ ಅವರು,ರಾಜ್ಯದಲ್ಲಿ ವಾಸಿಸುವವರಿಗೆ ಪ್ರಾದೇಶಿಕ ಭಾಷಾ ಜ್ಞಾನ ಇರಬೇಕು , ಶಿಕ್ಷಣ ಆಂಗ್ಲಮಾಧ್ಯಮವಾಗಿ ಬೇಕಾಗಿಲ್ಲ, ಆದರೆ ಆಂಗ್ಲ ಭಾಷಾ ಶಿಕ್ಷಣವೂ ಬೇಕು ಎಂದರು. ಕಡಿಮೆ ಸಂಖ್ಯೆಯಲ್ಲಿರುವ ಮಕ್ಕಳನ್ನು ಹೊಂದಿದ್ದ ಈ ಶಾಲೆ ಇಂದು ಸಮೃದ್ಧವಾಗಿದೆ. ಯಾರಿಗೆ ನಾನು ಸಾಧಿಸುತ್ತೇನೆ ಎಂಬ ಆತ್ಮವಿಶ್ವಾಸ ಇದೆಯೋ ಅವರಿಂದ ಈ ಕಾರ್ಯ ಸಾಧ್ಯ ಈ ನಿಟ್ಟಿನಲ್ಲಿ ಈ ಹಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಗ್ರಾಮೀಣ ವಿದ್ಯಾರ್ಥಿಗಳೇ ಮುಂದು..

ಇಂದು ಪಟ್ಟಣದ ವಿದ್ಯಾರ್ಥಿಗಳಿಗಿಂತ ಕಂಪ್ಯೂಟರ್ ನಂಥಾ ತಂತ್ರಜ್ಞಾನದ ಕಲಿಯುವಿಕೆಯಲ್ಲಿ ಹಳ್ಳಿಯ ವಿದ್ಯಾರ್ಥಿಗಳು ಮುಂದಿರುತ್ತಾರೆ. ಗ್ರಾಮೀಣ ವಿದ್ಯಾರ್ಥಿಗಳು ಜ್ಞಾನಸಂಪನ್ನರು. ಆದರೆ ಅವರಿಗೆ ಕಲಿಯುವ ಅವಕಾಶ ಬೇಕು. ಅತ್ಯಂತ ಶಿಸ್ತಿನಿಂದ ಕಲಿಯುವ ಮಕ್ಕಳು ಹಳ್ಳಿಯ ವಿದ್ಯಾರ್ಥಿಗಳು. ಮಂಗಳೂರಿನಲ್ಲಿ ಇಂದು ಉತ್ತಮ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಿರುವ ಪಟ್ಟಣವಾಸಿಗಳ ಪೂರ್ವಜರು ಹಳ್ಳಿಯಲ್ಲೇ ಕಲಿತವರು. ಉತ್ತಮ ಶಿಕ್ಷಣದಿಂದ ಇದು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಬಾಲಕ, ಬಾಲಕಿಗೂ ಅವರಿಗಿರುವ ಬುದ್ಧಿಶಕ್ತಿಯನ್ನು ಉಪಯೋಗಿಸಲು ವಿದ್ಯೆಯನ್ನು ಒದಗಿಸಲು ಪ್ರಯತ್ನಶೀಲರಾಗಬೇಕು. ವಿದ್ಯಾದಾನಕ್ಕೆ ಪೆÇ್ರೀತ್ಸಾಹವೂ ಬೇಕು ಎಂದು ಅವರು ತಿಳಿಸಿದರು. 

ಅನ್ನದಾನ, ಕನ್ಯಾದಾನಗಳಿಗಿಂತಲೂ ವಿದ್ಯಾದಾನವೇ ಶ್ರೇಷ್ಠ ಎಂದ ರಾಜ್ಯಪಾಲರು, ವಿದ್ಯೆಯೊಂದಿದ್ದರೆ ಪ್ರಪಂಚದ ಎಲ್ಲ ಭಾಷೆಗಳನ್ನು ಕಲಿಯಬಹುದು. ನಮ್ಮ ದೇಶ ಪ್ರಗತಿಯಾಗಿದೆ ಎಂಬುದನ್ನು ನಿರೂಪಿಸಬೇಕಾದರೆ ಶೇ.100 ಸಾಕ್ಷರವಾಗಬೇಕು. ಓದುವುದು-ಬರೆಯುವುದು ಮಾತ್ರವೇ ಶಿಕ್ಷಣವಲ್ಲ, ಎಲ್ಲರೂ ಪದವಿ, ಸ್ನಾತಕೋತ್ತರ ಪದವಿಯನ್ನು ಪಡೆಯುವ ಗುರಿ ಹೊಂದಬೇಕು. ಎಲ್ಲರಿಗೂ ಶಿಕ್ಷಣ ದೊರಕಿಸುವುದು ನಮ್ಮ ಧ್ಯೇಯವಾಗಬೇಕು ಎಂದು ಹೇಳಿದ ರಾಜ್ಯಪಾಲರು, ತಿನ್ನುವುದರಲ್ಲಿ ಆನಂದಪಡುವವನು ಹೇಗೆ ಹಸಿದವನನ್ನು ಹೊಟ್ಟೆ ತುಂಬಿಸುವತ್ತ ಗಮನ ನೀಡಬೇಕೋ ಹಾಗೆ ವಿದ್ಯೆಯನ್ನು ಎಲ್ಲರೂ ಹೊಂದುವಂತೆ ಮಾಡುವುದು ನಮ್ಮ ಧ್ಯೇಯವಾಗಬೇಕು. ಇದು ಭಾರತೀಯ ಸಂಸೃತಿಯೂ ಹೌದು ಎಂದರು.

See also  ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆಯತ್ನ !

ಗುರುಗೋವಿಂದ ಸಿಂಗ್ ಜಯಂತಿ ಸನಿಹದಲ್ಲಿ ಬರುತ್ತಿದೆ. ಪ್ರತಿಯೊಬ್ಬ ಭಾರತೀಯನೂ ಧೈರ್ಯಶಾಲಿಗಳಾಗಬೇಕು. ಪುಕ್ಕಲುಗಳಾಗಬೇಡಿ ಎಂಬ ಗುರು ವಾಕ್ಯದಂತೆ ಹಾಗೂ ಉತ್ತಿಷ್ಠ, ಜಾಗೃತ ಎಂಬ ವಿವೇಕಾನಂದರ ವಾಕ್ಯದಂತೆ ನಾವು ತೊಡಗಿಸಿಕೊಳ್ಳಬೇಕು. ನಿಮ್ಮ ಧೈರ್ಯವನ್ನು ದೇಹದಲ್ಲಿ ಜಾಗೃತಗೊಳಿಸಿ, ರಾಷ್ಟ್ರಕ್ಕಾಗಿ ಬದುಕುವ ಸಂಕಲ್ಪ ಮಾಡಿ, ಜ್ಞಾನಿಗಳಾಗಿ ಮತ್ತು ಧೈರ್ಯಶಾಲಿಗಳಾಗಿ, ದಡ್ಡಲಕಾಡು ಶಾಲೆ ವಿಶ್ವವಿದ್ಯಾನಿಲಯದ ಮಟ್ಟಕ್ಕೆ ಏರಲಿ ಎಂದು ಹೇಳಿದ ರಾಜ್ಯಪಾಲರು, ಭಾರತ ಮಾತಾ ಕಿ ಜೈ ಎಂದು ಸಭಾಸದರಲ್ಲಿ ಹೇಳಲು ತಿಳಿಸಿದರು. ಸಭೆಯಲ್ಲಿನ ಜನರ ಧ್ವನಿಗೆ ಉತ್ತೇಜಿತರಾಗಿ ಮೂರು ಬಾರಿ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಮೊಳಗಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ,ಮಕ್ಕಳು ಸಹಿತ ಮೂಲಭೂತ ಸೌಕರ್ಯಗಳ ಕೊರತೆಯಿಂದ ಮುಚ್ಚುವ ಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ದಡ್ಡಲಕಾಡು ಶಾಲೆ ರಾಜ್ಯಕ್ಕೇ ಮಾದರಿಯಾಗಿದ್ದು, ಶಿಕ್ಷಣ ಕ್ಷೇತ್ರದ ಕತ್ತಲನ್ನು ದೂರಮಾಡುವ ಕಾರ್ಯ ಇಲ್ಲಿನ ದುರ್ಗಾಫ್ರೆಂಡ್ಸ್ ಕ್ಲಬ್ ನ ಯುವಕರಿಂದ ಆಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಸರ್ಕಾರ ಮಾಡಬೇಕಾದ ಕಾರ್ಯವನ್ನು ಮಾಡುವ ಮೂಲಕ ಮೂಡನಡುಗೋಡು ಗ್ರಾಮಮಟ್ಟದಲ್ಲಿ ಹೊಸ ಇತಿಹಾಸ ನಿರ್ಮಾಣ ಆಗಿದೆ ಎಂದವರು ಶ್ಲಾಘಿಸಿದರು. ರಾಜ್ಯಪಾಲರು ಭೇಟಿನೀಡಿದ ಈ ಗ್ರಾಮವನ್ನು ಮುಂದಿನ ದಿನಗಳಲ್ಲಿ ಅವರ ಅಪೇಕ್ಷೆಯಂತೇ ಮದ್ಯವ್ಯಸನ ಮುಕ್ತ-ಆದರ್ಶಗ್ರಾಮವಾಗಿಸುವುದಾಗಿ ಅವರು ಈ ಸಂದರ್ಭ ಘೋಷಿಸಿದರು.

ವಿಧಾನಪರಿಷತ್ತಿನ ವಿರೋಧಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಒಟ್ಟು 48 ಸಾವಿರ ಸರ್ಕಾರಿ ಶಾಲೆಗಳ ಪೈಕಿ 4000 ಶಾಲೆಗಳು ಮುಚ್ಚುವ ಭೀತಿ ಎದುರಿಸುತ್ತಿದೆ. ಇದಕ್ಕೆಲ್ಲಾ ಅಪವಾದ ವೆಂಬಂತೆ ದಡ್ಡಲಕಾಡು ಶಾಲೆ ಸರ್ಕಾರದ ಕಣ್ಣುತೆರೆಸುವ ಹಂತದವರೆಗೆ ಬೆಳೆದು ನಿಂತಿರುವುದು ಶ್ಲಾಘನೀಯ ಎಂದರು.

ವಕೀಲ ಎಸ್. ರಾಜಶೇಖರ ಹಿಳಿಯೂರು ಮಾತನಾಡಿ, ಸರ್ಕಾರಿ ಶಾಲೆ ಉಳಿಸಿ ಹೋರಾಟವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಚುರುಕಿನಿಂದ ಮುಂದುವರಿಸುತ್ತೇವೆ, ವಿದ್ಯಾಬಿಮಾನಿಗಳು, ದಾನಿಗಳ ನೆರವಿನಿಂದ ಮುಚ್ಚುವ ಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳ ಉಳಿಸಲು ಯೋಜನೆ ರೂಪಿಸುವುದಾಗಿ ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಹಿಂದೆ ಪಠ್ಯಪುಸ್ತಕ ವಿಚಾರ ಸಹಿತ ಹಲವು ಸಂಕಷ್ಟದ ಸ್ಥಿತಿಯಲ್ಲಿ ಶಾಲೆಯ ಪರವಾಗಿ ಬೀದಿಯಲ್ಲಿ ಪ್ರತಿಭಟನೆ ನಡೆಸಿದ್ದು ಈಗ ಸಾರ್ಥಕವಾಗಿದೆ. ತನ್ನ ಕ್ಷೇತ್ರದ ಶಾಲೆಯೊಂದಕ್ಕೆ ರಾಜ್ಯಪಾಲರು ಆಗಮಿಸಿರುವುದು ಹೆಮ್ಮೆಯೆನಿಸುತ್ತಿದೆ ಎಂದರು.

ಸರಕಾರಿ ಶಾಲೆ ಉಳಿಸಿ ಬೆಳೆಸಿ -ರಾಜ್ಯ ಸಮಿತಿ ಹಾಗೂ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಏಕರೂಪದ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಈ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ. ರಾಜ್ಯದ ಎಲ್ಲ ಮಕ್ಕಳಿಗೂ ಬಡವ, ಶ್ರೀಮಂತ ಬೇಧವಿಲ್ಲದೆ ಶಿಕ್ಷಣ ದೊರಕಬೇಕು, ಇದು ದೇಶಕ್ಕೆ ವಿಸ್ತರಿಸಬೇಕು ಎಂಬ ಸದಾಶಯದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಡಿಡಿಪಿಐ ವೈ.ಶಿವರಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ತಾ.ಪಂ.ಸದಸ್ಯರಾದ ಪ್ರಭಾಕರ ಪ್ರಭು, ಗಣೇಶ ಸುವರ್ಣ, ಪದ್ಮಾವತಿ ಸಹಿತ ಹಲವರು ಈ ಸಂದರ್ಭ ಉಪಸ್ಥಿತರಿದ್ದರು. ಪುರುಷೋತ್ತಮ ಅಂಚನ್ ವಂದಿಸಿದರು. ಶಿಕ್ಷಕಿ ಹಿಲ್ಡಾ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

See also  ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗೆ ಕೊರೋನಾ ಪಾಸಿಟಿವ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು