ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲವೆಂದು ಮಾಜಿ ಶಾಸಕ ಜೆ.ಆರ್. ಲೋಬೊ ಕಿಡಿಕಾರಿದರು.
ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೋಬೊ ಅವರು, ನಳಿನ್ ಕುಮಾರ್ ಹೊಸ ಯೋಜನೆ ಆರಂಭಿಸುವುದು ದೂರದ ಮಾತು. ಹಳೆಯ ಯೋಜನೆಗಳಿಗೆ ಪುನರುಜ್ಜೀವನ ನೀಡಲು ವಿಫಲರಾಗಿದ್ದಾರೆ ಎಂದರು.
ತೊಕ್ಕೊಟ್ಟು ಹಾಗೂ ಪಂಪ್ ವೆಲ್ ಮೇಲ್ಸೇತುವೆ ವಿಳಂಬಕ್ಕೆ ಲೋಬೊ ಮತ್ತು ಸಚಿವ ಯು.ಟಿ.ಖಾದರ್ ಸ್ವಸಮುದಾಯದ ಮೇಲಿನ ಪ್ರೀತಿ ಕಾರಣವೆಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪ ಮಾಡಿದ್ದರು.
ಮುಂದಿನ ಚುನಾವಣೆಗಾಗಿ ನಳಿನ್ ಕುಮಾರ್ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಲು ಪ್ರಯತ್ನಿಸುತ್ತಾ ಇದ್ದಾರೆ ಎಂದು ಲೋಬೊ ಆರೋಪಿಸಿದರು.