News Kannada
Friday, December 09 2022

ಕರಾವಳಿ

ಸುಳ್ಯದಲ್ಲಿ 231 ಬೂತ್, 2 ಲಕ್ಷ ಮತದಾರರು

Photo Credit :

ಸುಳ್ಯದಲ್ಲಿ 231 ಬೂತ್, 2 ಲಕ್ಷ ಮತದಾರರು

ಸುಳ್ಯ: ಲೋಕಸಭಾ ಚುನಾವಣೆಗೆ ಸುಳ್ಯ ಕ್ಷೇತ್ರದಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ನಾಳೆ ಬೆಳಗ್ಗೆ ಏಳರಿಂದ ಮತದಾನ ಆರಂಭವಾಗಲಿದೆ.

ಸುಳ್ಯ ಕ್ಷೆತ್ರದ ಮಸ್ಟರಿಂಗ್ ಕೇಂದ್ರವಾದ ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದಿಂದ ಬುಧವಾರ ಬೆಳಗ್ಗಿನಿಂದಲೇ ಮತಯಂತ್ರ, ವಿವಿ ಪ್ಯಾಟ್ ಮತ್ತು ಇತರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಗತ್ಯ ಸಾಮಗ್ರಿಗಳೊಂದಿಗೆ ಮಧ್ಯಾಹ್ನದ ವೇಳೆಗೆ ಮತದಾನ ಕೇಂದ್ರಗಳಿಗೆ ತೆರಳಿದರು. ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ಐದು ಮಂದಿಯ ತಂಡ ಮತ್ತು ಭದ್ರತಾ ಸಿಬ್ಬಂದಿಗಳು ಮತಗಟ್ಟೆಗಳತ್ತ ಪ್ರಯಾಣ ಬೆಳೆಸಿದರು.

ಕ್ಷೇತ್ರದ 231 ಮತಗಟ್ಟೆಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ತೆರಳಿದ್ದಾರೆ. 27 ಕೆಎಸ್‍ಆರ್‍ಟಿಸಿ ಬಸ್, 37 ಜೀಪುಗಳು, 25 ವ್ಯಾನ್‍ಗಳು ಸೇರಿದಂತೆ ಒಟ್ಟು 79 ವಾಹನಗಳಲ್ಲಿ ಅಧಿಕಾರಿಗಳು ಮತಗಟ್ಟೆಗಳಿಗೆ ತೆರಳಿದರು. 18 ಮಂದಿ ಸೆಕ್ಟರ್ ಆಫೀಸರ್‍ ಗಳು, ಮೂರು ಫ್ಲೈಯಿಂಗ್ ಸ್ಕ್ವಾಡ್‍ಗಳು, ಮೂರು ವೀಡಿಯೋ ಸರ್ವೇಲೆನ್ಸ್ ತಂಡಗಳು, ಐದು ಕಡೆಗಳಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಅಧಿಕಾರಿಗಳು ಕರ್ತವ್ಯದಲ್ಲಿದ್ದಾರೆ.

ಮತಗಟ್ಟೆಗೆ ತೆರಳುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಚುನಾವಣಾ ಕರ್ತವ್ಯ ಪ್ರಮಾಣ ಪತ್ರವನ್ನು (ಇಡಿಸಿ) ನೀಡಲಾಗಿದ್ದು, ಅವರು ಕರ್ತವ್ಯ ನಿರ್ವಹಿಸುವ ಬೂತ್‍ನಲ್ಲಿಯೇ ಮತದಾನ ಮಾಡಬಹುದು. ಇತರ ಕ್ಷೇತ್ರಗಳ ಮತದಾರರಾಗಿದ್ದು ಇಲ್ಲಿ ಕರ್ತವ್ಯ ನಿರ್ವಹಿಸುವವರಿಗೆ, ವಾಹನಗಳ ಚಾಲಕರಿಗೆ ಮತ್ತು ಚುನವಣಾ ಕರ್ತವ್ಯಕ್ಕೆ ತೆರಳುವ ಪೊಲೀಸ್ ಸಿಬ್ಬಂದಿಗಳಿಗೆ ಅಂಚೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಸುಳ್ಯ ಕ್ಷೇತ್ರದಲ್ಲಿ 1102 ಇಡಿಸಿ ಮತ್ತು 309 ಮಂದಿಗೆ ಅಂಚೆ ಮತದಾನ ನೀಡಲಾಗಿದೆ.

231 ಬೂತ್, 2 ಲಕ್ಷ ಮತದಾರರು:
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 99,631 ಪುರುಷ ಮತ್ತು 1,00948 ಮಹಿಳೆಯರು ಸೇರಿ ಒಟ್ಟು 2,00,579 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 231 ಬೂತ್‍ಗಳಿವೆ. ಇದರಲ್ಲಿ ಗುತ್ತಿಗಾರು ಹಿರಿಯ ಪ್ರಾಥಮಿಕ ಶಾಲೆಯ ಬೂತನ್ನು ಮತ್ತು ಕಡಬ ಹಿರಿಯ ಪ್ರಾಥಮಿಕ ಶಾಲೆ ಬೂತನ್ನು ಮಹಿಳಾ ಮತಗಟ್ಟೆ ಎಂದು ಗುರುತಿಸಲಾಗಿದೆ. ಬಡ್ಡಡ್ಕ ಶ್ರೀ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಬೂತನ್ನು ಪಾರಂಪರಿಕ ಬೂತ್ ಎಂದು ಗುರುತಿಸಲಾಗಿದೆ.

13 ಬೂತ್‍ಗಳಲ್ಲಿ ವೆಬ್‍ಕಾಸ್ಟೀಂಗ್ ಮಾಡಲಾಗುವುದು. ಕ್ರಿಟಿಕಲ್ ಬೂತ್‍ಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಒದಗಿಸಲಾಗುವುದು. 58 ಮೈಕ್ರೋ ಆಬ್ಸರ್‍ವರ್ಸ್‍ನ್ನು ನೇಮಕ ಮಾಡಲಾಗಿದೆ. ವಿಕಲಚೇತನ ಮತದಾರರನ್ನು ಕರೆದೊಯ್ಯಲು ಬೂತ್‍ಗಳಲ್ಲಿ ಗಾಲಿ ಕುರ್ಚಿಗಳು, ವಾಕಿಂಗ್ ಸ್ಟಿಕ್ ನೀಡಲಾಗುವುದು. ಆರು ಕಡೆಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇರುವ ಶ್ಯಾಡೋ ಬೂತ್‍ಗಳಲ್ಲಿ ನೆಟ್‍ವರ್ಕ್ ವ್ಯವಸ್ಥೆ ಕಲ್ಪಿಸಲಾಗಿದೆ. ಸುಳ್ಯ ಕ್ಷೇತ್ರದಲ್ಲಿ ಚುನಾವಣೆಗೆ ಸರ್ವ ಸಿದ್ಧತೆಯನ್ನೂ ಮಾಡಲಾಗಿದೆ ಎಂದು ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಬಿ.ಟಿ.ಮಂಜುನಾಥ್ ತಿಳಿಸಿದ್ದಾರೆ.

ಸುಳ್ಯದಲ್ಲಿ ಬಿಗು ಭದ್ರತೆ
ಸುಳ್ಯ ಕ್ಷೇತ್ರದಾದ್ಯಂತ ಬಿಗು ಭದ್ರತೆಯನ್ನೂ ಏರ್ಪಡಿಸಲಾಗಿದೆ. ಒಬ್ಬರು ಡಿವೈಎಸ್‍ಪಿ, ಮೂರು ಮಂದಿ ಸಿಐಗಳು, 5 ಮಂದಿ ಎಸ್‍ಐಗಳು, 16 ಎಎಸ್‍ಐಗಳು, 50ಮಂದಿ ಹೆಡ್ ಕಾನ್ ಸ್ಟೇಬಲ್‍ಗಳು, 116 ಮಂದಿ ಕಾನ್ ಸ್ಟೇಬಲ್, 110 ಗೃಹ ರಕ್ಷಕ ದಳ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಕೆಎಸ್‍ಆರ್‍ಪಿಯ ಒಂದು ಮತ್ತು ಜಿಲ್ಲಾ ಸಶಸ್ತ್ರ ಪಡೆಯ ಮೂರು ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಕ್ಷೇತ್ರದಲ್ಲಿನ ನಕ್ಸಲ್ ಬಾಧಿತ ಬೂತ್‍ಗಳು ಸೇರಿದಂತೆ ಕ್ರಿಟಿಕಲ್ ಎಂದು ಗುರುತಿಸಲಾಗಿರುವ ಬೂತ್‍ಗಳಲ್ಲಿ ವಿಶೇಷ ಭದ್ರತಾ ವ್ಯವಸ್ಥೆಯನ್ನು ಒದಗಿಸಲಾಗುವುದು. ಮೀಸಲು ಪಡೆಯ ಸಿಬ್ಬಂದಿಗಳು ಮತ್ತು ಪೊಲೀಸ್ ಗೃಹ ರಕ್ಷಕ ದಳ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಪೊಲೀಸ್‍ 18 ಮೊಬೈಲ್ ಸ್ಕ್ವಾಡ್‍ಗಳು ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿವೆ.

See also  ಎರಡನೇ ತರಗತಿ... ಬಾಲಕಿಯ ಅಪಹರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು