News Kannada
Sunday, September 25 2022

ಕರಾವಳಿ

ಎಂಆರ್ ಪಿಎಲ್ ವಿರುದ್ಧ ಪೊರಕೆ ಪ್ರತಿಭಟನೆ - 1 min read

Photo Credit :

ಎಂಆರ್ ಪಿಎಲ್ ವಿರುದ್ಧ ಪೊರಕೆ ಪ್ರತಿಭಟನೆ

ಮಂಗಳೂರು: ಎಂಆರ್ ಪಿಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದಿಂದ ಪರಿಸರ ಮಾಲಿನ್ಯವಾಗುತ್ತಿದೆ ಎನ್ನುವುದನ್ನು ಮುಂದಿರಿಸಿಕೊಂಡು ಗುರುವಾರ ಬೆಳಗ್ಗೆ ಇಲ್ಲಿನ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಪೊರಕೆ ಮೆರವಣಿಗೆ ನಡೆಯಿತು.

ಧರಣಿಯಲ್ಲಿ ಎಂಆರ್ ಪಿಎಲ್ ಸುತ್ತಮುತ್ತದ ಹಲವಾರು ಗ್ರಾಮಸ್ಥರು ಭಾಗವಹಿಸಿದ್ದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ನಾಗರಿಕ ಹೋರಾಟ ಸಮಿತಿಯ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿದರು.

ಕಾಟಿಪಳ್ಳ, ಜೋಕಟ್ಟೆ, ಕಳವಾರು, ತೋಕುರು ಗ್ರಾಮಸ್ಥರು ವರ್ಷಗಳ ಕಾಲ ನಡೆಸಿದ ಹೋರಾಟದ ಫಲವಾಗಿ ಸರ್ಕಾರ ಹೊರಡಿಸಿದ ಆರು ಅಂಶಗಳ ಪರಿಹಾರ ಕ್ರಮದ ಆದೇಶವನ್ನು ಜಾರಿಗೆ ತರಲು ಎಂಆರ್ ಪಿಎಲ್ ಹಿಂದೇಟು ಹಾಕಿದೆ. ಜಿಲ್ಲಾಡಳಿತ ಕೂಡ ಕಂಪೆನಿ ಜತೆ ಸೇರಿ ಚೆಲ್ಲಾಟವಾಡುತ್ತಿದೆ ಎಂದು ಮುನೀರ್ ಆರೋಪಿಸಿದರು.

ಸುತ್ತಲಿನ ಜನರು ಮಾರಕ ಮಾಲಿನ್ಯದಿಂದ ಕಂಗೆಟ್ಟಿದ್ದು, ಮುಂದಿನ ದಿನಗಳಲ್ಲಿ ತೀವ್ರ ರೀತಿಯಲ್ಲಿ ಹೋರಾಟ ನಡೆಸಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.

See also  ಕಲ್ಲಮುಂಡ್ಕೂರು ಗ್ರಾಪಂಗೆ ಸಿಎಂ ಯಡಿಯೂರಪ್ಪ ಗಾಂಧಿಗ್ರಾಮ ಪುರಸ್ಕಾರ ಪ್ರದಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು