ಮೂಡುಬಿದಿರೆ: ಕರ್ನಾಟಕ ಸರ್ಕಾರದ ತಾಂತ್ರಿಕ ಉನ್ನತೀಕರಣ ಕೌನ್ಸಿಲ್ (ಕೆಸಿಟಿಯು) 8 ನೇ ರಾಜ್ಯ ಮಟ್ಟದ ಸಮಿತಿ ಸಭೆಯಲ್ಲಿ `ಪರಿಸರ, ಕೈಗಾರಿಕೆ ಕೃಷಿ ಅನ್ವಯಗಳ ಮೂಲ ಮಾದರಿಯ ರಾಸಯನಿಕ ಸಂವೇದಕಗಳ ಅಭಿವೃದ್ದಿ’ ಎಂಬ ಸಂಶೋಧನಾ ಯೋಜನೆಗೆ ಅನುಮತಿ ನೀಡಲಾಗಿದೆ.
ಯೋಜನೆಗೆ ಒಟ್ಟು ರೂ.1 ಕೋಟಿ ವೆಚ್ಚವಾಗಲಿದ್ದು, ಆರ್ ಆ್ಯಂಡ್ ಡಿ ಸೆಂಟರ್ ಸ್ಥಾಪನೆಗೆ 50 ಲಕ್ಷ ರೂ ಕೆ.ಸಿ.ಟಿ.ಯು ನೀಡಲಿದ್ದು, ಉಳಿದ 50 ಲಕ್ಷಗಳು ರೂ.ಗಳನ್ನು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಭರಿಸಲಿದೆ.
ಯೋಜನೆಯನ್ನು ಬೆಂಗಳೂರಿನ ಐವೇವ್ ಸಿಸ್ಟಮ್ಸ್ ಟೆಕ್ನಾಲಜೀಸ್ ಪ್ರೈ.ಲಿ. ನಡೆಸಲಿದ್ದು ಹಾಗೂ ಹೆಚ್ ಎಮ್ ವಿ ಇಂಡಸ್ಟ್ರೀಸ್, ಚಿಕ್ಕಮಗಳೂರು, ಜಿಟಿ ಟೆಕ್ನಾಲಜೀಸ್ ವಿಟ್ಲ, ಮಂಗಳೂರು, ಚಿರಾಗ್ ಇಂಡಸ್ಟ್ರೀಸ್ ಚಿಕ್ಕಮಗಳೂರು, ಇಂಡೋಚೆಮ್ ಇಂಡಸ್ಟ್ರೀಸ್, ಚಿಕ್ಕಮಗಳೂರು, ಈ ನಾಲ್ಕು ಸಣ್ಣ ಪ್ರಮಾಣದ ಕೈಗಾರಿಕೆಗಳು ಮೂಲಮಾದರಿಯ ಆಭಿವೃದ್ಧಿಯ ನಂತರದ ಉತ್ಪನ್ನವನ್ನು ತಯಾರಿಸಲು ಒಪ್ಪಿಕೊಂಡಿವೆ.
ಕರ್ನಾಟಕ ಸರ್ಕಾರದ ಕಿರು, ಸಣ್ಣ, ಮದ್ಯಮ ಉದ್ಯಮಗಳ ಆಯುಕ್ತರ ಅಧ್ಯಕ್ಷತೆಯಲ್ಲಿಯಲ್ಲಿ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಂಶೋಧನ ವಿಬಾಗದ ಸಂಯೋಜಕ ಪ್ರೋ. ರಿಚಾರ್ಡ ಪಿಂಟೊ ಮತ್ತು ಡಾ.ಜಯರಾಮ ಉಪಸ್ಥಿತಿಯಲ್ಲಿ ಸಭೆ ಜರುಗಿತು.