News Kannada
Monday, November 28 2022

ಕರಾವಳಿ

ಹಡಗಿಗೆ ಬೆಂಕಿ: ವಿಜ್ಞಾನಿಗಳ ರಕ್ಷಿಸಿದ ಮಂಗಳೂರು ಕೋಸ್ಟ್ ಗಾರ್ಡ್ - 1 min read

Photo Credit :

ಹಡಗಿಗೆ ಬೆಂಕಿ: ವಿಜ್ಞಾನಿಗಳ ರಕ್ಷಿಸಿದ ಮಂಗಳೂರು ಕೋಸ್ಟ್ ಗಾರ್ಡ್

ಮಂಗಳೂರು: ಸಾಗರ ಸಂಶೋಧನಾ ಹಡಗು ಸಮುದ್ರ ಮಧ್ಯದಲ್ಲಿ ಬೆಂಕಿ ಅವಘಡಕ್ಕೀಡಾಗಿದ್ದು, ಮಂಗಳೂರಿನ ಕೋಸ್ಟ್ ಗಾರ್ಡ್ ಸಿಬ್ಬಂದಿ ಇದನ್ನು ರಕ್ಷಿಸಿರುವ ಘಟನೆಯು ಶುಕ್ರವಾರ ರಾತ್ರಿ ನಡೆದಿದೆ.

ಕೊಚ್ಚಿಯಿಂದ ಸಂಶೋಧನಾ ಚುಟವಟಿಕೆಗೆ ಬಂದು ಹಿಂತಿರುಗುತ್ತಿದ್ದ ಸಾಗರ್ ಸಂಪದ ಎಂಬ ಹೆಸರಿನ ಹಡಗು ಬೆಂಕಿ ಅವಘಡಕ್ಕೀಡಾಗಿದೆ. ಮಂಗಳೂರು ಕಡಲ ತೀರದಿಂದ 40 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದೆ.

ಈ ಬಗ್ಗೆ ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ನವರು ಬೆಂಕಿ ನಂದಿಸಿ, ಹಡಗಿನಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಸುಜಯ್ ಮತ್ತು ವಿಕ್ರಮ್ ಹಡಗುಗಳ ಮೂಲಕ ಬೆಂಕಿ ನಂದಿಸಲಾಗಿದೆ ಎಂದು ತಿಳಿದುಬಂದಿದೆ.

ಹಡಗಿನಲ್ಲಿ 16 ವಿಜ್ಞಾನಿಗಳು ಹಾಗೂ 30 ಮಂದಿ ಸಿಬ್ಬಂದಿಯಿದ್ದರು. ಅವರನ್ನು ರಕ್ಷಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ಕರ್ನಾಟಕ ಕಮಾಂಡರ್ ಎಸ್.ಎಸ್. ದಾಸಿಲ ತಿಳಿಸಿದ್ದಾರೆ.

See also  ಸುಳ್ಯ ಸಾಂಸ್ಕೃತಿಕ ಉತ್ಸವದಲ್ಲಿ ಗಮನ ಸೆಳೆದ ನೃತ್ಯ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು