News Kannada
Monday, March 27 2023

ಕರಾವಳಿ

ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳೀಯರಿಂದ ವಿರೋಧ

Photo Credit :

ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳೀಯರಿಂದ ವಿರೋಧ

ಮೂಡುಬಿದಿರೆ: ಇಲ್ಲಿಗೆ ಸಮೀಪದ ಪಡುಕೊಣಾಜೆ ಗ್ರಾಮದ ಹೌದಲ್‍ನಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಳೀಯರ ವಿರೋಧ, ಪ್ರತಿಭಟನೆಗಳಿಂದ ವಿವಾದದ ಕೇಂದ್ರಬಿಂದುವಾಗಿದ್ದ ಮೊಬೈಲ್ ಟವರ್ ನಿರ್ಮಾಣ ವಿಚಾರ ನ್ಯಾಯಾಲಯದ ಮೆಟ್ಟೀಲೇರಿದ್ದು, ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಬುಧವಾರ ಪೊಲೀಸ್ ಬಂದೋಬಸ್ತ್ ನಲ್ಲಿ ಟವರ್ ನಿರ್ಮಾಣದ ಕೆಲಸ ಆರಂಭವಾಗಿದೆ.

ಆಶಾ ಜೈನ್ ಎಂಬವರ ಖಾಸಗಿ ಜಾಗದಲ್ಲಿ ಖಾಸಗಿ ಕಂಪೆನಿ ಮೊಬೈಲ್ ಟವರ್ ನಿರ್ಮಾಣ ಮಾಡಲು ಎರಡು ವರ್ಷಗಳ ಹಿಂದೆ ಉದ್ದೇಶಿಸಿದ್ದು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಪ್ರತಿಭಟನೆಗಳನ್ನು ಕೂಡ ಮಾಡಿದ್ದರು. ಖಾಸಗಿ ಕಂಪೆನಿಯವರು ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಪೊಲೀಸ್ ಬಂದೋಬಸ್ತ್ ನಲ್ಲಿ ಟವರ್ ನಿರ್ಮಾಣವು ಬುಧವಾರ ಪ್ರಾರಂಭಗೊಂಡಿದೆ. ಈ ಸಂದರ್ಭ ಸ್ಥಳೀಯರು ಪ್ರತಿಭಟಿಸಿದ್ದು, ಪೊಲೀಸರ ಮಧ್ಯಸ್ಥಿಕೆಯಿಂದ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಹೋರಾಟಗಾರ ಯಾದವ ಶೆಟ್ಟಿ ಟವರ್ ನಿರ್ಮಾಣ ವಿವಾದದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಮೊಬೈಲ್ ಟವರ್‍ ಗಳ ನಿರ್ಮಾಣಕ್ಕೆ ಸರ್ಕಾರ ತಂದಿರುವ ಇತ್ತೀಚಿನ ಮಾರ್ಗಸೂಚಿಯನ್ನು ಹೌದಲ್ ಟವರ್ ನಿರ್ಮಾಣದ ವೇಳೆ ಕಡೆಗಣಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ, ತಹಸೀಲ್ದಾರ್‍ ಗೆ ದೂರು ನೀಡುತ್ತೇವೆ. ಟವರ್ ಕೆಲಸ ಸ್ಥಗಿತಗೊಳಿಸಲು ಕಾನೂನು ರೀತಿಯ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.

See also  ವಿದ್ಯಾರ್ಥಿನಿ ಪೂಜಾ ಶಿವರಾಜ್ ಹತ್ಯೆ ಖಂಡಿಸಿ ಎಬಿವಿಪಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

193
Deevith S K

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು