News Kannada
Monday, December 05 2022

ಕರಾವಳಿ

ಬಿ.ಸಿ. ರೋಡ್ ನಲ್ಲಿ ಬಸ್ ಸಂಚಾರ ನಿರ್ಬಂಧದಿಂದ ಸಾರ್ವಜನಿಕರಿಗೆ ತೊಂದರೆ

Photo Credit :

ಬಿ.ಸಿ. ರೋಡ್ ನಲ್ಲಿ ಬಸ್ ಸಂಚಾರ ನಿರ್ಬಂಧದಿಂದ ಸಾರ್ವಜನಿಕರಿಗೆ ತೊಂದರೆ

ಬಂಟ್ವಾಳ: ಬಿ.ಸಿ.ರೋಡ್ನಸ ಸರ್ವಿಸ್ ರಸ್ತೆಯಲ್ಲಿ ಖಾಸಗಿ, ಸರಕಾರಿ ಬಸ್ಗಿಳ ಸಂಚಾರವನ್ನು ಏಕಾಏಕಿಯಾಗಿ ನಿರ್ಬಂಧಿಸಿರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಬಿ.ಸಿ.ರೋಡ್ನಭ ತಾಲೂಕು ಪಂಚಾಯತ್ನಲ ಸಭಾಂಗಣದಲ್ಲಿ ಗುರುವಾರ ಸಂಜೆ ಸಾರ್ವಜನಿಕರ ಅಭಿಪ್ರಾಯ ಮಂಡನಾ ಸಭೆ ನಡೆಯಿತು.

ಸಭೆ ಆರಂಭವಾಗುತ್ತಿದ್ದಂತೆಯೇ ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಪ್ರಸ್ತಾಪಿಸಿ. ಬಿ.ಸಿ.ರೋಡ್ಪೇಜಟೆ ಬಂಟ್ವಾಳದ ಕೇಂದ್ರಸ್ಥಾನವಾಗಿದ್ದು, ಎಲ್ಲ ಕೆಲಸ ಕಾರ್ಯಗಳ ಮೂಲಸ್ಥಾನವಾಗಿದೆ. ಬಸ್ ಸಂಚಾರ ನಿರ್ಬಂಧದಿಂದ ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ. ಮಕ್ಕಳನ್ನು ಕಂಕಳಲ್ಲಿರಿಸಿಕೊಂಡು ಮಹಿಳೆಯರು, ವೃದ್ಧರು ಮೇಲ್ಸತುವೆಯ ತುದಿಯಿಂದ ವಿವಿಧ ಕಚೇರಿಗೆ ಸುಮಾರು 200 ಮೀ. ನಷ್ಟು ನಡೆದುಕೊಂಡು ಬರಬೇಕಾದ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ, ಈ ಸರ್ವಿಸ್ ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಪಾದಚಾರಿಗಳಿಗೆ ನಡೆದಾಡಲು ಪುಟ್ಪಾ ತ್ ವ್ಯವಸ್ಥೆ ಇಲ್ಲ. ಸರ್ವಿಸ್ ರಸ್ತೆಯ ಪಕ್ಕದ ಜಾಗವನ್ನು ಅಂಗಡಿ ಮಾಲಕರು ಉದ್ದಕ್ಕೆ ಅಕ್ರಮವಾಗಿ ಶೀಟ್ ಅಳವಡಿಸಿ ವ್ಯಾಪಾರ ಮಾಡುತ್ತಿದ್ದಾರೆ. ಇದನ್ನು ಮೊದಲು ತೆರವುಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಅನಧೀಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.
ಆಟೋ ಚಾಲಕರ ಯೂನಿಯನ್ನನ ಉಪಾಧ್ಯಕ್ಷ ಸಂಶುದ್ದೀನ್ ಪಲ್ಲಮಜಲು ಅಭಿಪ್ರಾಯ ಮಂಡಿಸಿ, ಸರ್ವಿಸ್ ರಸ್ತೆಯಲ್ಲಿ ಬಸ್ ಸಂಚಾರದಿಂದ ಯಾವುದೇ ಟ್ರಾಫಿಕ್ ಸಮಸ್ಯೆ ಉಂಟಾಗದು. ಬಂದ ಬಸ್ಗ್ಳು ಪ್ರಯಾಣಿಕರನ್ನು ಹತ್ತಿಸಿ, ಇಳಿಸಲು ಕೇವಲ 2 ನಿಮಿಷ ಅವಕಾಶ ಮಾಡಬೇಕು.

ಬಿ.ಸಿ.ರೋಡ್ನರಲ್ಲಿ ಗ್ರಾಮಾಂತರ ಆಟೊಗಳನ್ನು ನಿಲ್ಲಿಸಲು ಅವಕಾಶ ನೀಡಬಾರದು. ನಗರ ಮತ್ತು ಗ್ರಾಮಾಂತರ ಆಟೋ ಚಾಲಕರನ್ನು ವಿಂಗಡಿಸಿ, ಗುರುತಿಸುವ ಕಾರ್ಯ ಮಾಡಬೇಕು. ಆಟೊ ಚಾಲಕರಿಗೆ ಪರ್ಮಿಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬಿ.ಸಿ.ರೋಡ್ ನಿವಾಸಿ ಲೋಕೇಶ್ ಸುವರ್ಣ ಮಾತನಾಡಿ, ಬಿ.ಸಿ.ರೋಡ್ನಾಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಆಯಕಟ್ಟಿನ ಸ್ಥಳಗಳಲ್ಲಿ ಟ್ರಾಫಿಕ್ ಸಿಬ್ಬಂದಿಯನ್ನು ನೇಮಿಸದೇ ಮೂರ್ನಾಲ್ಕು ಹೋಂಗಾರ್ಡ್ಗಾಳನ್ನು ನಿಲ್ಲಿಸಲಾಗುತ್ತದೆ. ಇವರನ್ನು ಯಾವದೇ ವಾಹನ ಚಾಲಕರು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹೋಂಗಾರ್ಡ್ ಎಷ್ಟೇ ವಿಸಿಲ್ ಒಡೆದರೂ ಬಸ್ ಚಾಲಕರು ಕ್ಯಾರೇ ಮಾಡುತ್ತಿಲ್ಲ ಎಂದು ದೂರಿದರು.

ಸಾಮಾಜಿಕ ಹೋರಾಟಗಾರ ಪ್ರಭಾಕರ್ ಮಾತನಾಡಿ, ಸರ್ವೀಸ್ ರಸ್ತೆಯಲ್ಲಿ ಸುಮಾರು 20ರಿಂದ 30 ನಿಮಿಷಗಳ ಕಾಲ ಬಸ್ ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆವಾಗಿಲ್ಲ ಎಂದರು.
ಆಟೊ ಚಾಲಕ ಯಾಕೂಬ್ ಮಾತನಾಡಿ, ಎಲ್ಲಾ ಬಸ್ಗದಳು ಮೇಲ್ಸತುವೆಯಲ್ಲಿ ನಿಲುಗಡೆಯಾಗುವುದರಿಂದ ಪ್ರಯಾಣಿಕರು ಅತ್ತ-ಇತ್ತ ಹೋಗಲು ಸಾಧ್ಯವಾಗದೇ ಉರಿ ಬಿಸಿಲಿಗೆ ಮೈಯೊಡ್ಡಿ ರಸ್ತೆ ಮಧ್ಯೆ ನಿಲ್ಲಬೇಕಾಗಿದೆ ಎಂದು ಹೇಳಿದರು.

See also  ಬಿಜೆಪಿ ಪಾದಯಾತ್ರೆ ಮೇಲೆ ಕಲ್ಲೆಸೆತ: ಪೊಲೀಸರಿಂದ ಅಶ್ರುವಾಯು ಬಳಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು