News Kannada
Friday, December 02 2022

ಕರಾವಳಿ

ಕೊನೆಗೊಂಡ ಪಂಚಮಹಾವೈಭವ: ಕಲಾವಿದರನ್ನು ಕೊಂಡಾಡಿದ ಹೆಗ್ಗಡೆ

Photo Credit :

ಕೊನೆಗೊಂಡ ಪಂಚಮಹಾವೈಭವ: ಕಲಾವಿದರನ್ನು ಕೊಂಡಾಡಿದ ಹೆಗ್ಗಡೆ

ಧರ್ಮಸ್ಥಳ: ಸಮವಸರಣ ಮಂಟಪದಿಂದ ಹೊರಗೆ ಬಂದ ಭರತ ಚಕ್ರವರ್ತಿ ಕಿರೀಟ ಧರಿಸಿ ನೇರವಾಗಿ ಬಾಹುಬಲಿಯ ತಪೋವನಕ್ಕೆ ಪ್ರವೇಶಿಸುತ್ತಾನೆ.

ಅಲ್ಲಿ ಅಜಾನುಬಾಹುವಾಗಿ ತಲೆ ಎತ್ತಿ ಧ್ಯಾನಮಗ್ನನಾದ ಬಾಹುಬಲಿಯನ್ನು ವೀಕ್ಷಿಸಿ ಬೆರಗಾಗುತ್ತಾನೆ. ಆತನ ಶರೀರದ ಮೇಲೆ ಪಾದದಿಂದ ತೊಡಗಿ ಪೂರ್ತಿ ದೇಹವನ್ನು ಸುತ್ತಿಕೊಂಡಿರುವ ಕಾಡುಬಳ್ಳಿಗಳು, ತೋಳಿನ ಮೇಲೆ ಓಡಾಡುವ ಹಾವುಗಳು. ಹರಡಿಕೊಂಡ ಕೇಶರಾಶಿಯ ಸಹೋದರನ್ನು ನೋಡಿದ ಭರತನು ಆತನ ಪಾದಕ್ಕೆರಗುತ್ತಾನೆ. ಅಲ್ಲದೆ ತನ್ನ ಕಿರೀಟವನ್ನು ಪಾದದಡಿಗೆ ಅರ್ಪಿಸುತ್ತಾನೆ. ಬಳಿಕ ಈ ನೆಲ ನನ್ನದಲ್ಲ. ಕಾಲನ ಹೊಡೆತಕ್ಕೆ ಸಿಲುಕಿ ಎಲ್ಲರೂ ನಾಶವಾಗುತ್ತಾರೆ. ಹೀಗಾಗಿ ಲೌಕಿಕ ಭಾವನೆಯನ್ನು ಬಿಟ್ಟು ಆತ್ಮ ಕಲ್ಯಾಣದ ಮಾರ್ಗದ ಕಡೆಗೆ ಚಿಂತಿಸು. ನಿನಗೆ ಆತ್ಮಕಲ್ಯಾಣವಾಗಲಿ ಎಂದು ಬೇಡಿಕೊಳ್ಳುತ್ತಾನೆ. ಇದಾದ ಬಳಿಕ ಬಾಹುಬಲಿಗೆ ಕೇವಲ ಜ್ಞಾನ ಪ್ರಾಪ್ತವಾಗುತ್ತದೆ. ಕೇವಲ ಜ್ಞಾನ ಪ್ರಾಪ್ತವಾಗುವುದನ್ನು ತ್ರೀಡಿ ಶೋ ಮೂಲಕ ತೋರಿಸಲಾಗುತ್ತದೆ.

ಸಹಸ್ರಾರು ಪ್ರೇಕ್ಷಕರು ಇದನ್ನು ನೋಡಿ ಬೋಲೋ ಭಗವಾನ್ ಬಾಹುಬಲಿ ಕೀ ಎಂದು ಜಯ ಘೋಷ ಮಾಡುತ್ತಾರೆ. ಹೊರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 10ಅಡಿಯ ಬಾಹುಬಲಿಯನ್ನು ನಿಲ್ಲಿಸಲಾಗಿತ್ತು. ಹಿಂದಿನಿಂದ ಸಹಜವಾಗಿದ್ದ ಕಾಡು ಪ್ರದೇಶ ತಪೋವನದಂತೆ ಕಾಣುತ್ತಿತ್ತು. ಕೊನೆಯಲ್ಲಿ ಹತ್ತಾರು ಶ್ರಾವಕಿಯರು ದೀಪ ಬೆಳಗಿ ಬಾಹುಬಲಿಗೆ ಪ್ರದಕ್ಷಿಣೆ ಮಾಡುವಲ್ಲಿಗೆ ವೈಭವ ಮುಕ್ತಾಯಗೊಳ್ಳುತ್ತದೆ.

ಹೇಮಾವತಿ ಹೆಗ್ಗಡೆಯವರು ಜೀವನರಾಂ ಸುಳ್ಯ ಅವರನ್ನು ನಾಟಕದ ಮಾಂತ್ರಿಕ ಎಂದು ಆಶೀರ್ವದಿಸಿದರು.

See also  ಪ್ರಪಾತಕ್ಕೆ ಉರುಳಿದ ಮ್ಯಾಕ್ಸಿಕ್ಯಾಬ್ : ಶಿಕ್ಷಕ ಮೃತ್ಯು, 20 ವಿದ್ಯಾರ್ಥಿಗಳಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು