News Kannada
Friday, October 07 2022

ಕರಾವಳಿ

ಗಿಳಿಗಳ ಮಾರಾಟ ಯತ್ನ: ಬಂಟ್ವಾಳದಲ್ಲಿ ಆರೋಪಿ ಸೆರೆ - 1 min read

Photo Credit :

ಗಿಳಿಗಳ ಮಾರಾಟ ಯತ್ನ: ಬಂಟ್ವಾಳದಲ್ಲಿ ಆರೋಪಿ ಸೆರೆ

ಬಂಟ್ವಾಳ: ಗಿಳಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಬೆಂಗಳೂರು ಸಿ.ಐ.ಡಿ.ಪೋಲೀಸರು ಬಂಟ್ವಾಳದಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಅಬ್ದುಲ್ ಲತೀಪ್ ಎಂಬಾತ ಬಂಧಿತ ಆರೋಪಿ.

ಬಂಟ್ವಾಳ ತಾಲೂಕಿನ ಮೆಲ್ಕಾರ್ ಎಂಬಲ್ಲಿ ಎರಡು ಪಂಜರದಲ್ಲಿ ಸುಮಾರು 26 ಜೀವಂತ ಗಿಳಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಬೆಂಗಳೂರು ಸಿ.ಐ.ಡಿ.ಎಸ್.ಐ.ಹೆಚ್.ಕೆ.ರವಿಕುಮಾರ್ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.

ಅಬ್ದುಲ್ ಲತೀಪ್ ತಮಿಳುನಾಡಿನಿಂದ ಗಿಳಿಗಳನ್ನು ತರಿಸಿ ಈ ಹಿಂದೆ ಅನೇಕ ಗಿಳಿಗಳ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದಾರೆ. ‌

ನಿನ್ನೆ ರಾತ್ರಿ ಬಂಟ್ವಾಳಕ್ಕೆ ಅಗಮಿಸಿದ ಬೆಂಗಳೂರು ಸಿ.ಐ.ಡಿ.ಪೋಲೀಸರು, ಮೆಲ್ಕಾರ್ ಎಂಬಲ್ಲಿ ಗಿಳಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುರುವ ವೇಳೆ ರೆಡ್ ಹ್ಯಾಂಡ್ ಅಗಿ ಬಂಧಿಸಿದ್ದಾರೆ. ಬಳಿಕ ಬಂಟ್ವಾಳ ವಲಯ ಅರಣ್ಯಾಧಿಕಾರಿಯವರಿಗೆ ಪ್ರಕರಣವನ್ನು ಹಸ್ತಾಂತರ ಮಾಡಿದ್ದಾರೆ.

ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1072 ರಡಿಯಲ್ಲಿ ಕೇಸು ದಾಖಲಿಸಿ ಬಂಟ್ವಾಳ ವಲಯ ಅರಣ್ಯ ಅಧಿಕಾರಿಗಳು 26 ಜೀವಂತ ಗಿಳಿಗಳನ್ನು ಹಾಗೂ ಆರೋಪಿಗಳನ್ನು ಬಂಟ್ವಾಳ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮುಂದಿನ ತನಿಖೆಯನ್ನು ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಶಂಕರೇ ಗೌಡ ಅವರು ನಡೆಸುತ್ತಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಬಿ.ಸುರೇಶ್, ಉಪವಲಯ ಅರಣ್ಯಾಧಿಕಾರಿ ಯಶೋಧರ, ಪ್ರೀತಂ, ಅರಣ್ಯ ರಕ್ಷಕರಾದ ವಿನಯ್, ಜಿತೇಶ್ ಬಿ. ದಯಾನಂದ, ಮತ್ತು ಸಿಬ್ಬಂದಿ ಹಾಜರಿದ್ದರು.

See also  ನೆರೆಮನೆಯಾತನ ಮೇಲೆ ಕೋಪ: ತನ್ನ ಮನೆಗೆ ಬೆಂಕಿ ಕೊಟ್ಟ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು