ಮಂಗಳೂರು: ಸಿಇಒ ವಿತ್ ಎಚ್ ಆರ್ ಒರಿಯೆಂಟೇಶನ್ ಪ್ರಶಸ್ತಿಗೆ ಕರ್ಣಾಟಕ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಹಾಬಲೇಶ್ವರ್ ಎಂ.ಎಸ್ ಅವರು ಭಾಜನರಾಗಿದ್ದಾರೆ.
ಶುಕ್ರವಾರ ಮುಂಬೈನಲ್ಲಿ ಇಟಿ ನೌ ಆಯೋಜಿಸಿದ್ದ ವಲ್ಡ್ ಎಚ್.ಆರ್.ಡಿ ಕಾಂಗ್ರೆಸ್ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಮಹಾಬಲೇಶ್ವರ್ ಅವರು, ‘ ಈ ಪ್ರಶಸ್ತಿಯನ್ನು ಬ್ಯಾಂಕಿನ ಶತಮಾನದ ಪರಿವರ್ತನೆಯ ಪ್ರಮುಖ ರೂವಾರಿಗಳಾದ ಸಿಬ್ಬಂದಿಗೆ ಸಮರ್ಪಿಸುತ್ತೇನೆ’ ಎಂದರು.