News Kannada
Thursday, October 06 2022

ಕರಾವಳಿ

ಜವನೆರ್ ಬೆದ್ರದಿಂದ ವಿವೇಕೋತ್ಸವ, ವಿವೇಕ್ ಪುರಸ್ಕಾರ್ ಪ್ರದಾನ - 1 min read

Photo Credit :

ಜವನೆರ್ ಬೆದ್ರದಿಂದ ವಿವೇಕೋತ್ಸವ, ವಿವೇಕ್ ಪುರಸ್ಕಾರ್ ಪ್ರದಾನ

ಮೂಡುಬಿದಿರೆ: ಐತಿಹಾಸಿಕ ಪ್ರಜ್ಞೆ, ಸಮಾಜಸೇವೆ, ಸ್ವಚ್ಛತಾ ಆಂದೋಲನದಂತಹ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ಜವನೆರ್ ಬೆದ್ರ ಸಂಘಟನೆಯು ವಿವೇಕಾನಂದ ಜಯಂತಿ, ರಾಷ್ಟ್ರೀಯ ಯುವ ದಿವಸ್ ಹಾಗೂ ಸಂಘಟನೆಯ ದ್ವಿತೀಯ ಸಂಭ್ರಮವನ್ನು `ವಿವೇಕೋತ್ಸವ 2019′ ಕಾರ್ಯಕ್ರಮದ ಮೂಲಕ ಸಮಾಜಮಂದಿರದಲ್ಲಿ ಆಯೋಜಿಸಿತು.

ಯುವ ಹಿನ್ನೆಲೆ ಗಾಯಕ ನಿಹಾಲ್ ತಾವ್ರೊ, ನಿರೂಪಕ ನಿತೇಶ್ ಪೂಜಾರಿ ಮಾರ್ನಾಡ್, ಅಂತಾರಾಷ್ಟ್ರೀಯ ಕರಾಟೆಪಟು ಸುಪಾಶ್ರ್ವ ಕೊಂಬ, ಉದಯೋನ್ಮುಖ ಚಿತ್ರಕಲಾವಿದ ಸ್ವಾತಿ ಕುಲಾಲ್ ಹಾಗೂ ಶೈಕ್ಷಣಿಕ ಸಾಧಕ ವಿಕ್ರಂ ಕಿಣಿ ಅವರಿಗೆ `ವಿವೇಕ್ ಪುರಸ್ಕಾರ್ 2019′ ನೀಡಿ ಗೌರವಿಸಲಾಯಿತು.

ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್ ಕಾರ್ಯಕ್ರಮ ಉದ್ಘಾಟಿಸಿ, ಪಕ್ಷದ ಚೌಕಟ್ಟಿಗೆ ಯುವಕರನ್ನು ಸೆಳೆಯದೆ, ಸಾಮಾಜಿಕ ಕಳಕಳಿ, ಯುವಜನರನ್ನು ಬಲಗೊಳಿಸುವ ಕಾಳಜಿಯಿಂದ ಮುಂದಡಿಯಿಡುತ್ತಿರುವ ಜವನೆರ್ ಬೆದ್ರ ಸಂಘಟನೆಯ ಕಾರ್ಯಯೋಜನೆಗಳು ಮಾದರಿ. ಊರಿನ ಇತಿಹಾಸ, ಊರಿನ ಅಭಿಮಾನವನ್ನು ಮೂಡಿಸುತ್ತಿರುವ ಕೆಲಸ ಕೂಡ ಶ್ಲಾಘನೀಯ ಎಂದರು.

ವಾಗ್ಮಿ ಸಹನಾ ಕುಂದರ್ ಪ್ರಧಾನ ಭಾಷಣದಲ್ಲಿ ಯುವಜನರಲ್ಲಿ ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ಬರಬೇಕಾಗಿದೆ. ಸಂಘನಾತ್ಮಕವಾಗಿ ಮಾತ್ರವಲ್ಲ, ವೈಯಕ್ತಿತ್ವವಾಗಿಯೂ ಕೂಡ ವ್ಯಕ್ತಿಯ ವ್ಯಕ್ತಿತ್ವ ಬೆಳಗಬೇಕಾಗಿದೆ. ವಿವೇಕಾನಂದರಂತಹ ಮಹಾನ್ ಚೇತನರ ಆದರ್ಶ ಯುವಜನರಿಗೆ ಸ್ಪಪೂರ್ತಿ ಎಂದರು.

ಜವನೆರ್ ಬೆದ್ರ ಸಂಘಟನೆಯ ಸ್ಥಾಪಕ ಅಮರ್ ಕೋಟೆ ಅಧ್ಯಕ್ಷತೆವಹಿಸಿದ ಸಮಾರಂಭದಲ್ಲಿ ಪುರಸಭಾ ಸದಸ್ಯರಾದ ಲಕ್ಷ್ಮಣ್ ಪೂಜಾರಿ, ರಾಜೇಶ್ ಕೋಟೆಗಾರ್, ನಿವೃತ್ತ ಪ್ರಾಧ್ಯಾಪಕ ವಾಸುದೇವ ಭಟ್, ಸಾಮಾಜಿಕ ಕಾರ್ಯಕರ್ತ ಸ್ವರಾಜ್, ಮೂಡುಬಿದಿರೆ ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ವಿನ್ಸೆಂಟ್ ಡಿ’ಕೋಸ್ತ, ವಕೀಲ ಶಾಂತಿಪ್ರಸಾದ್ ಹೆಗ್ಡೆ, ಜವನೆರ್ ಬೆದ್ರ ಗೌರವಾಧ್ಯಕ್ಷ ಮಹೇಶ್ ವಿಕ್ರಂ ಹೆಗ್ಡೆ ಮುಖ್ಯ ಅತಿಥಿಯಾಗಿದ್ದರು.

2019-20ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ವಿವೇಕೋತ್ಸವದ ಅಂಗವಾಗಿ ಆಯೋಜಿಸಲಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿದ್ಯಾನಂದ ಶೆಟ್ಟಿ ಸ್ವಾಗತಿಸಿದರು. ಸುನೀಲ್ ಪಣಪಿಲ, ಪ್ರತೀಶ್ ಕಾರ್ಯಕ್ರಮ ನಿರೂಪಿಸಿದರು. ರಾಕೇಶ್ ಶೆಟ್ಟಿ ವಂದಿಸಿದರು.

 

 

See also  ಚಾರ್ಮಾಡಿಯಲ್ಲಿ ಲಾರಿ ಪಲ್ಟಿ: ಸಂಚಾರ ಕೆಲಕಾಲ ಸ್ಥಗಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು