News Kannada
Tuesday, September 27 2022

ಕರಾವಳಿ

ತೊಡಿಕಾನದಲ್ಲಿ ಮಂಗನ ಕೊಳೆತ ಶವ ಪತ್ತೆ - 1 min read

Photo Credit :

ತೊಡಿಕಾನದಲ್ಲಿ ಮಂಗನ ಕೊಳೆತ ಶವ ಪತ್ತೆ

ಸುಳ್ಯ: ತೊಡಿಕಾನ ಗ್ರಾಮದ ಕಲ್ಲಂಬಳ ಬಳಿ ಮಂಗನ ಶವವೊಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ರಾಜ್ಯದ ಹಲವು ಕಡೆಗಳಲ್ಲಿ ಮಂಗನ ಕಾಯಿಲೆ ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಂಗನ ಶವವನ್ನು ಸ್ಥಳೀಯರ ಸಹಕಾರದಿಂದ ದಹನ ಮಾಡಲಾಯಿತು. ಆರೋಗ್ಯಾಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಮಂಗನ ಶವ ಸಂಪೂರ್ಣ ಕೊಳೆತು ಹೋಗಿದ್ದು ,ವಿಪರೀತ ವಾಸನೆ ಬರುತ್ತಿತ್ತು. ದೇಹದ ಅಗತ್ಯ ಭಾಗಗಳು ಕೊಳೆತು ಹೋಗಿರುವುದರಿಂದ ಶವ ಪರೀಕ್ಷೆಗೆ ಸಾಧ್ಯವಾಗದೆ ಇರುವುದರಿಂದ ಅದನ್ನು ಅದೇ ಸ್ಥಳದಲ್ಲಿ ದಹನ ಮಾಡುವಂತೆ ಅಧಿಕಾರಿಗಳು ಸೂಚಿಸಿದರು.

ಸುಳ್ಯ ತಾಲೂಕಿನಲ್ಲಿ ಎಲ್ಲಿಯೂ ಇದುವರೆಗೆ ಮಂಗನ ಕಾಯಿಲೆಯ ಲಕ್ಷಣಗಳು ಅಥವಾ ಮಂಗಗಳು ಸತ್ತಿರುವುದು ಕಂಡು ಬಂದಿಲ್ಲ. ಇದೀಗ ಮಂಗ ಬೇರೆ ಯಾವುದೋ ಕಾರಣಗಳಿಂದ ಸತ್ತಿರುವ ಸಾಧ್ಯತೆಗಳು ಇದೆ. ಮಂಗನ ಕಾಯಿಲೆಯಿಂದ ಸತ್ತಿರುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

See also  ಗಡಾಯಿಕಲ್ಲಿಗೆ ಬಡಿದ ಸಿಡಿಲು: ಪುಡಿಪುಡಿಯಾಗಿ ಬಿದ್ದ ಕಲ್ಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು