News Kannada
Friday, December 09 2022

ಕರಾವಳಿ

ಒಂದು ದೋಷದಿಂದ ಸಾವಿರ ಒಳ್ಳೆಯ ಗುಣಗಳ ನಾಶವಾಗುತ್ತದೆ–ಡಾ. ಡಿ. ವೀರೇಂದ್ರ ಹೆಗ್ಗಡೆ  

Photo Credit :

ಒಂದು ದೋಷದಿಂದ ಸಾವಿರ ಒಳ್ಳೆಯ ಗುಣಗಳ ನಾಶವಾಗುತ್ತದೆ–ಡಾ. ಡಿ. ವೀರೇಂದ್ರ ಹೆಗ್ಗಡೆ   

ಬೆಳ್ತಂಗಡಿ: ಯೋಗ, ಅದೃಷ್ಟ ಬದಲಾವಣೆ, ಪರಿವರ್ತನೆಗೆ ಒಳಪಟ್ಟ ಮದ್ಯವ್ಯಸನಿಗಳು ಮುಂದಿನ ದಿನಗಳಲ್ಲಿ ಸ್ನೇಹಿತರಒತ್ತಡಕ್ಕೆ ಬಲಿಯಾಗದೆ ಕೀಳರಿಮೆಯನ್ನು ಬಿಟ್ಟು, ಸೇಡು ತೀರಿಸಿಕೊಳ್ಳದೆ, ಸಜ್ಜನರ ಸಹವಾಸದೊಂದಿಗೆಕಠಿಣ ಪರಿಶ್ರಮದಿಂದ ಬದುಕುರೂಪಿಸಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ನಡೆದ  132ನೇ ಮದ್ಯವರ್ಜನ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮದ್ಯಮುಕ್ತರನ್ನು ಆಶೀರ್ವದಿಸಿದರು.

ಸಾಂಸಾರಿಕ, ವ್ಯಾವಹಾರಿಕ, ಆರ್ಥಿಕ ಅಡಚಣೆಗಳು ಸ್ವಾಭಾವಿಕವಾಗಿ ಮನುಷ್ಯನನ್ನು ಬಹಳ ಗೊಂದಲಕ್ಕೀಡು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಗಟ್ಟಿ ಮನಸ್ಸು ಮಾಡಿ ಮತಿಭ್ರಷ್ಠರಾಗದಂತೆ ವ್ಯಕ್ತಿತ್ವ ರೂಪಿಸುವುದು ಅತ್ಯವಶ್ಯವಾಗಿದೆ. ಒಬ್ಬ ಶ್ರೀಮಂತ ಮನೆತನದ ವ್ಯಕ್ತಿ ನನ್ನನ್ನು ಭೇಟಿಯಾಗಿದ್ದರು. ಇವರ ಶ್ರೀಮಂತಿಕೆ ಎಷ್ಟಿತ್ತು ಎಂದರೆ ದಿನಾ ಏಳೆಂಟು ಕೋಟಿಯ ವ್ಯವಹಾರ ಮಾಡಬಲ್ಲವರು. ದಾನ ಧರ್ಮ, ದೇವಸ್ಥಾನಗಳಿಗೆ ಕೋಟಿ ಹಣವನ್ನು ನೀಡುವವರು. ಅವರ ಸುಪುತ್ರಿಯನ್ನು ಶ್ರೀಮಂತ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಅಳಿಯ ಡ್ರಗ್ಸ್ ಚಟದಲ್ಲಿರುವ ವಿಷಯ ಗೊತ್ತಾಗಲೇ ಇಲ್ಲ. ಕೊನೆಗೆ ಡ್ರಗ್ಸ್ ಗಾಗಿಯೇಆತ್ಮಹತ್ಯೆ ಮಾಡಿಕೊಂಡರು. ಒಂದು ದೋಷಕ್ಕಾಗಿ ಸಾವಿರ ಒಳ್ಳೆತನಗಳನ್ನು ನಾಶ ಮಾಡಬೇಕಾಗಿ ಬಂತು ಎಂದು ಅವರು ಉದಾಹರಣೆ ಸಹಿತ ವಿವರಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಅವರು, ವ್ಯಸನ ಜಟಿಲವಾಗಿ ಬಾಧಿಸುವ ಸಮಸ್ಯೆ. ಮನುಕುಲದ ಯಕ್ಷಪ್ರಶ್ನೆ. ಅಷ್ಟದಿಕ್ಕಿನಲ್ಲಿ ನೋಡಿದರೂ ಇದು ಯಾವುದೇ ಸಂತೋಷ ಕೊಡುವ ವಸ್ತು ಅಲ್ಲ. ಕಾಮನಬಿಲ್ಲು ತಲುಪಲು ಅಸಾಧ್ಯ. ಅಂತೆಯೇ ಕುಡಿತ, ವ್ಯಸನವೂ ಒಂದು ಮಾಯಾಜಾಲದಂತೆ ಭ್ರಮೆ ಹುಟ್ಟಿಸುವಂತಹದ್ದಾಗಿರುತ್ತದೆ. ಮಲಮೂತ್ರಕ್ಕೆ ನಾವು ಕೊಡುವ ಸ್ಥಾನವನ್ನೇ ಶರಾಬಿಗೆ ಕೊಟ್ಟಾಗ ಇದರಿಂದ ದೂರ ಸರಿಯಲು ಸುಲಭ. ಮನಸ್ಸು ಕೆಡಿಸುವ ವೈರಸ್ ಮದ್ಯಪಾನ. ಇದಕ್ಕೆಆಂಟಿ ವೈರಸೇ ದೇವರಧ್ಯಾನ ಎಂದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ವಿವೇಕ್ ವಿ. ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ,  ಗಣೇಶ್‍ ಆಚಾರ್ಯ, ಶಿಬಿರಾಧಿಕಾರಿಗಳಾದ ನಾಗೇಶ್‍ ಎನ್.ಪಿ, ನಾಗರಾಜ್, ಆರೋಗ್ಯ ಸಹಾಯಕಿಯರಾದ ಸೌಮ್ಯ, ರಂಜಿತಾ ಉಪಸ್ಥಿತರಿದ್ದರು.

ಶಿಬಿರವನ್ನು 8 ದಿನಗಳ ಕಾಲ ಯಶಸ್ವಿಯಾಗಿ ನಡೆಸಿ ರಾಜ್ಯದ ವಿವಿಧೆಡೆಗಳಿಂದ ಬಂದಿರುವ 90 ಮದ್ಯವ್ಯಸನಿಗಳಿಗೆ ಮನೋ ವೈದ್ಯಕೀಯ ಚಿಕಿತ್ಸೆ ಮತ್ತು ಆಪ್ತ ಸಲಹೆಯೊಂದಿಗೆ ಪ್ರೇರಣೆ ನೀಡಿ ಕುಟುಂಬದವರ ಭಾಗವಹಿಸುವಿಕೆಯಲ್ಲಿ ಕುಟುಂಬ ದಿನವನ್ನು ನಡೆಸಲಾಯಿತು. ಮುಂದಿನ ವಿಶೇಷ ಶಿಬಿರವು ಎ.1 ರಂದು ನಡೆಯಲಿದೆ ಎಂದು ತಿಳಿಸಲಾಯಿತು.

See also  ಮಂಗಳೂರು: ಲಾಡ್ಜ್ ನಲ್ಲಿದ್ದ ಅನುಮಾಸ್ಪದ ವ್ಯಕ್ತಿಗಳ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು