ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡು ಮತ ಯಾಚಿಸಲು ಯಾವುದೇ ಸಂಕೋಚವಿಲ್ಲ ಎಂದು ಬಿಜೆಪಿ ಪ್ರಚಾರಕಿ ಮಾಳವಿಕಾ ಅವಿನಾಶ್ ತಿಳಿಸಿದರು.
ಗುರುವಾರ ಪಕ್ಷದ ಚುನಾವಣಾ ಕಚೇರಿಯಲ್ಲಿ ಮಾತನಾಡಿದ ಅವರು, ಎಲ್ಲಾ ಕ್ಷೇತ್ರಗಳಲ್ಲು ಮೋದಿ ಅವರ ಸಾಧನೆಗಳನ್ನು ಹೇಳಿ ಮತ ಪಡೆಯಲಾಗುತ್ತಿದೆ. ದಕ್ಷಿಣ ಕನ್ನಡದಲ್ಲೂ ನಳಿನ್ ಕುಮಾರ್ ಕಟೀಲ್ ಅವರ ಪರವಾಗಿ ಮೋದಿ ಹೆಸರಿನಲ್ಲಿ ಮತ ಕೇಳಲಾಗುತ್ತಿದೆ ಎಂದರು.
ಸ್ಥಳೀಯ ಸಂಸದರ ರಿಪೋರ್ಟ್ ಕಾರ್ಡ್ ಗಳನ್ನು ಪಕ್ಷವು ತರಿಸಿಕೊಂಡಿದೆ. ಅದೇ ರೀತಿ ನಳಿನ್ ಕುಮಾರ್ ಅವರ ಸಾಧನೆಯ ರಿಪೋರ್ಟ್ ಕಾರ್ಡ್ ಕೂಡ ಇದೆ ಎಂದು ಮಾಳವಿಕಾ ಅವಿನಾಶ್ ತಿಳಿಸಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನ್ಯಾಯ್ ಎನ್ನುವ ಯೋಜನೆ ಘೋಷಿಸಿದೆ. ಅಂದರೆ ಇಷ್ಟು ವರ್ಷಗಳಲ್ಲಿ ಕಾಂಗ್ರೆಸ್ ನಿಂದ ಜನರಿಗೆ ಆಗಿರುವುದು ಅನ್ಯಾಯ. ಬಿಜೆಪಿಗೆ ದೇಶ ಮೊದಲು, ಆದರೆ ಕಾಂಗ್ರೆಸ್ ಗೆ ಮತ ಬ್ಯಾಂಕ್ ಮೊದಲು ಎಂದು ಮಾಳವಿಕಾ ಹೇಳಿದರು.