News Kannada
Saturday, December 03 2022

ಕರಾವಳಿ

ಲೋಕಸಭೆ ಚುನಾವಣೆಗೆ ಬಂಟ್ವಾಳದಲ್ಲಿ ಮಸ್ಟರಿಂಗ್ ಕಾರ್ಯ ಪೂರ್ಣ

Photo Credit :

ಲೋಕಸಭೆ ಚುನಾವಣೆಗೆ ಬಂಟ್ವಾಳದಲ್ಲಿ ಮಸ್ಟರಿಂಗ್ ಕಾರ್ಯ ಪೂರ್ಣ

ಬಂಟ್ವಾಳ: ನಾಳೆ(ಗುರುವಾರ) ಬೆಳಗ್ಗೆ 7 ಗಂಟೆಯಿಂದ ಆರಂಭಗೊಳ್ಳುವ ಲೋಕಸಭಾ ಚುನಾವಣೆಯ ಮಸ್ಟರಿಂಗ್ ಕಾರ್ಯ ಬುಧವಾರ ಮೊಡಂಕಾಪು ಶಾಲೆಯಲ್ಲಿ ನಡೆಯಿತು.

ರಾಜ್ಯ ಚುನಾವಣಾ ಪರಿವೀಕ್ಷಕರು ಬೆಳಗ್ಗೆಯಿಂದಲೇ ಮೊಡಂಕಾಪುವಿಗೆ ಆಗಮಿಸಿ, ಜಿಪಂ ಸಿಇಒ ಡಾ. ಸೆಲ್ವಮಣಿ, ಎಆರ್‍ಒ ಮಹೇಶ್, ತಹಶೀಲ್ದಾರ್ ಸಣ್ಣ ರಂಗಯ್ಯ ಮತ್ತು ತಾಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರಿಂದ ಮಸ್ಟರಿಂಗ್ ಕಾರ್ಯದ ಮಾಹಿತಿ ಪಡೆದರು.

ಶಾಂತಿಯುತ ಮತದಾನಕ್ಕೆ ಹೆಚ್ಚಿನ ಬಂದೋಬಸ್ತ್ ಕಾರ್ಯಗಳನ್ನು ನಡೆಸಲಾಗಿದೆ. ಯಾವುದೇ ಗೊಂದಲಗಳಿಲ್ಲದೆ ಚುನಾವಣೆ ನಡೆಯಲಿದೆ. ಚುನಾವಣೆಗೆ ತಾಲೂಕು ಆಡಳಿತ ಸಂಪೂರ್ಣವಾಗಿ ಸಜ್ಜಾಗಿದೆ. ಯಾವುದೇ ಬೂತ್‍ಗಳಲ್ಲಿ ಗೊಂದಲಗಳ ನಡೆಯದಂತೆ ಹೆಚ್ಚಿನ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚಿನ ನಿಗಾ ವಹಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ಡಾ.ಸೆಲ್ವಮಣಿ ಮಾಹಿತಿ ನೀಡಿದರು.

ಬಂಟ್ವಾಳದಲ್ಲಿ 2,22,166 ಮತದಾರರು
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,22,166 ಮತದಾರರಿದ್ದು, 1,09,351 ಪುರುಷ ಹಾಗೂ 1,12,810 ಮಹಿಳಾ ಮತದಾರರಿದ್ದು, ಐವರು ಇತರ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 249 ಮತಗಟ್ಟೆಗಳಿವೆ.
ಇವುಗಳಲ್ಲಿ 85 ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳನ್ನಾಗಿ ವಿಂಗಡಿಸಿ ಗುರುತು ಮಾಡಲಾಗಿದೆ. 35 ಮತಗಟ್ಟೆಗಳಲ್ಲಿ ಮೈಕ್ರೋ ಅಫೀಸರ್‍ ಗಳನ್ನು ನೇಮಕ ಮಾಡಲಾಗಿದೆ. ಅದೇ ರೀತಿ 17 ಕಡೆಗಳಲ್ಲಿ ನೇರವಾಗಿ ವೆಬ್ ಕಾಸ್ಟಿಂಗ್ ಸಿಸ್ಟೆಮ್ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ವಿಶೇಷವಾಗಿ 15 ಮತಗಟ್ಟೆಗಳ ಕಡೆಗಳಲ್ಲಿ ಪೂರ್ಣ ಪ್ರಮಾಣದ ವೀಡಿಯೋಗ್ರಾಫರ್‍ ಗಳನ್ನು ನೇಮಿಸಲಾಗಿದೆ ಎಂದು ಎಆರ್‍ಒ ಮಹೇಶ್ ಮಾಹಿತಿ ನೀಡಿದರು.

ಬಂಟ್ವಾಳದ ಬೂತ್ ನಂ. 61 ಅನ್ನು ಪಿಂಕ್ ಬೂತ್ ಎಂದು ಪರಿಗಣಿಸಿ ಅಲ್ಲಿಗೆ ವಿಶೇಷವಾಗಿ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ.

ಪ್ರತಿ ಬೂತ್‍ಗಳಲ್ಲಿ ಬಿಎಲ್‍ಒ ಹಾಗೂ ಬೂತ್ ಲೆವಲ್ ಅಸಿಸ್ಟೆಂಟ್ ಅನ್ನು ನೇಮಕ ಮಾಡಲಾಗಿದೆ. ವಿಶೇಷ ಚೇತನರಿಗೆ ವೀಲ್ ಚೇರ್ ಕೂಡಾ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿರುವ ಸಿಬ್ಬಂದಿಗಳಿಗೆ ನೀರಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಜೊತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಬಂಟ್ವಾಳ ಕ್ಷೇತ್ರದ 249 ಮತಗಟ್ಟೆಗಳಿಗೆ ಮತಗಟ್ಟೆಯ ಸಿಬ್ಬಂದಿಗಳು ಮತದಾನ ಪ್ರಕ್ರಿಯೆಗೆ ಬೇಕಾದ ಇವಿಎಂ ಯಂತ್ರಗಳ ಸಹಿತ ನಾನಾ ಸಿದ್ಧತೆಗಳನ್ನು ಪರಿಶೀಲಿಸಿ ತಮ್ಮ ಬೂತ್‍ಗಳಿಗೆ ತೆರಳಿದರು.

ಬಂಟ್ವಾಳ ಎಎಸ್ಪಿ ಅವರ ನೇತೃತ್ವದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು.

See also  ಲುಂಗಿ ಡಾನ್ಸ್ ಹಾಡಿಗೆ ಹೆಜ್ಜೆಹಾಕಿದ ಪೊಲೀಸ್ ಅಧಿಕಾರಿಗಳು, ಗೃಹಸಚಿವ ಬೊಮ್ಮಾಯಿಯಿಂದ ಮೆಚ್ಚುಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು