News Kannada
Tuesday, February 07 2023

ಕರಾವಳಿ

ಪುತ್ತೂರಿನಲ್ಲಿ ಸಾವಿಗೀಡಾದ 3 ಮಂಗಗಳ `ನೆಗೆಟಿವ್’ ವರದಿ: ಜನರಲ್ಲಿದ್ದ ಆತಂಕ ದೂರ

Photo Credit :

ಪುತ್ತೂರಿನಲ್ಲಿ ಸಾವಿಗೀಡಾದ 3 ಮಂಗಗಳ `ನೆಗೆಟಿವ್' ವರದಿ: ಜನರಲ್ಲಿದ್ದ ಆತಂಕ ದೂರ

ಪುತ್ತೂರು : ತಾಲೂಕಿಗೆ ಸಂಬಂಧಿಸಿ ವಿವಿದೆಡೆ ಮಂಗಗಳ ಸಾವು ಸಂಭವಿಸಿದ ಕುರಿತು ಆತಂಕಗೊಂಡಿದ್ದ ಜನತೆ ಇದೀಗ ಪ್ರಯೋಗಾಲಯದಿಂದ ಬಂದ ಮೂರು ಮಂಗಗಳ ಸಾವಿನ ಕುರಿತಾದ ಪರೀಕ್ಷಾ ವರದಿಯು `ನೆಗೆಟಿವ್’ ಆಗಿ ಬಂದಿರುವುದು ಜನರಲ್ಲಿ ಆತಂಕ ಸ್ವಲ್ಪ ಮಟ್ಟಿಗೆ ದೂರವಾಗುವಂತಾಗಿದೆ.

ಶಿರಾಡಿ ಗ್ರಾಮದ ಅಡ್ಡಹೊಳೆ, ಕೊಯಿಲ ಗ್ರಾಮ ವ್ಯಾಪ್ತಿಯ ಹಳೆನೇರಂಕಿ ಮತ್ತು ಕಾಣಿಯೂರಿನಲ್ಲಿ ಸಾವಿಗೀಡಾದ ಮಂಗಗಳ ಕಳೇಬರವನ್ನು ಮಂಗನ ಕಾಯಿಲೆಯ ಹಿನ್ನಲೆಯಲ್ಲಿ ದೃಢೀಕರಣಕ್ಕಾಗಿ ಶಿವಮೊಗ್ಗದ ಕೆಎಫ್ ಡಿ ವೈರೋಲೊಜಿ ಇಲಾಖೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇದೀಗ ಪ್ರಯೋಗಾಲಯದಿಂದ ಬಂದಿರುವ ನೆಗೆಟಿವ್ ಪರೀಕ್ಷಾ ವರದಿಯಿಂದಾಗಿ ಆ ಮಂಗಳು ಮಂಗನ ಕಾಯಿಲೆಯಿಂದ ಸತ್ತಿವೆ ಎಂಬ ಶಂಕೆ ದೂರವಾಗಿದೆ. ಪ್ರಯೋಗಾಲಯಕ್ಕೆ ಕಳುಹಿಸಿರುವ ಸತ್ತ ಮಂಗಗಳ ವರದಿಯು ನೆಗೆಟಿವ್ ಆಗಿ ಬಂದಿರುವ ವಿಚಾರವನ್ನು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ತಾಲೂಕು ಆರೋಗ್ಯ ಇಲಾಖಾ ವ್ಯಾಪ್ತಿಯಲ್ಲಿ ಬರುವ ಅಡ್ಡೋಳೆ, ಹಳೆನೇರಂಕಿ, ಕಾಣಿಯೂರು, ಕೆಯ್ಯೂರಿನ ಕಣಿಯಾರು, ಸವಣೂರು, ಕಡಬ ಭಾಗದಲ್ಲಿ ಮಂಗಳ ಸಾವು ಸಂಭವಿಸಿತ್ತು. ನೆರೆಯ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ವ್ಯಾಪಿಸಿರುವ ಹಿನ್ನಲೆಯಲ್ಲಿ ಪುತ್ತೂರಿನಲ್ಲೂ ಆತಂಕ ಮೂಡಿಸಿತ್ತು. ಕಡಬ, ಸವಣೂರು ಮೊದಲಾದ ಕಡೆಗಳಲ್ಲಿ ಸಾವಿಗೀಡಾದ ಮಂಗಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹಾಗಾಗಿ ಆ ಮಂಗಗಳ ಕಳೇಬರವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲು ಅಸಾಧ್ಯವಾಗಿತ್ತು. ಆದರೆ ಪರೀಕ್ಷೆಗೆ ಒಳಪಡಿಸಲಾದ ಮೂರು ಸತ್ತ ಮಂಗಗಳು ಮಂಗನ ಕಾಯಲೆಯಿಂದ ಮೃತಪಟ್ಟಿಲ್ಲ ಎಂಬುವುದು ದೃಢಪಟ್ಟಿದೆ.

See also  ಭಾಷೆ ನಾಶವಾದರೆ, ಸಂಸ್ಕೃತಿಯೂ ನಾಶವಾಗುತ್ತದೆ: ಮುಖ್ಯಮಂತ್ರಿ ಚಂದ್ರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

188

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು