News Kannada
Tuesday, November 29 2022

ಕರಾವಳಿ

‘ಸ್ವಚ್ಛ ಮಂಗಳೂರು’ ಕನಸು: ಮದುವೇ ದಿನವೂ ಶ್ರಮದಾನದಲ್ಲಿ ಭಾಗಿಯಾದ ಜೋಡಿ - 1 min read

Photo Credit :

‘ಸ್ವಚ್ಛ ಮಂಗಳೂರು’ ಕನಸು: ಮದುವೇ ದಿನವೂ ಶ್ರಮದಾನದಲ್ಲಿ ಭಾಗಿಯಾದ ಜೋಡಿ

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ ಭಾನುವಾರ ಕಾರ್ಯಕ್ಕೆ ದಾಂಪತ್ಯ ವಧು-ವರ ಚಾಲನೆ ನೀಡಿದ್ದಾರೆ.

ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಶಿವು ಪುತ್ತೂರು ಹಾಗು ಸುಮ ಕೋಡಿಕಲ್ ಕಳೆದ ನಾಲ್ಕು ವರ್ಷಗಳಿಂದ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸುತ್ತಿದ್ದರು. ಇಂದು ಮದುವೆಯ ದಿನವೂ ಶ್ರಮದಾನದಲ್ಲಿ ಭಾಗವಹಿಸುವುದರ ಮೂಲಕ ಅನೇಕ ಜನರಿಗೆ ಸ್ಥೂರ್ತಿಯಾದರು.

ಈ ದಿನ ಸ್ವಾಮಿ ಏಕಗಮ್ಯಾನಂದಜಿ ಸಮ್ಮುಖದಲ್ಲಿ ವಧುವರರು 21ನೇ ಶ್ರಮದಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸುಮ ಕೋಡಿಕಲ್ ಮಾತನಾಡಿ “ಸ್ವಚ್ಛ ಮಂಗಳೂರು ನಮ್ಮ ಕನಸು! ಆ ಕನಸು ನನಸಾಗಬೇಕಾದರೆ ಎಲ್ಲರ ಶ್ರಮ ಅಗತ್ಯ ಮತ್ತು ಸ್ವಚ್ಛ ಮಂಗಳೂರು ಆದಷ್ಟು ಬೇಗ ಸಾಕಾರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾಲ್ಕು ವರ್ಷಗಳಿಂದ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಪಾಲ್ಗೊಂಡ ಧನ್ಯತಾ ಭಾವವಿದೆ. ಭಾನುವಾರಗಳಂದು ತಪ್ಪದೇ ಭಾಗವಹಿಸುತ್ತಿದ್ದ ನಾವು ಮದುವೆಯ ದಿನವೂ ಶ್ರಮದಾನದಲ್ಲಿ ಸ್ವಲ್ಪ ಮಟ್ಟಿಗಾದರೂ ಸಮಯ ಕಳೆಯಬೇಕೆಂದು ನಮ್ಮ ಅಭಿಲಾಶೆಯಾಗಿತ್ತು. ಶ್ರಮದಾನಕ್ಕೆ ಚಾಲನೆ ಕೊಡುವ ಸೌಭಾಗ್ಯ ನಮ್ಮದಾಗಿರುವುದು ಪುಣ್ಯ” ಎಂದು ಸ್ಮರಿಸಿಕೊಂಡರು.

ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಮಾತನಾಡಿ “ಸಜ್ಜನರ ನಿಷ್ಕ್ರಿಯತೆ, ದುರ್ಜನರ ಕ್ರಿಯಾಶೀಲತೆಗಿಂತ ಹೆಚ್ಚು ಅಪಾಯಕಾರಿ ಎಂಬ ಮಾತಿನ ಹಿನ್ನಲೆಯಲ್ಲಿ ಸಾಮಾಜಿಕ ಕಾಳಜಿಯುಳ್ಳ ವ್ಯಕ್ತಿಗಳನ್ನು ಒಗ್ಗೂಡಿಸಿ ರಾಷ್ಟ್ರ ನಿರ್ಮಾಣದ ಕೈಂಕರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತಿರುವ ರಾಮಕೃಷ್ಣ ಮಿಷನ್ ಎಲ್ಲರಿಗೂ ಮಾದರಿ. ಮದುವೆಯ ದಿನವೂ ಸ್ವಯಂಸೇವಕರು ಶ್ರಮದಾನದಲ್ಲಿ ಭಾಗವಹಿಸುತ್ತಿರುವುದು ಅವರ ಕಾಳಜಿ ಹಾಗೂ ಬದ್ಧತೆಯನ್ನು ಎತ್ತಿತೋರಿಸುತ್ತದೆ. ಅಂತಹ ಮನೋಭಾವವನ್ನು ಭಾರತೀಯರು ಪ್ರದರ್ಶಿಸಿದರೆ ಭಾರತ ವಿಶ್ವವಂದ್ಯವಾಗುವುದರಲ್ಲಿ ಸಂಶಯವಿರುವುದಿಲ್ಲ” ಎಂದು ತಿಳಿಸಿ ಕಾರ್ಯಕರ್ತರಿಗೆ ಶುಭಾಶಯ ಹೇಳಿದರು. ವಿಶೇಷ ಅಹ್ವಾನಿತರಾಗಿ ವೃಷಾಂಕ್ ಭಟ್ ಸಂಪಾದಕರು ವಿಕ್ರಮ ವಾರಪತ್ರಿಕೆ ಬೆಂಗಳೂರು ಇವರು ಶ್ರಮದಾನದಲ್ಲಿ ಭಾಗವಹಿಸಿದರು. ಇನ್ನುಳಿದಂತೆ ಸ್ವಚ್ಛ ಸುರತ್ಕಲ್ ಅಭಿಯಾನದ ಸಂಚಾಲಕ ಡಾ. ರಾಜಮೋಹನ್ ರಾವ್, ಸತೀಶ್ ಸದಾನಂದ, ಶ್ರೀನಿವಾಸ್ ರಾವ್, ಸುಧಾ ಮಂಜುನಾಥ್, ಶಶಿಭೂಷಣ, ಯೋಗೀಶ್ ಪ್ರಭು, ಸುನೀಲ್ ಕುಮಾರ್ ಪಾಂಡೇಶ್ವರ್, ರಾಮಕೃಷ್ಣ ಕೊಟ್ಟಾರ, ಕುದ್ರೋಳಿ ಗಣೇಶ್ ಮತ್ತಿತರರು ಶ್ರಮದಾನ ಮಾಡಿದರು.
ಸ್ವಚ್ಛತಾ ಕಾರ್ಯ: ಪ್ರಥಮವಾಗಿ ವಧುವರರು ಪೊರಕೆ ಹಿಡಿದು ಉರ್ವಾ ಮುಖ್ಯ ರಸ್ತೆಯ ಬದಿಯನ್ನು ಸ್ವಚ್ಛಗೊಳಿದರು. ಬಳಿಕ ಕಾರ್ಯಕರ್ತರು ನಾಲ್ಕು ತಂಡಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಗಾಂಧಿನಗರ 4ನೇ ಅಡ್ಡರಸ್ತೆ, ಗಾಂಧಿನಗರ ಸರ್ಕಾರಿ ಶಾಲೆಯ ಮುಂಭಾಗ, ಪೆಟ್ಲಾಮ್‍ಪೆಟ್ ವೃತ್ತದ ಸುತ್ತಮುತ್ತ ಹಾಗೂ ಉರ್ವಾ ಮುಖ್ಯರಸ್ತೆಗಳ ಚರಂಡಿ, ಕಾಲುದಾರಿ ಹಾಗೂ ಮಾರ್ಗವಿಭಾಜಕಗಳನ್ನು ಸ್ವಚ್ಛಗೊಳಿಸಲಾಯಿತು.

See also  ಡಾ.ಹೆಗ್ಗಡೆಯವರಿಗೆ ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು