News Kannada
Tuesday, February 07 2023

ಕರಾವಳಿ

ಓಸಾಮಾಜೀ, ಹಫೀಜ್ ಅನ್ನುತ್ತಿದ್ದವರಿಗೆ ಈಗ ತೊಂದರೆಯಾಗಿದೆ: ರಾಜನಾಥ್ ಸಿಂಗ್

Photo Credit :

ಓಸಾಮಾಜೀ, ಹಫೀಜ್ ಅನ್ನುತ್ತಿದ್ದವರಿಗೆ ಈಗ ತೊಂದರೆಯಾಗಿದೆ: ರಾಜನಾಥ್ ಸಿಂಗ್

ಮಂಗಳೂರು: ಪಾಕಿಸ್ತಾನದ ನೆಲದ ಮೇಲೆ ಭಾರತೀಯ ವಾಯುಪಡೆಯು ನಡೆಸಿರುವ ದಾಳಿಯ ಸಾಕ್ಷ್ಯ ಕೇಳಿರುವ ಪ್ರತಿಪಕ್ಷಗಳಿಗೆ ದಾಳಿಯಿಂದಾಗಿ ಏನು ಸಮಸ್ಯೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪ್ರಶ್ನಿಸಿದರು.

ಶನಿವಾರ ನಗರದಲ್ಲಿ ಬಿಜೆಪಿ ಶಕ್ತಿ ಕೇಂದ್ರಗಳ ಪ್ರಮುಖರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ವಾಯುಪಡೆ ದಾಳಿಯಿಂದ ಪಾಕ್ ಗೆ ತೊಂದರೆ ಆಗಿದೆ. ಆದರೆ ಯೋಧರ ದಾಳಿಯ ಬಗ್ಗೆ ಪ್ರತಿಪಕ್ಷಗಳು ಅನುಮಾನ ವ್ಯಕ್ತಪಡಿಸಿವೆ. ಹತರಾದ ಉಗ್ರರ ಸಂಖ್ಯೆಯನ್ನು ಕೇಳುತ್ತಿದೆ ಎಂದರು.

ಪ್ರತಿಪಕ್ಷಗಳು ಉಗ್ರರನ್ನು ಓಸಾಮಾಜಿ, ಹಫೀಜ್ ಜೀ ಎಂದು ಕರೆಯುತ್ತಾರೆ. ಇಂತವರಿಗೆ ದಾಳಿಯಿಂದ ಸಮಸ್ಯೆಯಾಗಿದೆ. ನಮ್ಮ ಯೋಧರು ಉಗ್ರರ ಮೇಲೆ ಪುಷ್ಪವೃಷ್ಟಿ ಮಾಡಲು ಹೋಗಿಲ್ಲ, ದಾಳಿ ಮಾಡಲು ಹೋಗಿದ್ದರು ಎಂದು ರಾಜನಾಥ್ ತಿಳಿಸಿದರು.

ಭಾರತ ಭಯೋತ್ಪಾದನೆ ಸಹಿಸಲ್ಲ ಎನ್ನುವ ಸ್ಪಷ್ಟ ಸಂದೇಶ ಪಾಕ್ ಗೆ ರವಾನೆಯಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ವಿಶ್ವವೇ ನಮ್ಮ ಜತೆಗೆ ಇದೆ ಎಂದು ರಾಜನಾಥ್ ಹೇಳಿದರು.

See also  ಉಳ್ಳಾಲದಲ್ಲಿ ಯುವಕನ ಮೇಲೆ ತಲವಾರು ದಾಳಿ: ಸ್ಥಳಿಯರಲ್ಲಿ ಆತಂಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು