ಬೆಳ್ತಂಗಡಿ: ಹಾಲಿ ಸಂಸದ, ಬಿಜೆಪಿ ಲೋಕಸಭಾ ಅಭ್ಯರ್ಥಿ, ನಳಿನ್ ಕುಮಾರ್ ಕಟೀಲು ಅವರು ಬೆಳ್ತಂಗಡಿಯಲ್ಲಿ ಎ. 2ರಂದು ಚುನಾವಣಾ ಪ್ರಚಾರಕ್ಕಾಗಿ ಪ್ರವಾಸವನ್ನು ನಡೆಸಲಿದ್ದಾರೆ. ಅಂದು ಬೆಳಗ್ಗೆ 7 ಗಂಟೆಯಿಂದ ಕಲ್ಮಂಜ ಗ್ರಾಮದಿಂದ ಅವರು ಮತದಾರರನ್ನು ಭೇಟಿಯಾಗಲಿದ್ದಾರೆ.
ಅಲ್ಲಿಂದ ಬಳಿಕ ಅವರು ಧರ್ಮಸ್ಥಳ, ಪುದುವೆಟ್ಟು, ಕಳೆಂಜ, ಹತ್ಯಡ್ಕ, ಶಿಶಿಲ, ಶಿಬಾಜೆ, ರೆಖ್ಯಾ, ಕೊಕ್ಕಡ, ನಿಡ್ಲೆ, ಪಟ್ರಮೆ, ಬೆಳಾಲು, ಕೊಯ್ಯೂರು, ಬಂದಾರು, ಮೊಗ್ರು, ಇಳಂತಿಲ, ಕಣಿಯೂರು, ಉರುವಾಲು, ತಣ್ಣೀರುಪಂತ, ಕರಾಯ, ಬಾರ್ಯ, ತೆಕ್ಕಾರು, ಪುತ್ತಿಲ, ಮಚ್ಚಿನ, ಪಾರೆಂಕಿ, ಕುಕ್ಕಳ, ಮಾಲಾಡಿ, ಸೋಣಂದರು, ಓಡಿಲ್ನಾಳ ಮತ್ತು ಕುವೆಟ್ಟು ಗ್ರಾಮಗಳಿಗೆ ತೆರಳಿ ಮತಯಾಚಿಸಲಿದ್ದಾರೆ.